ತುಮಕೂರು: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ಬೈಕ್ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಗರದ ಶ್ರೀರಾಜ್ ಟಾಕೀಸ್ ಮುಂಭಾಗ ಸಂಭವಿಸಿದೆ.
ಅರಸೀಕೆರೆ ತಾಲೂಕು ಶಿಶುವಾಳದ ಕಾಂತರಾಜು(30) ಮೃತ ಯುವಕ, ಬೈಕ್ ಓಡಿಸುತ್ತಿದ್ದ ಅರಸೀಕೆರೆ ತಾಲೂಕು ದುಮ್ಮನಹಳ್ಳಿಯ ಹರ್ಷವರ್ಧನ(30) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಸ್ನೇಹಿತರು ಬೆಂಗಳೂರಿನಿAದ ಅರಸೀಕೆರೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಅಪಘಾತಕ್ಕೆ ಕಾರಣವಾದ ಮಹೇಂದ್ರ ಲಾರಿ ಚಾಲಕಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.