ನ್ಯೂಸ್

ಬೇತಮಂಗಲ-ಕೋಲಾರ ಮುಖ್ಯ ರಸ್ತೆ ಡಾಂಬರೀಕರಣಕ್ಕಾಗಿ ಜೈ ಭೀಮ್ ಸಂಘಟನೆಯ ಒತ್ತಾಯ/ ಒಂದು ವಾರದೊಳಗೆ ಅಭಿವೃದ್ಧಿಪಡಿಸದಿದ್ದರೆ ಹಂತ ಹಂತವಾಗಿ ಹೋರಾಟ/ ಶ್ರೀನಿವಾಸ್

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆಯ ರಸ್ತೆಯನ್ನು ಈ ಕೂಡಲೇ ಡಾಂಬರೀಕರಣಗೋಳಿಸಲು ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆಯ ಸಂಸ್ಥಾಪಕಾಧ್ಯಕ್ಷ ಜೈ ಭೀಮ್ ಶ್ರೀನಿವಾಸ್ ಶನಿವಾರ ಆಗ್ರಹಿಸಿದರು.

ಪಟ್ಟಣದಿಂದ ಕೋಲಾರಕ್ಕೆ ಮುಖ್ಯ ಸಂಪರ್ಕ ರಸ್ತೆಯ ಡಾಂಬರೀಕರಣ ಕಿತ್ತು ಹೋಗಿ ಅನೇಕ ವರ್ಷಗಳು ಕಳೆಯುತ್ತಿದ್ದರೂ, ಈ ಬಗ್ಗೆ ಆಡಳಿತಾರೂಡ ಕಾಂಗ್ರೆಸ್ ಶಾಸಕರೇ ಇದ್ದರೂ ಈ ರಸ್ತೆಯ ದುಸ್ಥಿತಿಯನ್ನು ಸರಿಪಡಿಸದಿರುವುದು ನಮ್ಮ ದುರ್ದೈವೆಂದು ಬೇಸರ ವ್ಯಕ್ತಪಡಿಸಿದರು.

ಕೆಜಿಎಫ್ ಕ್ಷೇತ್ರದಿಂದ ಬಂಗಾರಪೇಟೆ ನಂತರ ಕೋಲಾರ ಮೂವರು ಶಾಸಕರ ವ್ಯಾಪ್ತಿಗೆ ಒಳಪಡುವ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳು ಮೀನಾಮೇಷ ಎನಿಸುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಕೆಜಿಎಫ್ ಹಾಗೂ ಬಂಗಾರಪೇಟೆ ಕ್ಷೇತ್ರ ಶಾಸಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಗುಂಡಿಗಳು ಬಿದಿದ್ದು. ಕೋಲಾರ ಕ್ಷೇತ್ರದ ಕೆಲವು ಹಳ್ಳಿಗಳಿಗೆ ಮಾತ್ರ ಡಾಂಬರೀಕರಣ ಬಾಕಿ ಇದ್ದು, ಇನ್ನುಳಿದಂತೆ ಕೋಲಾರ ವ್ಯಾಪ್ತಿಯಲ್ಲಿ ರಸ್ತೆಗೆ ಡಾಂಬರೀಕಣಗೊಳಿಸಲಾಗಿದೆ ಎಂದು ತಿಳಿಸಿದರು.

ಕೋಲಾರ-ಬೇತಮಂಗಳ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ರೋಗಿಗಳು, ರೈತರ ಸರಕು ಸಾಗಾಟ, ನಿತ್ಯ ನರಸಾಪುರ ಕಾರ್ಖಾನೆಗೆ ತೆರಳುವ ನೂರಾರು ಯುವಕರು, ಯುವತಿಯರು, ವಿದ್ಯಾರ್ಥಿಗಳು ಇದೇ ರಸ್ತೆಯನ್ನು ಅವಲಂಭಿಸಿದ್ದು. ಜಿಲ್ಲಾ ಕೇಂದ್ರಕ್ಕೆ ಪ್ರಯಾಣಿಸಲು ತೊಂದರೆಯಾಗುತ್ತಿದ್ದು ಇದರಿಂದ ಅನೇಕ ಮಂದಿ ಅಪಘಾತಕ್ಕೆ ಈಡಾಗಿ ಕೈ ಕಾಲು ಕಳೆದುಕೊಂಡಿರುವ ಘಟನೆಗಳು ನಡೆದಿವೆ ಎಂದು ಖಂಡಿಸಿದರು.

