ಬೆಟ್ಟದತುಂಗ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಅಧ್ಯಕ್ಷೆ ಟಿ.ಎಸ್.ಪ್ರೀತಿ ಅರಸ್, ಉಪಾಧ್ಯಕ್ಷ ಕೆ.ಡಿ.ಶಿವಣ್ಣ ಅವರನ್ನು ಸದಸ್ಯರು ಮತ್ತು ಮುಖಂಡರು ಅಭಿನಂದಿಸಿದರು.  
ನ್ಯೂಸ್

ಬೆಟ್ಟದತುಂಗ ಗ್ರಾಮ ಪಂಚಾಯಿತಿಗೆ ಆಯ್ಕೆ

ಬೆಟ್ಟದಪುರ: ಸಮೀಪದ ಬೆಟ್ಟದತುಂಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪ್ರೀತಿ ಅರಸ್ ಹಾಗೂ ಉಪಾಧ್ಯಕ್ಷರಾಗಿ ಕೆ.ಡಿ.ಶಿವಣ್ಣ ಆಯ್ಕೆಯಾದರು.

ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಪ್ರೀತಿ ಅರಸ್ ಹಾಗೂ ಲಕ್ಷ್ಮೀ ನಾಮಪತ್ರ ಸಲ್ಲಿಸಿದ್ದರು. ಗ್ರಾಪಂನಲ್ಲಿ 14 ಸದಸ್ಯರಿದ್ದು, ಪ್ರೀತಿ ಅರಸ್ 8 ಮತ ಪಡೆದರೆ, ಲಕ್ಷ್ಮೀ 6 ಮತ ಪಡೆದರು.

ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಡಿ ಶಿವಣ್ಣ ಹಾಗೂ ಸುನೀತಾ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಾಗ ಶಿವಣ್ಣ ಅವರಿಗೆ ಉಪಾಧ್ಯಕ್ಷರ ಸ್ಥಾನ ಒಲಿಯಿತು. ಚುನಾವಣಾಧಿಕಾರಿಯಾಗಿ ಕೃಷ್ಣಮೂರ್ತಿ ಹಾಗೂ ಪ್ರಭು ಕಾರ್ಯನಿರ್ವಹಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎಸ್ ದೇವರಾಜು, ಸತೀಶ್, ಬಿಂದು, ಕರಿಯಯ್ಯ, ಕಮಲಮ್ಮ, ರೇಣುಕಾ, ಲೋಕೇಶ್, ರವಿ, ರತ್ನಮ್ಮ, ಪಿರಿಯಾಪಟ್ಟಣ ಪುರಸಭೆ ಅಧ್ಯಕ್ಷ ಮಹೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ, ಮುಖಂಡರಾದ ಪ್ರಭುಗೌಡ, ಮಲ್ಲಿಕಾರ್ಜುನ, ನಟರಾಜು ಇತರರಿದ್ದರು.