ವಿಜಯವಾಣಿ ಸುದ್ದಿಜಾಲ ಕೋಲಾರ
ಟೊಮೆಟೋ ಬೆಲೆ ಮಾರುಕಟ್ಟೆಯಲ್ಲಿ ದಿನೇ ದಿನೇ ಏರತೊಡಗುತ್ತಿದೆ. ೧೫ ಕೆ.ಜಿ. ಟೊಮೆಟೋ ಬಾಕ್ಸ್ ಸಾವಿರ ರೂ.ಗಳ ಗಡಿ ದಾಟಿದೆ. ಕೆ.ಜಿ. ಟೊಮೆಟೋ ೩೦ ರಿಂದ ೭೫ ರೂ.ಗಳ ತನಕ ಮಾರಾಟವಾಗುತ್ತಿದೆ. ಕಳೆದ ೦೩ ತಿಂಗಳಿನಿAದ ಬೆಲೆ ಇಲ್ಲದೆ ನಷ್ಟ ಅನುಭವಿಸಿದ ರೈತರ ಮುಖದಲ್ಲಿ ದಸರಾಗೆ ಖುಷಿ ತಂದAತಾಗಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆಗೆ ದೇಶದ ವಿವಿಧ ರಾಜ್ಯಗಳಿಗೆ ಮತ್ತು ರಾಷ್ಟçಗಳಿಗೆ ಟೊಮೆಟೋವನ್ನು ಕಳಿಸಿಕೊಡಲಾಗುತ್ತಿದ್ದು, ಆದರೆ ಈಗ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ತವಕ ಕಡಿಮೆಯಾಗಿದ್ದು, ರಾಜ್ಯಕ್ಕೆ ಪೂರೈಕೆ ಮಾಡುವಷ್ಟು ಟೊಮೆಟೋ ಮಾತ್ರ ಮಾರುಕಟ್ಟೆಗೆ ಬರುತ್ತಿರುವುದರಿಂದ ರಫ್ತಿಗೆ ಅವಕಾಸ ಇಲ್ಲದಂತೆ ಆಗಿದೆ.
ಪ್ರತಿ ವರ್ಷ ಜೂನ್ ಜುಲೈ ತಿಂಗಳಲ್ಲಿ ಟೊಮೆಟೋಗೆ ಉತ್ತಮ ಬೆಲೆ ಬರುತ್ತದೆಂದು ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿ ಟೊಮೆಟೋ ಸಸಿಗಳನ್ನು ನಾಟಿ ಮಾಡಿ, ಜೂನ್ ಜುಲೈ ತಿಂಗಳಲ್ಲಿ ಫಸಲು ಮಾರುಕಟ್ಟೆಗೆ ಬರುವಂತೆ ನೋಡಿಕೊಳ್ಳುತ್ತಿದ್ದರು. ಟೊಮೆಟೋ ಬೆಳೆಗಾರರ ಸಂಖ್ಯೆ ಹೆಚ್ಚಾದ ಕಾರಣ ಜೂನ್ ಜುಲೈ ತಿಂಗಳಿನಲ್ಲಿ ಟೊಮೆಟೋ ಬೆಲೆ ಕುಸಿಯತೊಡಗಿತು.
ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನಲ್ಲಿ ಟೊಮೆಟೋಗೆ ಉತ್ತಮ ಬೆಲೆ ಬರುವುದಿಲ್ಲವೆಂದು ಬೆಳೆಗಾರರ ಸಂಖ್ಯೆ ಕ್ಷೀಣಿಸಿತ್ತು. ವೈರಸ್ ಕಾಟದ ನಡುವೆಯು ತೋಟಗಳನ್ನು ಜೋಪಾನ ಮಾಡಿಕೊಂಡಿರುವುದರಿAದ ಉತ್ತಮ ಫಸಲು ಬಂದಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯು ಸಿಗುವಂತಾಗಿದೆ. ೧೫ ಕೆ.ಜಿ. ಟೊಮೆಟೋ ಬಾಕ್ಸ್ ಈಗ ೧೧೦೦ ರೂ.ಗಳ ತನಕ ಮಾರಾಟವಾಗುತ್ತಿದೆ.
