ನ್ಯೂಸ್

ಬೂತ್ ಮಟ್ಟದಲ್ಲಿ ಬಿಜೆಪಿ ಸಂಘಟನೆ ಚುರುಕು

ಸರಗೂರು: ಬೂತ್ ಮಟ್ಟದಲ್ಲಿ ಬಿಜೆಪಿ ಸಂಘಟನೆ ಚುರುಕುಗೊಂಡಿದ್ದು, ಬೂತ್ ಸಮಿತಿಗಳು ಕಾರ್ಯಾರಂಭ ಮಾಡುತ್ತಿರುವುದು ಪಕ್ಷ ಸಂಘಟನೆ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಮುಖಂಡ ಡಾ.ಎಚ್.ವಿ.ಕೃಷ್ಣಸ್ವಾಮಿ ಹೇಳಿದರು.


ತಾಲೂಕಿನ ಮುಳ್ಳೂರು ಮಹಾಶಕ್ತಿ ಕೇಂದ್ರ ಹಾಗೂ ಬೆಣ್ಣೆಗೆರೆ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೂತ್ ಮಟ್ಟದಲ್ಲಿ ಪಕ್ಷ ಬಲಿಷ್ಠವಾಗಿದೆ. ಪಕ್ಷ ಸಂಘಟನೆ ಕಾರ್ಯವನ್ನು ಇನ್ನೂ ಚುರುಕುಗೊಳಿಸಬೇಕಿದೆ. ಬಿಜೆಪಿ ಸರ್ಕಾರ ರೂಪಿಸಿರುವ ಜನಪರ ಯೋಜನೆ, ಸಾಧನೆಗಳ ಬಗ್ಗೆ ಜನರ ಮನೆಬಾಗಿಲಿಗೆ ಮುಟ್ಟಿಸುವ ಕೆಲಸ ನಡೆಯಬೇಕಿದೆ ಎಂದರು.


ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಸಹ ವಕ್ತಾರ ಸಿ.ಕೆ.ಗಿರೀಶ್ ಮಾತನಾಡಿ, ಕಾರ್ಯಕರ್ತರೇ ಬಿಜೆಪಿಯ ಬೆನ್ನೆಲುಬು. ನಿಷ್ಠೆಯಿಂದ ದುಡಿಯುವ ಕೋಟಿ ಕೋಟಿ ಕಾರ್ಯಕರ್ತರ ಶ್ರಮ ಹಾಗೂ ಆಶೀರ್ವಾದ ಬಿಜೆಪಿಗೆ ಇದೆ ಎಂದರು.


ಮುಳ್ಳೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶಿವಕುಮಾರ್, ಬೂತ್ ಅಧ್ಯಕ್ಷ ಶಿಶುಪಾಲ, ಪ್ರಸಾದ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿ, ಮುಖಂಡರಾದ ಶಿವರುದ್ರಪ್ಪ ,ಸಿದ್ದಮಲ್ಲ ಶೆಟ್ಟರು, ರಾಮ ಶೆಟ್ಟರು, ರೇವಣ್ಣ, ಪುಟ್ಟಸ್ವಾಮಿ, ತಿಮ್ಮನಾಯಕ, ಮಹಾದೇವಸ್ವಾಮಿ, ನಾಗರಾಜಪ್ಪ, ಶಶಿಕಂಠಪ್ಪ, ನಾಗರಾಜು, ಗೋವಿಂದರಾಜು, ಮಲ್ಲಿಕಾರ್ಜುನ, ಸೋಮಶೇಖರ್, ಸತೀಶ್, ಸೋಮಣ್ಣ, ಚೆನ್ನಬಸಪ್ಪ, ಸುಬ್ರಹ್ಮಣ್ಯ, ಮಹಾದೇವ ಮೂರ್ತಿ, ಗೋಪಾಲರಾಜು, ಶಿವಕುಮಾರ್ ಇದ್ದರು.