ನೆನ್ನೆಯಷ್ಟೇ ದಲಿತ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಿ ನಮಗೆ ಸೇರಬೇಕಾದ ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದು, ಪುನಃ ಹಿಂತಿರುಗಿಸಲು ಹೋರಾಟ ಮಾಡಿದ್ದೇವು, ಕೂಡಲೇ ಈ ರಸ್ತೆಗೆ ಡಾಂಬರೀಕರಣಗೊಳಿಸದಿದ್ದಲ್ಲಿ ಮೂವರು ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗುಂಡಿ ತುಂಬ ಮಳೆ ನೀರು:
ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಾಂತ ಉತ್ತಮ ಮಳೆಯಾಗಿದ್ದು, ಬೇತಮಂಗಲ-ಕೋಲಾರ ಮುಖ್ಯ ರಸ್ತೆಯಲ್ಲಿನ ಹಳ್ಳಗಳು ಮೊಣಕಾಲುದ್ದದ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊAಡಿದ್ದು, ರಸ್ತೆ ಯಾವುದು, ಹಳ್ಳ ಯಾವುದೆಂದು ತಿಳಿಯದೆ ವಾಹನ ಸವಾರರು ಹರಸಾಹಸ ಪಡುವಂತ್ತಾಗಿದೆ. ವಾಹನ ಸವಾರರಿಗೆ ಪ್ರಾಣಾಪಾಯ ಆಗುವ ಮುನ್ನ ಪಿಡಬ್ಲೂö್ಯಡಿ ಇಲಾಖೆ ಅಧಿಕಾರಿಗಳು ಕನಿಷ್ಠ ಗುಂಡಿ ಮುಚ್ಚುವ ಗೋಜಿಗೂ ಹೋಗದಿರುವುದು ನೋವಿನ ಸಂಗತಿ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ನೂತನ ಸಂಸದರು ಗಮನಹರಿಸಲಿ:
ನೂತನ ಸಂಸದರು ಅಭಿವೃದ್ಧಿ ಮಾಡುತ್ತಾರೆಂದು ವಿಶ್ವಾಸವಿಟ್ಟುಕೊಂಡು ಮತ ನೀಡಿದ ಜಿಲ್ಲೆಯ ಮತದಾರರಿಗೆ ಏನು ಸಂದೇಶ ನೀಡುವಿರಿ? ಈ ವಾರದಲ್ಲಿ ನೀವು ಬೇಟಿ ನೀಡಿ ಡಾಂಬರೀಕರಣಕ್ಕೆ ಒತ್ತು ನೀಡದಿದ್ದಲ್ಲಿ ಪ್ರಯಾಣಿಕರೊಂದಿಗೆ ರಸ್ತೆ ತಡೆ ಮಾಡುತ್ತೇವೆಂದು ಸಂಸದ ಮಲ್ಲೇಶ್ ಬಾಬು ಅವರಿಗೆ ಎಚ್ಚರಿಕೆ ನೀಡಿದರು.

ಸಂಘಟನೆಯ ಕೆಜಿಎಫ್ ತಾಲೂಕು ಅಧ್ಯಕ್ಷ ಕಣ್ಣೂರು ರಾಜೇಶ್ ಸಂಘಟಣೆಯ ಪದಾದಿಕಾರಿಗಳು ಹಾಜರಿದ್ದರು.

ಚಿತ್ರ ೧೦. ಕೆ.ಎಲ್.ಆರ್. ೦೧ ಬೇತಮಂಗಲ-ಕೋಲಾರ ಮುಖ್ಯ ರಸ್ತೆಯ ಪಟ್ನ ದಿಂದ ಚಾಮರಹಳ್ಳಿಯ ತನಕ ಡಾಂಬರೀಕರಣ ಅವ್ಯವಸ್ಥೆ ಬಗ್ಗೆ ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆಯ ಸಂಸ್ಥಾಪಕಾಧ್ಯಕ್ಷ ಜೈ ಭೀಮ್ ಶ್ರೀನಿವಾಸ್ ಮತ್ತು ಕಣ್ಣೂರು ರಾಜೇಶ್ ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.