ವಿಜಯವಾಣಿ ಸುದ್ದಿಜಾಲ ಕೋಲಾರ
ಕಳೆದ ೨೦ ವರ್ಷಗಳಿಂದ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರೂ ಕೆಲಸ ಖಾಯಂಮಾತಿ ಮಾಡದೆ ಹಾಗೂ ವೇತನ ಪರಿಷ್ಕರಣೆ ಮಾಡದೆ ಆಡಳಿತ ಮಂಡಳಿ ನೌಕರರನ್ನು ವಂಚನೆ ಮಾಡಲಾಗುತ್ತಿದೆ, ಹೊರಗುತ್ತಿಗೆ ನೌಕರರ ಸಮಸ್ಯೆಗಳಿಗೆ ಸ್ಪಂಧಿಸುವAತೆ ಬೆಮೆಲ್ ಕಂಪನಿಯ ನೂರಾರು ಹೊರಗುತ್ತಿಗೆ ನೌಕರರು ಸಂಸದರಿಗೆ ಮನವಿ ಸಲ್ಲಿಸಿದರು.
ಕೋಲಾರ ತಾಲ್ಲೂಕಿನ ಕುಂಬಾರಹಳ್ಳಿಯಲ್ಲಿರುವ ಸಂಸದರ ಗೃಹಕಛೇರಿಗೆ ಭಾನುವಾರ ಬೆಮೆಲ್ ನ ನೂರಾರು ಹೊರಗುತ್ತಿಗೆ ನೌಕರರು ಸಂಸದರನ್ನು ಭೇಟಿ ಮಾಡಿ, ಕಳೆದ ೨೦ ವರ್ಷಗಳಿಗೆ ಕಂಪನಿಯ ಏಳಿಗೆಗಾಗಿ ಹೊರಗುತ್ತಿಗೆ ಆಧಾರದ ಮೇಲೆಯೇ ದುಡಿಯುತ್ತಿದ್ದೇವೆ. ಆದರೆ ನಮ್ಮನ್ನು ಖಾಯಂಮಾತಿ ಮಾಡಲು ಆಡಳಿತ ಮಂಡಳಿ ಹಿಂಜರಿಯುತ್ತಿದೆ. ಮತ್ತು ಮಾರ್ಚ್ ತಿಂಗಳಲ್ಲಿ ವೇತನ ಪರಿಷ್ಕರಣೆ ಮಾಡಬೇಕಾಗಿತ್ತು, ಮಾರ್ಚ್ ತಿಂಗಳು ಕಳೆದು ೩ ತಿಂಗಳು ಕಳೆದರೂ ಈವರೆವಿಗೂ ಆಡಳಿತ ಮಂಡಳಿ ವೇತನ ಪರಿಷ್ಕರಣೆ ಮಾಡದೆ ನಮ್ಮನ್ನು ವಂಚನೆ ಮಾಡುತ್ತಿದೆ. ಈ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದು, ಒಂದು ತಿಂಗಳೊಳಗೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿ ಕೋರ್ಟ್ ಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಆದರೂ ಆಡಳಿತ ಮಂಡಳಿ ನಿರ್ಲಕ್ಷ ವಹಿಸುತ್ತಿದೆ. ಹಾಗೂ ಹಲವು ಸಮಸ್ಯೆಗಳ ಬಗೆಹರಿಸುವಂತೆ ಸಂಸದರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದರು.
ನೌಕರರ ಸಮಸ್ಯೆಗಳನ್ನು ಆಲಿಸಿದ ಸಂಸದ ಎಂ.ಮಲ್ಲೇಶ್ ಬಾಬು ಮುಂಬರುವ ಸಂಸತ್ ಅಧಿವೇಶನದಲ್ಲಿ ನಿಮ್ಮ ವಿಚಾರವನ್ನು ಪ್ರಸ್ತಾಪ ಮಾಡಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಚಿತ್ರ ೧೪ ಕೆ.ಎಲ್.ಆರ್. ೦೨ : ಸಂಸದ ಎಂ.ಮಲ್ಲೇಶ್ ಬಾಬು ರವರಿಗೆ ಬೆಮೆಲ್ ಹೊರಗುತ್ತಿಗೆ ನೌಕರರು ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು.