ನ್ಯೂಸ್

ಬಿಜೆಪಿಗೆ ಮಾಜಿ ಶಾಸಕ ಶಿರವಾಳ ಬಿಜೆಪಿಗೆ ಗುಡ್ ಬೈ


ಯಾದಗಿರಿ: ಶಹಾಪುರದ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಕೊನೆಗೂ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಬಿಜೆಪಿ, ಅಮಿನರಡ್ಡಿ ಯಾಳಗಿಗೆ ಟಿಕೆಟ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸಿಡಿದೆದ್ದಿದ್ದ ಶಿರವಾಳ, ಕಳೆದ ಮೂರು ದಿನ ನಿರಂತರ ಬೆಂಬಲಿಗರ ಸಭೆ ನಡೆಸಿ, ನಿರ್ಧಾರ ಸಸ್ಪೆನ್ಸ್ ಇಟ್ಟಿದ್ದರು.
ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ತೆನೆಹೊತ್ತ ಮಹಿಳಾ ಪಾರ್ಟಿ ಸೇರ್ಡೆಯಾದರು. ಈ ವೇಳೆ ಮಾತನಾಡಿ, ಕಳೆದೊಂದು ದಶಕಗಳ ಕಾಲ ಕ್ಷೇತ್ರದಲ್ಲಿ ಬಿಜೆಪಿ ಕಟ್ಟಿ ಬೆಳಸಿದ್ದಕ್ಕಾಗಿ ಆ ಪಕ್ಷ ಸರಿಯಾದ ಉಡುಗೊರೆ ನೀಡಿದೆ.
ಜೆಡಿಎಸ್ ರೈತರ ಪರವಿರುವ ಪಕ್ಷವಾಗಿದ್ದು, ಕ್ಷೇತ್ರದಲ್ಲಿ ತಮ್ಮ ಪರ ಅಲೆ ಇದೆ. ಈ ಬಾರಿ ನನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.