ನ್ಯೂಸ್

ಬೇಜವಾಬ್ದಾರಿ ಪೌರಾಯುಕ್ತಗೆ ಅಮಾನತು ಮಾಡಿ

ಹೊಸಪೇಟೆ: ಕರ್ತವ್ಯ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿದ ಪೌರಾಯುಕ್ತರ ಚಂದ್ರಪ್ಪ ವಿರುದ್ಧ ಪಕ್ಷಾತೀತವಾಗಿ ಚುನಾಯಿತ ಸದಸ್ಯರು ಇಲ್ಲಿನ ನಗರಸಭೆ ಮುಂದೆ ಸೋಮವಾರ ಅಣಕು ಶವ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಿದರು.

ಸದಸ್ಯರು ಯಾವುದೇ ಸಮಸ್ಯೆಗಳು ಪರಿಹರಿಸುವಂತೆ ಬೇಡಿಕೊಂಡರು ಪೌರಾಯುಕ್ತ ನಿರ್ಲಕ್ಷ್ಯ ತೊರುತ್ತಾರೆ. ರಸ್ತೆ, ಚರಂಡಿ, ಕಲುಷಿತ ನೀರು, ರಸ್ತೆಯಲ್ಲಿ ಗುಂಡಿ ಮುಚ್ಚುವು ಸೇರಿದಂತೆ ಯಾವುದೆ ಸಣ್ಣಪುಟ್ಟ ಕೆಲಸವನ್ನು ಮಾಡದೆ ಬೇಜವಾಬ್ದಾರಿ ತೊರುತ್ತಿರುತ್ತಾರೆ. ಇತ್ತೀಚೆಗೆ ಅನಂತಶಯನಗುಡಿಯಲ್ಲಿ ವಿರಾಟ್ ಎಂಬ ನಾಲ್ಕು ವರ್ಷದ ಮಗು ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದೆ. ಕೆಲ ದಿನಗಳ ಹಿಂದೆ ಚಿತ್ತವಾಡ್ಗಿಯಲ್ಲಿ ನಾಯಿ ದಾಳಿಗೆ ಮಗುವಿನ ಮುಖವೇ ಕಿತ್ತು ಹೋಗಿತ್ತು. ಹಲವು ಅವಘಡಗಳು ನಡೆಯುತ್ತಲೇ ಇದೆಇದೆ. ಇದಕ್ಕೆಲ್ಲ ಪೌರಾಯುಕ್ತರ ನಿರ್ಲಕ್ಷವೇ ಕಾರಣವಾಗಿದೆ. ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯುವ ಕಾರ್ಯ ನಡೆಯುತ್ತಿಲ್ಲ. ಹಲವು ಕಡೆ ಖಾಲಿ ಜಾಗದಲ್ಲಿ ದೊಡ್ಡ ದೊಡ್ಡ ಗುಂಡಿಗಳಿವೆ. ಚರಂಡಿಗಳು ತೆರೆದಿವೆ. ಮಳೆ ಬಂದು ಸಾಕಷ್ಟು ಅನಾಹುತಗಳಾಗುತ್ತಿವೆ. ಅಮಾಯಕ ಜೀವ ಬಲಿಯಾಗುತ್ತಿವೆ. ಇದಕ್ಕೆ ಹೊಣೆ ಯಾರು? ಇದು ಪ್ರವಾಸೋದ್ಯಮ ಕೇಂದ್ರವಾಗಿದೆ. ಸಾಮಾನ್ಯ ಸಭೆಯಲ್ಲಿ ಪ್ರತಿದಿನ ಪೌರಾಯುಕ್ತರಿಗೆ ಜನರ ಸಮಸ್ಯೆಗಳಿಗಾಗಿ ಚುನಾಯಿತ ಸದಸ್ಯರು ಬೇಡಿಕೊಂಡರು ಕೆಲಸಗಳು ಆಗುತ್ತಿಲ್ಲ. ಮಳೆ ಬಂದರೆ ಸಾಕು ಮನೆಗಳ ಅಂಗಳ ಕೆರೆಯಂತಾಗುತ್ತವೆ.

ತೊಲಗಲಿ ತೊಲಗಲಿ ಪೌರಾಯುಕ್ತರು ತೊಲಗಲಿ, ಧಿಕ್ಕಾರ ಧಿಕ್ಕಾರ ಪೌರಾಯುಕ್ತರಿಗೆ ಧಿಕ್ಕಾರ. ಇದೀಗ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿ ಆಗಿರುವುದರಿಂದ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು. ಮೃತ ಮಗುವಿನ ಕುಟುಂಬಕ್ಕೆ 5 ಲಕ್ಷ ರೂ. ನೀಡಬೇಕು. ಪೌರಾಯುಕ್ತರನ್ನು ವಜಾ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸದಸ್ಯರಾದ ಎಲ್.ಎಸ್.ಆನಂದ, ಗೌಸ್, ರೂಪೇಶ ಕುಮಾರ, ಮಂಜುನಾಥ, ರೋಹಿಣಿ ವೆಂಕಟೇಶ, ಮೊಮತಾಜ್ ಬೇಗಂ, ಜೀವರತ್ನಮ್, ಪ್ರಮುಖರಾದ ಜಗದೀಶ ಕಾಮಟಗಿ, ಮಲ್ಲಿಕಾರ್ಜುನ, ವೆಂಕಟೇಶ, ದಾದಪೀರ್ ಇತರರಿದ್ದರು.