ಏಪ್ರಿಲ್ 23 ರಂದು ವಿಶ್ವ ಪುಸ್ತಕ ಹಾಗೂ ಕೃತಿ ಸ್ವಾಮ್ಯ ದಿನಾಚರಣೆ ಅಂಗವಾಗಿ ನಗರ ಕೇಂದ್ರ ಗ್ರಂಥಾಲಯ, ಮೈಸೂರು ಹಾಗೂ ಪ್ರಥಮ ಬುಕ್ಸ್, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಪಿಕ್ಚರ್ ಬುಕ್‌ಗಳ ಪರಿಚಯ, ಕಥಾ ವಾಚನ ಹಾಗೂ ‘ಗೊಗ್ಗಯ್ಯನ ಗಾಳಿಪಟ’ ಎಂಬ ಪಿಕ್ಚರ್ ಬುಕ್‌ನಲ್ಲಿರುವ ವಿಷಯಗಳ ಕುರಿತು ಬುಕ್‌ನಲ್ಲಿರುವ ಚಟುವಟಿಕೆಯನ್ನು 06 ರಿಂದ 12 ವರ್ಷದ ವಯಸ್ಸಿನ ಕನಿಷ್ಟ 50 ಮಕ್ಕಳಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ಪೀಪಲ್ಸ್ ಪಾರ್ಕ್ನ ನಗರ ಕೇಂದ್ರ ಗ್ರಂಥಾಲಯದಲ್ಲಿ 23 ರಂದು ಬೆಳಿಗ್ಗೆ 11 ಗಂಟೆಯಿAದ 12.30. ಗಂಟೆಯ ರವರೆಗೆ ಆಯೋಜಿಸಲಾಗಿರುತ್ತದೆ.
ಆಸಕ್ತಿಯುಳ್ಳ ವಿದ್ಯಾರ್ಥಿಗಳು ವೆನ್ ಸೈಟ್ https://forms.gle/S2dKzGnRdm9ZQyCv7ಲಿಂಕ್‌ನಲ್ಲಿರುವ Google Form ಅನ್ನು ಭರ್ತಿಮಾಡಿ ಏಪ್ರಿಲ್ 22 ರ ಬೆಳಿಗ್ಗೆ 11 ಗಂಟೆ ಒಳಗೆ ಕಳುಹಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ: 0821-2423678 ನ್ನು ಸಂಪರ್ಕಿಸಬಹುದು ಎಂದು ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಮಂಜುನಾಥ್ ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.