ಬೆಂಗಳೂರು: ವಾಣಿಜ್ಯ ತೆರಿಗೆಗಳ ಇಲಾಖೆ ಬೆಂಗಳೂರಿನ ದಕ್ಷಿಣ ವಲಯದ ಜಾರಿ ಅಧಿಕಾರಿಗಳು ಡಿಸೆಂಬರ್ 2020ರಲ್ಲಿ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ 150 ವರ್ತಕರ ವ್ಯಾಪಾರ ಸ್ಥಳಕ್ಕೆ ಭೇಟಿ ನೀಡಿ, ಪರೀಕ್ಷಾರ್ಥ ಖರೀದಿ ನಡೆಸಿದ ಸಂದರ್ಭದಲ್ಲಿ 113 ವರ್ತಕರು ಮಾರಾಟಕ್ಕೆ ಸೂಕ್ತ ಮಾರಾಟದ ಬಿಲ್ಲುಗಳನ್ನು ನೀಡದ ಕಾರಣ 84 ವರ್ತಕರಿಂದ ರೂ.16.80 ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ. ಉಳಿಕೆ 29 ವರ್ತಕರಿಂದ ರೂ.5.80 ಲಕ್ಷ ದಂಡವನ್ನು ವಸೂಲಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯದ ಎಲ್ಲಾ ನೊಂದಾಯಿತ ವರ್ತಕರುಗಳು ಇನ್ನು ಮುಂದೆ ತಮ್ಮ ಮಾರಾಟದ ಮೇಲೆ ಸೂಕ್ತ ಮಾರಾಟದ ಬಿಲ್ಲುಗಳನ್ನು ತಪ್ಪದೇ ನೀಡುವಂತೆ ವಾಣಿಜ್ಯ ತೆರಿಗೆಗಳ ಇಲಾಖೆ ಸೂಚಿಸಿದೆ. ಮುಂದಿನ ದಿನಗಳಲ್ಲಿ ಪರೀಕ್ಷಾರ್ಥ ಖರೀದಿ ಪ್ರಕ್ರಿಯೆಯನ್ನು ಮುಂದುವರೆಸಲು ಉದ್ದೇಶಿಸಿದೆ ಎಂದು ವಾಣಿಜ್ಯ ತೆರಿಗೆಗಳ ಆಯುಕ್ತರು ತಿಳಿಸಿದ್ದಾರೆ.