ಬೆಂಗಳೂರು
ಮೈಸೂರು ವಿಶ್ವವಿದ್ಯಾಲಯ ರಾಜ್ಯದ 10 ವಿಶ್ವವಿದ್ಯಾಲಯಗಳೊಂದಿಗೆ ಸೆ.27ರಂದು ನಡೆಸಲಿರುವ ಕೆ-ಸೆಟ್ ಪರೀಕ್ಷೆಗೆ ಬೆಂ.ವಿವಿ ನೋಡಲ್ ಕೇಂದ್ರದಿಂದ 18,741 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
41 ವಿಷಯಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಂ. ವಿವಿ ವ್ಯಾಪ್ತಿಯಲ್ಲಿ 28 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಂ.ವಿವಿ ಪ್ರೊೆಸರ್ ಡಾ.ಸಿ.ನಾಗಭೂಷಣ ಪರೀಕ್ಷೆಯ ನೋಡಲ್ ಅಧಿಕಾರಿಯಾಗಿದ್ದಾರೆ. 28 ಪ್ರಾಧ್ಯಾಪಕರನ್ನು ಕಾಲೇಜುಗಳ ಪರಿವೀಕ್ಷಕರನ್ನಾಗಿ ನೇಮಕ ಮಾಡಿದೆ. ಕರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಕೆ-ಸೆಟ್ ಬಗ್ಗೆ ಮಾಹಿತಿ ಅವಶ್ಯವಿದ್ದಲ್ಲಿ ವಿದ್ಯಾರ್ಥಿಗಳು 7022229110 9036885734 ಸಂಪರ್ಕಿಸಬಹುದು.