ನ್ಯೂಸ್

ಬೆಂಗಳೂರು ಉತ್ತರ ವಿವಿ ಶೈಕ್ಷಣಿಕ ವಿನಿಮಯ ಒಪ್ಪಂದದ ಹಿನ್ನಲೆ ಹರಿಯಾಣ ವಿವಿಯ ೧೬ ವಿದ್ಯಾರ್ಥಿಗಳ ತಂಡ ಕೋಲಾರಕ್ಕೆ ಆಗಮನ

ವಿಜಯವಾಣಿ ಸುದ್ದಿಜಾಲ ಕೋಲಾರ

ಬೆಂಗಳೂರು ಉತ್ತರ ವಿವಿ ಹಾಗೂ ಹರ್ಯಾಣ ರಾಜ್ಯದ ಮಹರ್ಷಿ ದಯಾನಂದ ವಿವಿಯೊಂದಿಗೆ ಆಗಿರುವ ಒಪ್ಪಂದದನ್ವಯ ಹರ್ಯಾಣದ ಹದಿನಾರು ವಿದ್ಯಾರ್ಥಿಗಳು ಹಾಗೂ ಮೂವರು ಅಧ್ಯಾಪಕರ ತಂಡ ಶೈಕ್ಷಣಿಕ ವಿನಿಮಯಕ್ಕಾಗಿ ಮಂಗಳವಾರ ಕೋಲಾರದ ಬೆಂಗಳೂರು ಉತ್ತರ ವಿವಿಗೆ ಭೇಟಿನೀಡಿದ್ದು, ಅವರನ್ನು ಕುಲಪತಿ ಪ್ರೊ.ನಿರಂಜನವಾನಳ್ಳಿ ಸ್ವಾಗತಿಸಿದರು.

ಹರಿಯಾಣದ ಮಹರ್ಷಿ ದಯಾನಂದ ವಿವಿಯೊಂದಿಗೆ ಆಗಿರುವ ಒಪ್ಪಂದದನ್ವಯ ಕಳೆದ ವರ್ಷ ಬೆಂಗಳೂರು ಉತ್ತರ ವಿವಿಯಿಂದ ೧೦ ವಿದ್ಯಾರ್ಥಿಗಳು ಹಾಗೂ ಇಬ್ಬರು ಅಧ್ಯಾಪಕರು ಹರಿಯಾಣಕ್ಕೆ ಭೇಟಿ ನೀಡಿ ಅಲ್ಲಿ ಶೈಕ್ಷಣಿಕ ಅಧ್ಯಯನ ನಡೆಸಿ ಬಂದಿದ್ದರು.

ಇದೀಗ ಹರಿಯಾಣದ ಮಹರ್ಷಿ ದಯಾನಂದ ವಿವಿಯ ೧೬ ವಿದ್ಯಾರ್ಥಿಗಳು ಮೂವರು ಅಧ್ಯಾಪಕರು ಆಗಮಿಸಿದ್ದು, ವಿವಿಯ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಇಲ್ಲಿನ ಜನಜೀವನದ ಕುರಿತು ಚರ್ಚೆ ನಡೆಸಲಾಯಿತು.

ನಾಲ್ಕು ದಿನ ಕರ್ನಾಟಕದ ಜನಜೀವನವನ್ನು ಅಧ್ಯಯಮಾಡಲಿರುವ ಈ ತಂಡ ಬರುವ ೨೪ ರಂದು ವಾಪಸಾಗಲಿದ್ದು, ಬುಧವಾದ ನಗರ ತೇರಹಳ್ಳಿಯ ಆದಿಮಾಗೆ ಭೇಟಿ ನೀಡಿತ್ತಲ್ಲದೇ ಬೆಟ್ಟದ ಮೇಲಿನ ಹಳ್ಳಿಗಳ ಜನರೊಂದಿಗೆ ಸಂಪರ್ಕ ಸಾಧಿಸಿ ಮಾಹಿತಿ ಸಂಗ್ರಹಿಸಿತು.

ನAತರ ಅಂತರಗAಗೆಗೂ ಭೇಟಿ ನೀಡಿದ್ದು, ಬೆಂಗಳೂರು ಉತ್ತರ ವಿವಿ ವ್ಯಾಪ್ತಿಯ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣದಲ್ಲೂ ಈ ತಂಡ ಭಾಗವಹಿಸಿದೆ ಎಂದು ವಿವಿಯ ಕುಲಪತಿಗಳಾದ ಪ್ರೊ.ನಿರಂಜನವಾನಳ್ಳಿ ತಿಳಿಸಿದರು.

ಹರಿಯಾಣದ ಈ ತಂಡದೊAದಿಗೆ ಕುಲಪತಿ ಪ್ರೊ.ನಿರಂಜನವಾನಳ್ಳಿ ಕುಲಸಚಿವರಾದ ಸಿ.ಎನ್.ಶ್ರೀಧರ್, ಪ್ರೊ.ತಿಪ್ಪೇಸ್ವಾಮಿ ವಿವಿಯ ಮಂಗಸAದ್ರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ. ಕುಮುದಾ, ವಿವಿಯ ಹಣಕಾಸ ಅಧಿಕಾರಿ ವಸಂತಕುಮಾರ್, ಸಿಂಡಿಕೇಟ್ ಸದಸ್ಯ ಅರ್ಬಜ್‌ಪಾಷಾ ಮತ್ತಿತರರು ಮಾತುಕತೆ ನಡೆಸಿದರು.

ಚಿತ್ರ ೨೨ ಕೆ.ಎಲ್.ಆರ್. ೦೪ : ಕೋಲಾರದ ಬೆಂಗಳೂರು ಉತ್ತರ ವಿವಿ ಹಾಗೂ ಹರ್ಯಾಣ ರಾಜ್ಯದ ಮಹರ್ಷಿ ದಯಾನಂದ ವಿವಿಯೊಂದಿಗೆ ಆಗಿರುವ ಒಪ್ಪಂದದನ್ವಯ ಹರ್ಯಾಣದ ಹದಿನಾರು ವಿದ್ಯಾರ್ಥಿಗಳು ಹಾಗೂ ಮೂವರು ಅಧ್ಯಾಪಕರ ತಂಡ ಶೈಕ್ಷಣಿಕ ವಿನಿಮಯಕ್ಕಾಗಿ ಮಂಗಳವಾರ ಕೋಲಾರದ ಬೆಂಗಳೂರು ಉತ್ತರ ವಿವಿಗೆ ಭೇಟಿನೀಡಿದ್ದು, ಅವರನ್ನು ಕುಲಪತಿ ಪ್ರೊ.ನಿರಂಜನವಾನಳ್ಳಿ ಸ್ವಾಗತಿಸಿದರು.