ನ್ಯೂಸ್

ಬೆಂಗಳೂರು ಉತ್ತರ ವಿವಿ ಪ್ರೋಸ್ಪೆöÊರ‍್ಸ್ ಸಂಸ್ಥೆಯೊAದಿಗೆ ಒಡಂಬಡಿಕೆ / ವಿವಿ ವ್ಯಾಪ್ತಿಯ ೨೭೧ ಮಂದಿ ಕೌಶಲ್ಯ ತರಬೇತಿಗೆ ಆಯ್ಕೆ / ಪ್ರೊ.ನಿರಂಜನವಾನಳ್ಳಿ

ವಿಜಯವಾಣಿ ಸುದ್ದಿಜಾಲ ಕೋಲಾರ

ನಗರದಲ್ಲಿರುವ ಬೆಂಗಳೂರು ಉತ್ತರ ವಿವಿ ಪ್ರೋಸ್ಪೆöÊರ‍್ಸ್ ಸಂಸ್ಥೆಯೊAದಿಗೆ ಒಡಂಬಡಿಕೆ ಮಾಡಿಕೊಂಡಿರುವುದರ ಫಲವಾಗಿ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ೨೭೧ ವಿದ್ಯಾರ್ಥಿಗಳು ಉಚಿತ ಕೌಶಲ್ಯ ತರಬೇತಿಗೆ ಆಯ್ಕೆಯಾಗಿದ್ದಾರೆ ಎಂದು ಕುಲಪತಿ ಪ್ರೊ.ನಿರಂಜನವಾನಳ್ಳಿ ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರು ಉತ್ತರ ವಿವಿ ಆಡಳಿತ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕ್ಯೂ ಸ್ಪೀರ‍್ಸ್ನ ಅಂಗಸAಸ್ಥೆಯಾದ ಪ್ರೋಸ್ಪೆöÊರ‍್ಸ್ ಸಂಸ್ಥೆಯೊAದಿಗೆ ಕುಲಪತಿಗಳ ಸಮ್ಮುಖದಲ್ಲಿ ಕುಲಸಚಿವ ಸಿ.ಎನ್.ಶ್ರೀಧರ್ ಹಾಗೂ ಪ್ರೋಸ್ಪೆöÊರ‍್ಸ್ ಸಂಸ್ಥೆಯ ಸಿಇಒ ಗಿರೀಶ್ ರಾಮಣ್ಣ ನೇತೃತ್ವದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಅದರಂತೆ ಪ್ರೋಸ್ಪೆöÊರ‍್ಸ್ ಸಂಸ್ಥೆ ಬೆಂಗಳೂರು ವಿವಿಯ ಎಲ್ಲಾ ೨೯೦ ಸಂಯೋಜಿತ ಪದವಿ ಕಾಲೇಜುಗಳ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಕ್ಯಾಂಪಸ್ ಡ್ರೆöÊವ್ ಮೂಲಕ ತರಬೇತಿಗೆ ಆಯ್ಕೆ ಮಾಡಿಕೊಳ್ಳುತ್ತದೆ.

ಆಯ್ಕೆಯಾದ ೫೦೦ ರಿಂದ ೧ಸಾವಿರ ವಿದ್ಯಾರ್ಥಿಗಳಿಗೆ ಬೆಂಗಳೂರಿನ ತರಬೇತಿ ಸಂಸ್ಥೆಗಳಲ್ಲಿ ಪದವಿ ಮುಗಿದ ನಂತರ ೨ ರಿಂದ ೩ ತಿಂಗಳು ಉಚಿತ ಉದ್ಯೋಗ ತರಬೇತಿ ನೀಡಿ ಹಲವು ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅಗತ್ಯವಾದ ಸಂದರ್ಶನದ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತದೆ ಎಂದು ಕುಲಪತಿಗಳು ತಿಳಿಸಿದರು.

ಸಂಸ್ಥೆ ಈ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು, ಪ್ರೋಸ್ಪೀರ‍್ಸ್ ಸಂಸ್ಥೆ ಈ ಕಾರ್ಯವನ್ನು ತಮ್ಮ ಸಿಎಸ್‌ಆರ್ ಅಡಿಯಲ್ಲಿ ಹಮ್ಮಿಕೊಂಡಿದೆ.

ಈ ನಡುವೆ ಮೇ.೨೫ ರಂದು ಬೆಂಗಳೂರು ಉತ್ತರ ವಿವಿ ವ್ಯಾಪ್ತಿಗೆ ಬರುವ ಎಲ್ಲಾ ನಾಲ್ಕು ಜಿಲ್ಲೆಗಳ ಕಾಲೇಜುಗಳಲ್ಲಿ ೨೨ ಕ್ಯಾಂಪಸ್ ಡ್ರೆöÊವ್‌ಗಳನ್ನು ಮಾಡಿ ಮೊದಲನೆ ಹಂತದಲ್ಲಿ ೨೭೧ ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಂಡಿದ್ದಾರೆ.

ಈ ಕಾಲೇಜುಗಳ ಉಳಿದ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ಪದವಿ ಪರೀಕ್ಷೆಗಳು ಮುಗಿದೊಡಣೆ ಎರಡನೇ ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವ ಲೋಕನಾಥ್, ಆರ್ಥಿಕ ಅಧಿಕಾರಿ ವಸಂತಕುಮಾರ್ ಮತ್ತಿತರರಿದ್ದರು.

ಚಿತ್ರ ೧೦ ಕೆ.ಎಲ್.ಆರ್. ೦೭ : ಬೆಂಗಳೂರು ಉತ್ತರ ವಿವಿ ಪ್ರೋಸ್ಪೆöÊರ‍್ಸ್ ಸಂಸ್ಥೆಯೊAದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿರುವುದು. ಪ್ರೊ.ನಿರಂಜನ ವಾನಳ್ಳಿ ಹಾಗೂ ಕುಲಸಚಿವ ಸಿ.ಎನ್.ಶ್ರೀಧರ್ ಮತ್ತು ಪ್ರೋಸ್ಪೆöÊರ‍್ಸ್ ಸಂಸ್ಥೆಯ ಸಿಇಒ ಗಿರೀಶ್ ರಾಮಣ್ಣ ಉಪಸ್ಥಿತರಿದ್ದರು.