ಬೆಂಗಳೂರು
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ವಾಯುವಿಹಾರಿಗಳು ಮತ್ತು ಪರಿಸರ ಪ್ರೇಮಿಗಳು ಭಾನುವಾರ ಜ್ಞಾನಭಾರತಿಯ ‘ಹಸಿರು ಉಳಿಸಿ ಅಭಿಯಾನ’ ನಡೆಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಅರಣ್ಯ ಸಂಪತ್ತನ್ನು ಬೇರೆ ವಿದ್ಯಾ ಸಂಸ್ಥೆಗಳ ನಿರ್ಮಾಣಕ್ಕೆ ನೀಡುತ್ತಿರುವುದನ್ನು ವಿರೋಧಿಸಿ ಈ ಅಭಿಯಾನ ನಡೆಸಿದರು.
ಅಪಾರ ಅರಣ್ಯ ಸಂಪತ್ತನ್ನು ಹೊಂದಿರುವ ಬೆಂ.ವಿವಿಯು ಸಾಕಷ್ಟು ಎಕರೆ ಪ್ರದೇಶಗಳನ್ನು ಬೇಕಾ ಬಿಟ್ಟಿ ರೀತಿಯಲ್ಲಿ ವಿದ್ಯಾಸಂಸ್ಥೆಗಳಿಗೆ ಹಂಚಿಕೆ ಮಾಡಿದೆ. ಯೋಗ ವಿಶ್ವವಿದ್ಯಾಲಯಕ್ಕೆ 15 ಎಕರೆ ಪ್ರದೇಶ, ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ 10 ಎಕರೆ ಪ್ರದೇಶವನ್ನು ನೀಡಲು ಮುಂದಾಗಿರುವುದರಿಂದ ವಿವಿಯ ಅರಣ್ಯ ಸಂಪತ್ತು ನಾಶವಾಗುತ್ತದೆ. ಇಲ್ಲಿ ವಾಸಿಸುತ್ತಿರುವ ಜೀವರಾಶಿಗಳ ಬದುಕಿಗೆ ತೊಡಕಾಗುತ್ತದೆ. ಭೋಗ್ಯದ ಕರಾರಿನ ಮೇಲೆ ನೀಡಲಾಗಿರುವ ಪ್ರದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಭಿತ್ತಿ ಪತ್ರಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಿದರು.