ಹಿರೇಬಾಗೇವಾಡಿ: ಗುಡ್ಡದಲ್ಲಿ ಒಣ ಹುಲ್ಲಿಗೆ ಅಪರಿಚಿತರು ಹಚ್ಚಿದ ಬೆಂಕಿ ಶೆಡ್‌ಗೆ ತಗುಲಿ ಜಿಲೆಟಿನ್ ಕಡ್ಡಿ ಸ್ಫೋಟಗೊಂಡು ಹಿರೇಬಾಗೇವಾಡಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಭಾರೀ ಸದ್ದು ಮತ್ತು ಕಂಪನ ಉಂಟಾಗಿ ಕೆಲ ಕಾಲ ಜನರು ಆತಂಕಕೊಳಗಾದ ಘಟನೆ ನಡೆಯಿತು.
ಇಲ್ಲಿಯ ಸಿದ್ದನಬಾವಿ ದರ್ಗಾದ ಬಳಿಯ ಉದಯಕುಮಾರ ಸ್ಟೋನ್ ಕ್ರಶರ್ಸ್ ಮತ್ತು ೆವರ್ಸ್ ಕಂಪನಿಯ ಜಾಗದಲ್ಲಿ ಮೊದಲಿನ ಬಿನ್‌ಕೋ ಕಂಪನಿಯವರು ನಿಷ್ಕ್ರಿಯವೆಂದು ಕೋಣೆಯೊಂದರಲ್ಲಿ ಕೂಡಿಟ್ಟಿದ್ದ ಹಳೆಯ ಜಿಲೆಟಿನ್ ಕಡ್ಡಿಗಳಿಗೆ ಬೆಂಕಿ ತಗುಲಿ ಈ ಘಟನೆ ಸಂಭವಿಸಿದೆ.
ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದರು. ಸ್ಥಳಕ್ಕೆ ಸ್ಫೋಟಕ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯುಎಸ್‌ಕೆ ಕಂಪನಿಯ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಾಗಿದೆ.