ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಛಾಯಾಗ್ರಾಹಕರು ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಸಾಂಕೇತಿಕವಾಗಿ ಪ್ರತಿಭಟಿಸಿ, ಉಪವಿಭಾಗಾಧಿಕಾರಿ ವಿ.ಪ್ರಸನ್ನಗೆ ಗುರುವಾರ ಮನವಿ ಸಲ್ಲಿಸಿದರು. ಕರೊನಾ ಲಾಕ್‌ಡೌನ್‌ನಿಂದಾಗಿ ಛಾಯಾಗ್ರಾಹಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಅನ್‌ಲಾಕ್ ಆಗಿದ್ದರೂ ಪರಿಸ್ಥಿತಿಯಲ್ಲಿ ಯಾ ವುದೇ ಆಶಾದಾಯಕ ಬೆಳವಣಿಗೆಗಳು ಕಂಡು ಬರುತ್ತಿಲ್ಲ. ಇದರಿಂದಾಗಿ ಕುಟುಂಬ ನಿರ್ವಹಣೆ ದುರ್ಬರವಾಗುತ್ತಿದೆ.
ಲಾಕ್‌ಡೌನ್ ಹಾಗೂ ನೆರೆ ಸಂತ್ರಸ್ಥ ಪ್ರದೇಶದ ಛಾಯಾಗ್ರಾಹಕರ ನೆರವಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಪ್ರತಿಯೊಬ್ಬರಿಗೂ ಕಾರ್ಮಿಕ ಇಲಾಖೆಯಿಂದ ನಾನಾ ಯೋಜನೆಗಳಡಿ ಸವಲತ್ತು ಹಾಗೂ ಸ್ಮಾರ್ಟ್‌ಕಾರ್ಡ್ ಕೊಡಿಸಬೇಕು. ಕರ್ನಾಟಕ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಬೇಕು.
ಕರ್ನಾಟಕ ಪೋಟೊಗ್ರಾಫರ್ಸ್ ಅಸೋಷಿಯೇಷನ್(ಕೆಪಿಎ)ಛಾಯಾ ಭವನದ ನಿರ್ಮಾಣಕ್ಕಾಗಿ ಬೆಂಗಳೂರಲ್ಲಿ ನಿವೇಶನ ಒದಗಿಸು ವುದು. ಬ್ಯಾಂಕ್‌ಗಳಿಂದ ಸಾಲದ ನೆರವು. ಸರ್ಕಾರಿ ಕೆಲಸಗಳಲ್ಲಿ ವೃತ್ತಿಪರರಿಗೆ ಆದ್ಯತೆ. ಸರ್ಕಾರಿ ಕಚೇರಿಗಳಲ್ಲಿ ವೆಬ್ ಕ್ಯಾಮರಾದ ಬದಲು ವೃತ್ತಿಪರರನ್ನು ನೇಮಿಸಬೇಕು.
ಆರೋಗ್ಯ ವಿಮೆ ಸವಲತ್ತು, ಚುನಾವಣೆ ವೇಳೆ ಕರ್ತವ್ಯಕ್ಕಾಗಿ ಸಂಘ ಗುರುತಿಸಿದವರನ್ನು ನೇಮಿಸುವುದು. ಬಡ ವೃತ್ತಿ ನಿರತರಿಗೆ ನಿವೇಶನ,ವಸತಿ ಸವಲತ್ತು ಪಿಂಚಣಿ ಹಾಗೂ ಆರ್‌ಟಿಇ ಸೌಲಭ್ಯಗಳ ಸಹಿತ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಛಾಯಾ ಗ್ರಾಹಕರ ಸಂಘದ ಜಿಲ್ಲಾ ಮತ್ತು ತಾಲೂಕು ಸಂಘದ ಪ್ರಮುಖರಾದ ದ್ವಾರಕನಾಥ್,ಮುನ್ನ,ನಾಗೇಶ್,ಪ್ರಕಾಶ್‌ಪೈಲೆಟ್, ಚಂದ್ರು,ಕರಿಂವುಲ್ಲಾ, ಜಾವಿದ್,ಶಶಿಧರ್,ಮೋಹನ್ ಮತ್ತಿತರರು ಇದ್ದರು.