ನ್ಯೂಸ್

ಬೆಂಕಿಗೆ ಸುಟ್ಟು ಹೋದ ತೋಟ

ಅನಿವಾಳು ಗ್ರಾಮದ ರೈತ ಅಪ್ಪಣ್ಣ ಎಂಬುವರಿಗೆ ಸೇರಿದ ತೋಟದ ಜಮೀನಿನಲ್ಲಿ ಬೆಂಕಿಯಿಂದ ಸುಟ್ಟು ಹೋಗಿರುವ ಮರ-ಗಿಡಗಳು.

ಬೆಟ್ಟದಪುರ: ಸಮೀಪದ ಅನಿವಾಳು ಗ್ರಾಮದ ರೈತ ಅಪ್ಪಣ್ಣ ಅವರ 3 ಎಕರೆ ತೋಟದ ಬೆಳೆಗಳು ಆಕಸ್ಮಿಕ ಬೆಂಕಿಗೆ ಭಸ್ಮವಾಗಿವೆ.


ತೋಟದಲ್ಲಿದ್ದ ತೆಂಗು, ಮಾವು, ಬಾಳೆ, ಮೆಣಸು, ದಾಳಿಂಬೆ, ಸೀಬೆ ಮತ್ತು ಸಿಲ್ವರ್ ಮರಗಳು ಸುಟ್ಟು ಹೋಗಿವೆ. ಕೈಗೆ ಬಂದ ಬೆಳೆಯು ಹಾಳಾಗಿದ್ದು ನಮಗೆ ಸುಮಾರು ಐದು ಲಕ್ಷ ರೂ.ಗಳು ನಷ್ಟವಾಗಿದೆ. ಬೆಂಕಿಗೆ ಕಾರಣ ತಿಳಿದುಬಂದಿಲ್ಲ ಎಂದು ಮಾಲೀಕರು ಬೆಟ್ಟದಪುರ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.