ಸೆ.೨೫ ರಿಂದ ಹಂತ ಹಂತವಾಗಿ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು, ಅಕ್ಟೋಬರ್ ೦೧ ರಿಂದ ೧೫ ಕೆ.ಜಿ. ಟೊಮೆಟೋ ಬಾಕ್ಸ್ ೭೦೦ ರಿಂದ ೮೦೦ ರೂ.ಗಳ ತನಕ ಮಾರಾಟವಾಯಿತು. ಕಳೆದ ಮೂರು ದಿನಗಳಿಂದ ಸಾವಿರ ರೂ.ಗಳು ದಾಟಿದ್ದು, ಸೋಮವಾರ ೧೧೦೦ ರೂ.ಗಳ ತನಕ ಮಾರಾಟವಾಗಿದೆ.
ಕೋಟ್
ಟೊಮೆಟೋಗೆ ಕಾಡುತ್ತಿರುವ ವೈರಸ್ ಕಾಟದ ಜೊತೆಗೆ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳು ಟೊಮೆಟೋಗೆ ಬೆಲೆ ಬರುವುದಿಲ್ಲ ಎಂಬುವುದು ರೈತರ ಮಾತು. ಕಳೆದ ನಾಲ್ಕು ವರ್ಷಗಳ ಹಿಂದೆ ಮಾತ್ರ ಈ ತಿಂಗಳಿನಲ್ಲಿ ಉತ್ತಮ ಬೆಲೆ ಬಂದಿದ್ದನ್ನು ಹೊರತುಪಡಿಸಿದರೆ ಉಳಿದಂತೆ ಈ ತಿಂಗಳಿನಲ್ಲಿ ಬೆಲೆ ಬರುವುದಿಲ್ಲ ಎಂದು ರೈತರು ಟೊಮೆಟೋ ಸಸಿಗಳನ್ನು ನಾಟಿ ಮಾಡತ್ತಿರಲಿಲ್ಲ.
-ಕಿತ್ತಂಡೂರು ಸಂಪತ್ ಕುಮಾರ್, ಟೊಮೆಟೋ ಬೆಳೆಗಾರರು.
ಕೋಟ್
ಕಳೆದ ೦೨ ದಿನಗಳಿಂದ ೧೫ ಕೆ.ಜಿ. ಟೊಮೆಟೋ ಬಾಕ್ಸ್ ೧೩೦೦ ತನಕ ಮಾರಾಟವಾಯಿತು. ಸೋಮವಾರ ೨೦೦ ರೂ.ಗಳಷ್ಟು ಕುಸಿತ ಕಂಡಿದ್ದು, ೧೧೦೦ ಗಳಿಗೆ ಮಾರಾಟವಾಯಿತು. ದೇಶದ ವಿವಿಧ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿರುವುದರಿಂದ ಟೊಮೆಟೋ ಬೆಳೆಗಾರರು ಬೆಳೆ ಬೆಳೆಯುವುದನ್ನು ಕಡಿಮೆ ಮಾಡಿರುವುದರಿಂದ ೧೫ ದಿವಸಗಳಿಂದ ಸ್ವಲ್ಪ ಮಟ್ಟಿಗೆ ಬೆಲೆ ಬರುವಂತೆ ಆಗಿದೆ. ಈ ಬೆಲೆ ಬಹಳ ದಿವಸಗಳ ಕಾಲ ಇರುವುದಿಲ್ಲ.
-ಮುನೇಗೌಡ, ಎಂ.ಎನ್.ಆರ್. ಮಂಡಿ ಮಾಲೀಕರು.
ಚಿತ್ರ ೦೭ ಕೆ.ಎಲ್.ಆರ್. ೦೨ : ಕೋಲಾರ ಎಪಿಸಿಎಂಸಿ ಮಾರುಕಟ್ಟೆಯಲ್ಲಿರುವ ಗುಣಮಟ್ಟದ ಟೊಮೆಟೋ ತುಂಬಿರುವ ಬಾಕ್ಸ್ಗಳು
ಚಿತ್ರ ೦೭ ಕೆ.ಎಲ್.ಆರ್. ೦೨ಎ : ಕಿತ್ತಂಡೂರು ಸಂಪತ್‌ಕುಮಾರ್, ಟೊಮೆಟೋ ಬೆಳೆಗಾರರ ಭಾವಚಿತ್ರ