ನ್ಯೂಸ್

ಬೋಧನಾ ಕಾರ್ಯಕ್ರಮ ಉದ್ಘಾಟನೆ

ಧಾರವಾಡ: ಭವಿಷ್ಯದ ಪದವೀಧರರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಧಾರವಾಡದ ಎಸ್‌ಡಿಎಂಇ ಕಾರ್ಯದರ್ಶಿ ಜೀವಂಧರ್ ಕುಮಾರ ಹೇಳಿದರು.

ಧಾರವಾಡದ ಎಸ್‌ಡಿಎಂ ಕಾಲೇಜ್ ಆ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಸೋಮವಾರ ಆಯೋಜಿಸಿದ್ದ ‘ಶಿಕ್ಷಣಶಾಸ ಮತ್ತು ವೃತ್ತಿಪರ ಬೆಳವಣಿಗೆ’ ವಿಷಯದ 5 ದಿನಗಳ ಬೋಧನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೋಧನೆಯಲ್ಲಿ ಸಕ್ರಿಯ ಕಲಿಕೆಯ ತಂತ್ರಗಳು, ಅಂತರಶಿಸ್ತೀಯ ಸಹಯೋಗ ಮತ್ತು ತಂತ್ರಜ್ಞಾನ ಏಕೀಕರಣದ ಅಗತ್ಯ ಕುರಿತು ವಿವರಿಸಿದರು.

ಪ್ರಾಚಾರ್ಯ ಡಾ.ರಮೇಶ ಚಕ್ರಸಾಲಿ, ವಿಕಸನಗೊಳ್ಳುತ್ತಿರುವ ಬೋಧನಾ ವಿಧಾನಗಳನ್ನು ತಿಳಿಸಿದರು. ಅಕಾಡೆಮಿಕ್ ಪ್ರೋಗ್ರಾಂನ ಡೀನ್ ಡಾ.ವಿಜಯಾ ಸಿ. ಅವರು, ನವೀನ ಬೋಧನೆ ಮತ್ತು ವೃತ್ತಿಪರ ಕೌಶಲವರ್ಧನೆ ಬಗ್ಗೆ ತಿಳಿಸಿದರು. ಡಾ.ಲೋಕೇಶ್ವರಿ ಎನ್., ಪ್ರೊ.ಇಂದಿರಾ ಉಮರ್ಜಿ, ಪ್ರೊ.ಸುಮಂಗಲಾ ಬಿ. ಪ್ರಾರ್ಥಿಸಿದರು. ಐದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದ ಖ್ಯಾತ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.