ನ್ಯೂಸ್

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ವಿಶೇಷ ಉಪನ್ಯಾಸ ಮಾಲಿಕೆ / ವಿದ್ಯಾರ್ಥಿಗಳಿಗೆ ಹೊಸ ಆಯಾಮ ಕಲಿಸಿಕೊಡುವ ಪ್ರಯತ್ನ / ವಸುಧೇಂದ್ರ

ವಿಜಯವಾಣಿ ಸುದ್ದಿಜಾಲ ಕೋಲಾರ

ವಿದ್ಯಾರ್ಥಿಗಳಿಗೆ ಹೊಸ ಆಯಾಮಗಳನ್ನು ಹೊಸ ವ್ಯಕ್ತಿಗಳಿಂದ ಕಲಿಸಿಕೊಡುವ ಪ್ರಯತ್ನವಾಗಿ ಹಮ್ಮಿಕೊಂಡಿರುವ ವಿಶೇಷ ಉಪನ್ಯಾಸ ಮಾಲಿಕೆಯ ಪ್ರಯೋಜನ ಪಡೆಯಬೇಕು. ಕನ್ನಡ ನಾಡು, ನುಡಿಗೆ ಕೊಡುಗೆ ನೀಡಿದ ಮಾಸ್ತಿ, ಡಿವಿಜಿ ಯಂತಹ ಮಹನೀಯರ ಪರಿಚಯ ಪ್ರತಿಯೊಬ್ಬರಿಗೂ ಆಗಬೇಕು ಎಂದು ಹೆಸರಾಂತ ಕಥೆಗಾರ ವಸುಧೇಂದ್ರ ತಿಳಿಸಿದರು.

ನಗರ ಹೊರವಲಯದ ಬೆಂಗಳೂರು ಉತ್ತರ ವಿವಿಯ ಮಂಗಸಸAದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ವಿವಿಯಿಂದ ಇದೇ ಮೊದಲಬಾರಿಗೆ ಆಯೋಜಿಸಿರುವ ವಿಶೇಷ ಉಪನ್ಯಾಸ ಮಾಲಿಕೆ ಕಾಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಥೆಗಳು ಎಲ್ಲೆಲ್ಲೂ ಇರುತ್ತವೆ ಆದರೆ ಅವನ್ನು ನೋಡುವ ಕಣ್ಣುಗಳು ಬೇಕು ಎಂಬುದನ್ನು ಉದಾಹರಣೆಗಳ ಸಮೇತ ವಿವರಿಸಿದ ವಸಧೇಂದ್ರ, ಜೀವನದಲ್ಲಿ ಕುತೂಹಲವಿದ್ದರೆ ಕಥೆಗಳು ತಾನಾಗಿಯೇ ಹೊಳೆಯುತ್ತವೆ ಎಂದು ತಿಳಿಸಿದರು.

ನಾನು ಒಂಟಿಯಾಗಿದ್ದೇನೆ ಎಂದು ಅರಿವಾದಾಗ ನಾನು ಏನನ್ನಾದರೂ ಮಾಡಲು ಹುಡುಕಿದೆ. ನನಗೆ ಓದುವುದು ಮಾತ್ರ ಇತ್ತು. ನಾನು ಬಾಲ್ಯದಲ್ಲಿ ಹೊಟ್ಟೆಬಾಕತನದ ಓದುಗನಾಗಿದ್ದೆ. ಆದ್ದರಿಂದ ನಾನು ಕಥೆಗಳನ್ನು ಬರೆಯಲು ಪ್ರಯತ್ನಿಸಿದೆ ಮತ್ತು ಅವುಗಳನ್ನು ಇತರ ಕನ್ನಡ ಬರಹಗಾರರಿಗೆ ಕಳುಹಿಸಲು ಪ್ರಾರಂಭಿಸಿದೆ. ಕುತೂಹಲಕಾರಿಯಾಗಿ, ನನ್ನ ಮೊದಲ ಕಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದು ನನ್ನನ್ನು ಗುಣಪಡಿಸಲು ಕಥೆಗಾರನನ್ನಾಗಿಸಿತು ಎಂದರು.

