ನ್ಯೂಸ್

ಬೆಂಕಿ ಅವಘಡದಲ್ಲಿ ಅಂಗಡಿ ಭಸ್ಮ

ಮಂಗಳೂರು: ವಿಟ್ಲ ಸರ್ಕಾರಿ ಬಸ್ ನಿಲ್ದಾಣದ ಬಳಿಯ ಕೆ.ಜೆ.ಟವರ್ಸ್‌ನ ಎಂಪಿ ಹಾರ್ಡ್‌ವೇರ್‌ ಮತ್ತು ಪೇಂಟ್‌ ಅಂಗಡಿಯಲ್ಲಿ ಮಂಗಳವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಅಂಗಡಿ ಸಂಪೂರ್ಣ ಭಸ್ಮವಾಗಿದೆ. ಘಟನೆಯಲ್ಲಿ ಪಕ್ಕದ ಬೇಕರಿಗೂ ಬೆಂಕಿ ವ್ಯಾಪಿಸಿ ಸುಟ್ಟು ಹೋಗಿದೆ. ವಿದ್ಯುತ್ ಸೋರಿಕೆ ಘಟನೆಗೆ ಕಾರಣ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.