ನ್ಯೂಸ್

ಬೆಳಗಾವಿ ನಗರ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವೆ- ಮೇಯರ್ ಶೋಭಾ ಸೋಮನಾಚೆ

ಬೆಳಗಾವಿ: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವೆ ಎಂದು ನೂತನ ಮೇಯರ್ ಶೋಭಾ ಸೋಮನಾಚೆ ಹೇಳಿದರು. ಮೇಯರ್, ಉಪಮೇಯರ್ ಚುನಾವಣೆ ಬಳಿಕ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ನಗರದ ಅಭಿವೃದ್ಧಿ ವಿಚಾರದಲ್ಲಿ ಭಾಷೆ, ಪಕ್ಷ ಭೇದ ಇಲ್ಲದೆ ಅಧಿಕಾರ ನಡೆಸುತ್ತೇವೆ. ನಗರದ ನಾಗರಿಕರು ಸಹಕಾರ ನೀಡಬೇಕು ಎಂದು ಕೋರಿದರು.

ಬಳಿಕ ಪಾಲಿಕೆ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಚನ್ನಮ್ಮ ಪುತ್ಥಳಿಗೆ, ನಗರದಲ್ಲಿನ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಿಜೆಪಿ ಜಿಲ್ಲಾ ಉಸ್ತುವಾರಿ ನಿರ್ಮಲಕುಮಾರ್ ಸುರಾನಾ, ಬಿಜೆಪಿ ವಕ್ತಾರ ಎಂ.ಬಿ.ಝಿರಲಿ, ಸಂಸದೆ ಮಂಗಲ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಉಜ್ವಲಾ ಬಡವನಾಚೆ ಹಾಗೂ ಪಾಲಿಕೆ ಬಿಜೆಪಿ ಸದಸ್ಯರು ಇದ್ದರು.