ತೆಲುಗಿನಿಂದ ಕನ್ನಡಕ್ಕೆ ಅನುವಾದಿಸುವುದು ತುಂಬಾ ಸುಲಭ. ಅವು ದ್ರಾವಿಡ ಭಾಷೆಗಳು, ಆದ್ದರಿಂದ ನೀವು ಗಾದೆಗಳಿಗೆ ಉಲ್ಲೇಖಗಳನ್ನು ಸಹ ಹೊಂದಿದ್ದೀರಿ. ಆದರೆ ಇಂಗ್ಲಿಷ್ ಹಾಗಲ್ಲ. ಸಂಸ್ಕöÈತಿ ಮತ್ತು ಭಾಷೆ ವಿಭಿನ್ನವಾಗಿವೆ. ಕನ್ನಡಕ್ಕೆ ಅನುವಾದಿಸಲು ಸಾಧ್ಯವಾಗದ ಹಲವು ಪದಗಳಿವೆ. ಆದ್ದರಿಂದ ಅದು ಅತ್ಯಂತ ಸವಾಲಿನದ್ದಾಗಿದೆ. ಕಥೆ ಆಕರ್ಷಕವಾಗಿರಬೇಕು. ಮತ್ತೊಬ್ಬರನ್ನು ಮಂತ್ರಮುಗ್ದರನ್ನಾಗಿಸಬೇಕು ಎಂದರು.

ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ಮಾತನಾಡಿ, ಉತ್ತರ ವಿವಿ ಉಪನ್ಯಾಸ ಮಾಲಿಕೆಯ ಮೂಲಕ ದಾಪುಗಾಲು ಇಡುತ್ತಿದೆ. ಸದ್ಯದಲ್ಲಿಯೇ ವಿವಿಯಿಂದ ಪ್ರಸಾರಾಂಗವನ್ನು ಸ್ಥಾಪಿಸುವ ಮೂಲಕ ಮೊರಸುನಾಡು ಕನ್ನಡ ಎಂಬ ಶಬ್ದಕೋಶವನ್ನು ಪ್ರಕಟಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮೊದಲ ಹಂತದಲ್ಲಿ ಇಂದಿನೀAದ ಮೇ.೩೧ ರವರೆಗೂ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿದ್ದು, ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಜ್ಞಾನ ವೃದ್ದಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶೈಕ್ಷಣಿಕ ಅಭಿವೃದ್ದಿಯ ಜತೆಗೆ ಕೌಶಲ್ಯಾಭಿವೃದ್ದಿಗೂ ವಿವಿ ಕೆಲಸಮಾಡುತ್ತಿದೆ. ತನ್ನ ವ್ಯಾಪ್ತಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೌಶಲ್ಯ ಮತ್ತು ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಕಾಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಡಿ.ಕುಮುದಾ, ವಿತ್ತಾಧಿಕಾರಿ ವಸಂತಕುಮಾರ್ ಮತ್ತು ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.

ಚಿತ್ರ ೨೬ ಕೆ.ಎಲ್.ಆರ್. ೦೬ : ಹೆಸರಾಂತ ಕಥೆಗಾರ ವಸುಧೇಂದ್ರ ಕೋಲಾರ ಹೊರವಲಯದ ಬೆಂಗಳೂರು ಉತ್ತರ ವಿವಿಯ ಮಂಗಸಸAದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ವಿವಿಯಿಂದ ಇದೇ ಮೊದಲಬಾರಿಗೆ ಆಯೋಜಿಸಿರುವ ವಿಶೇಷ ಉಪನ್ಯಾಸ ಮಾಲಿಕೆ ಕಾಯಕ್ರಮವನ್ನು ಉದ್ಘಾಟನೆ ಮಾಡಿದರು. ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ ವಾನಳ್ಳಿ, ಪ್ರೊ.ಡಿ.ಕುಮುದ ಮುಂತಾದವರು ಇದ್ದರು.