ನ್ಯೂಸ್

ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕರ ಬದಲಾವಣೆ ಚರ್ಚೆ ಇಲ್ಲ

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ, ಪ್ರತಿಪಕ್ಷ ನಾಯಕರ ಬದಲಾವಣೆ ಸಂಬಂಧ ಯಾವುದೇ ಚರ್ಚೆಗಳು ನಮ್ಮ ಪಕ್ಷದಲ್ಲಿ ನಡೆದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸ್ಪಷ್ಟಪಡಿಸಿದರು.

ಮೂರು ತಿಂಗಳಿಗೆ ಒಮ್ಮೆ ನಾನು ದೆಹಲಿಗೆ ಹೋಗಿ ವರದಿ ಕೊಡಬೇಕಿದೆ. ಅದರಂತೆ ಮೊನ್ನೆ ದೆಹಲಿಗೆ ಹೋಗಿ ವರದಿ ಕೊಟ್ಟು ಬಂದಿದ್ದೇನೆ. ಮುಂದಿನ ಮೂರು ತಿಂಗಳ ನಂತರವೂ ವಿರೋಧ ಪಕ್ಷದ ನಾಯಕನಾಗಿಯೇ ವರದಿ ಕೊಟ್ಟು ಬರುತ್ತೇನೆ. ಹೈಕಮಾಂಡ್ ಸೂಚನೆ ಕೂಡ ಇದೇ ರೀತಿ ಇದೆ. ಇಂತಹದರಲ್ಲಿ ಬದಲಾವಣೆಯ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದರು.

ಪ್ರತಿ ಹದಿನೈದು ದಿನಕ್ಕೆ ಒಮ್ಮೆ ಪಕ್ಷದ ಹಿರಿಯರ ಸಭೆ ಮಾಡಿ, ಕೆಲವು ಗೊಂದಲ ಬಗೆಹರಿಸಬೇಕೆಂಬ ಸೂಚನೆ ಇದೆ. ಹೀಗಾಗಿ, ಸಭೆ ನಡೆದಿದೆ ಇದರಲ್ಲಿ ಏನೂ ವಿಶೇಷತೆ ಇಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ವಿಚಾರ ಸದ್ಯಕ್ಕೆ ಇಲ್ಲವೇ ಇಲ್ಲ. ಇನ್ನೂ ಬೇರೆ ಬೇರೆ ರಾಜ್ಯಗಳದ್ದೆಲ್ಲ ನಡೆಯಬೇಕು. ಕೊನೆಯಲ್ಲಿ ಕರ್ನಾಟಕದ್ದು ನಡೆಯುತ್ತದೆ. ನಮ್ಮಲ್ಲಿ ಇದುವರೆಗೆ ಯಾವ ಚರ್ಚೆಯೂ ನಡೆದಿಲ್ಲ. ಮೊನ್ನೆ ಬೆಂಗಳೂರಿನಲ್ಲಿ ಪಕ್ಷದ ಸೂಚನೆಯಂತೆಯೇ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮನೆಯಲ್ಲಿ ಸಭೆ ನಡೆದಿದೆ ಎಂದು ಹೇಳಿದರು.