ಕುವೆಂಪು ರಂಗಮಂದಿರದಲ್ಲಿ ಸರ್ಜಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ್ ಸರ್ಜಿ ಅವರು ಸ್ಟೈಲ್ ಡ್ಯಾನ್ಸ್ ಕ್ರೀವ್ ಸಂಸ್ಥೆಯ 15ನೇ ವಾರ್ಷಿಕೋತ್ಸವ ಹಾಗೂ ಮಜಾ ವಿತ್ ರಜಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿದರು. 
ನ್ಯೂಸ್

ಬೇಸಿಗೆ ಶಿಬಿರದಲ್ಲಿ ಮಕ್ಕಳು ಕೌಶಲಕ್ಕೆ ಮಿತಿಯಿಲ್ಲ

ಶಿವಮೊಗ್ಗ: ಬೇಸಿಗೆ ಶಿಬಿರದಲ್ಲಿ ಮಕ್ಕಳ ಬದುಕಿನ ಮೌಲ್ಯ ವೃದ್ಧಿಗೆ ಪೂರಕವಾದ ವಿಚಾರ ಮತ್ತು ಕೌಶಲಗಳನ್ನು ಕಲಿಯಲು ಸಾಧ್ಯವಾಗುತ್ತದೆ ಎಂದು ಸರ್ಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಧನಂಜಯ್ ಸರ್ಜಿ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಗುರುವಾರ ಸ್ಟೈಲ್ ಡ್ಯಾನ್ಸ್ ಕ್ರೀವ್ ಸಂಸ್ಥೆಯ 15ನೇ ವಾರ್ಷಿಕೋತ್ಸವ ಹಾಗೂ ಮಜಾ ವಿತ್ ರಜಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜೀವನದ ಯಶಸ್ಸಿಗೆ ಶಿಕ್ಷಣವೇ ಕೀಲಿಕೈ, ಮಕ್ಕಳು ಗಳಿಸುವ ಕೌಶಲಕ್ಕೆ ಮಿತಿಯಿಲ್ಲ. ಮಕ್ಕಳಿಗೆ ಅವಕಾಶ ಕಲ್ಪಿಸಿದರೆ ಅವರ ಗುರಿ ಸಾಧನೆಗೆ ಸಹಕಾರಿಯಾಗುತ್ತದೆ. ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಅದರ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಅವಕಾಶಗಳನ್ನು ಕಲ್ಪಿಸುವ ಮೂಲಕ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಕೆ.ಇ.ಕಾಂತೇಶ್, ಉಪಾಧ್ಯಕ್ಷ ಇ.ವಿಶ್ವಾಸ್, ಸಲಹೆಗಾರರಾದ ಸಿಂಪ್ಲೆಕ್ಸ್ ರಮೇಶ್, ಸಂಸ್ಥಾಪಕ ಎನ್.ಶಶಿಕುಮಾರ್, ಮುಖ್ಯ ನಿರ್ದೇಶಕ ಎನ್.ಅಜಯ್ಕುಮಾರ್, ಆರ್.ರಂಗನಾಥ್, ಎಂ.ಜಿ.ವಿನಯ್, ದರ್ಶನ್, ಸಾಥ್ವಿಕ್, ಜಿತೇಂದ್ರ ಇದ್ದರು.