ನ್ಯೂಸ್

ಬೆಳ್ಳಾರೆ ಬಳಿಟಿಂಬರ್ ಲಾರಿ ಪಲ್ಟಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಬಳಿಯ ಕಾವಿನಮೂಲೆ ಎಂಬಲ್ಲಿ ಗುರುವಾರ ರಾತ್ರಿ ಟಿಂಬರ್ ಲಾರಿ ಪಲ್ಟಿಯಾಗಿದೆ.

ರಬ್ಬರ್ ಮರಗಳನ್ನು ಹೇರಿಕೊಂಡು ಬೆಳ್ಳಾರೆ ಕಡೆಯಿಂದ ಸುಳ್ಯದ ಕಡೆಗೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಮರಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.