ವಿಜಯವಾಣಿ ಸುದ್ದಿಜಾಲ ಕೋಲಾರ
ಉತ್ತರ ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಎಲ್ಲಾ ನದಿಗಳು, ಡ್ಯಾಂಗಳು ತುಂಬಿವೆ, ಹೆಚ್ಚಿನ ಪ್ರಮಾಣದ ನೀರನ್ನ ಹೊರಗೆ ಬಿಡುತ್ತಿದ್ದೇವೆ ಹಾಗಾಗಿ ರಸ್ತೆಗಳು ಬಂದ್ ಆಗಿವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೂಳಿ ಹೇಳಿದರು.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಳೆಯಿಂದ ಸಾಕಷ್ಟು ರಸ್ತೆಗಳು ಬಂದ್ ಆಗಿವೆ, ಸಮಸ್ಯೆಗಳು ಆಗುತ್ತಿದ್ದು ಮುಳುಗಡೆ ಪ್ರದೇಶದಲ್ಲಿ ಜನರನ್ನು ಶಿಫ್ಟ್ ಮಾಡುವ, ಕೆಲವೆಡೆ ತೆರವು ಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ನೆರೆ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲವೆಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
ಬಿಜೆಪಿಯವರ ಅಧಿಕಾರದ ಅವಧಿಯಲ್ಲಿ ಏನಾಗಿದೆ, ಯಾರ ಯಾರ ಕಾಲದಲ್ಲಿ ಏನಾಗಿದೆ ಅಂತ ಗೊತ್ತಿದೆ. ನಾವು ನೆರೆಯನ್ನು ಸಮಪರ್ಕವಾಗಿ ನಿರ್ವಹಣೆ ಮಾಡುತ್ತಿದ್ದು, ಬಿಜೆಪಿ ಅರೋಪ ಆಗಿರದೆ ಸಲಹೆ ರೂಪದಲ್ಲಿದ್ದರೆ ಉತ್ತಮ, ಬಿಜೆಪಿ ಯವರು ನೆರೆಯನ್ನು ಸರಿಯಾಗಿ ನಿರ್ವಹಣೆ ಮಾಡಿರುವುದು ದಾಖಲೆಗಳಲ್ಲಿದೆಯೇ ಎಂದರು.
ಮೂಡ ಪಾದಯಾತ್ರೆ ಕುರಿತು ಸಚಿವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಈಗಾಗಲೆ ಸಿಎಂ ಅವರೆ ಸುದೀರ್ಘ ವಾಗಿ ಅದರ ಬಗ್ಗೆ ಹೇಳಿದ್ದಾರೆ. ದಾಖಲೆ ನೀಡಿರುವುದು ಕಾಂಗ್ರೆಸ್ ನಾಯಕರೆ ಎಂಬ ಅರೋಪವನ್ನ ತಳ್ಳಿ ಹಾಕಿದ ಸಚಿವ ಜಾರಕಿ ಹೊಳಿ ೧೦ ರೂಪಾಯಿ ಕೊಟ್ರೆ ದಾಖಲೆ ಯಾರಿಗೆ ಬೇಕಾದ್ರು ಸಿಗುತ್ತೆ, ಅದೆಲ್ಲಾ ಪಬ್ಲಿಕ್ ಡಾಕ್ಯುಮೆಂಟ್, ಬಿಜೆಪಿ ಅರೋಪ ಮಾಡಬಹುದು ಅದಕ್ಕೆಲ್ಲಾ ಉತ್ತರ ಕೊಡಕ್ಕೆ ಆಗಲ್ಲ ಎಂದು ತಿರುಗೇಟು ನೀಡಿದರು.
ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸತತವಾಗಿ ಅನ್ಯಾಯವಾಗುತ್ತಿದೆ, ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕಿದ್ದಿದ್ದು ಕೇಂದ್ರದ ಜವಾಬ್ದಾರಿ. ನೆರೆ ಬಂದಾಗ, ಬರಗಾಲ ಬಂದಾಗಲೂ ಕೊಟ್ಟಿಲ್ಲ, ನಮ್ಮ ಜಿಎಸ್‌ಟಿ ಹಣ ಸರಿಯಾಗಿ ಬರುತ್ತಿಲ್ಲ. ಹತ್ತು ವರ್ಷಗಳಿಂದ ಕೇಂದ್ರದೊAದಿದೆ ನಮ್ಮ ಸಂಘರ್ಷ ಮುಂದುವರೆದಿದೆ ಎಂದರಲ್ಲದೆ ಮೋದಿಯವರಿಗೆ ಮೂರನೇ ಭಾರಿ ಆಶಿರ್ವಾದ ಮಾಡಿದ್ದಾರೆ ಒಳ್ಳೆಯದಾಗಲಿ ಎಂದಷ್ಟೆ ಹೇಳಬಹುದು ಕರ್ನಾಟಕಕ್ಕೆ ಹೆಚ್ಚಿನ ಹಣ ನೀಡಲಿ ಎಂದರು.
ಬಿಜೆಪಿ ಪಾದಯಾತ್ರೆಗೆ ಬದಲಾಗಿ ನಾವು ಪಾದಯಾತ್ರೆ ಮಾಡುವ ಅವಶ್ಯಕತೆ ಇಲ್ಲ. ಈಗ ಪ್ರತಿಭಟನೆ ಮಾಡುವ ಸ್ಥಾನದಲ್ಲಿ ಅವರಿದ್ದಾರೆ ನಾವು ಉತ್ತರ ಕೊಡಬೇಕು ಅಷ್ಟೆ. ಅಧಿವೇಶನದಲ್ಲಿ ಕೆಲವು ವಿಚಾರಗಳಿಗೆ ಸೀಮಿತವಾಗಿದೆ, ಕೆಲವೊಮ್ಮೆ ಅಧಿವೇಶನ ಹೀಗಾಗುತ್ತೆ. ಪ್ರಾಮುಖ್ಯತೆ ನೀಡಬೇಕಾದ ವಿಚಾರಗಳಿಗೆ ಪ್ರಾಮುಖ್ಯತೆ ನೀಡಿದಾಗ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಮನಗರ ಬದಲಾವಣೆ ವಿಚಾರ:
ರಾಮನಗರ ಬದಲಾವಣೆ ವಿಚಾರ ಕುಮಾರಸ್ವಾಮಿ ಅವರ ಜಿಲ್ಲೆಗೆ ಸಂಭAದಪಟ್ಟದ್ದು, ಅವರು ಏನೇ ಹೇಳಿಕೆ ನೀಡಿದರು ಅದಕ್ಕೆ ಉತ್ತರ ನೀಡುವುದಕ್ಕೆ ಆಗುವುದಿಲ್ಲ. ರಾಮನಗರ ಹೆಸರು ಬದಲಾವಣೆಗೆ ಅದಕ್ಕೆ ಆದ ಮಾನದಂಡಗಳಿವೆ ಹಾಹಾಗಿ ಬದಲಾವಣೆ ಮಾಡ್ತಾರೆ. ಈ ಕುರಿತು ನಾನು ಮಾತನಾಡಿದರೆ ಮತ್ತೆ ಮೂರು ದಿನ ನನ್ನ ಮಾತಿನ ಚರ್ಚೆ ಶುರುವಾಗುತ್ತೆ, ಇದರಲ್ಲಿ ನನ್ನನ್ನು ತಗಲಾಕುವ ಕೆಲಸ ಬೇಡ ಎಂದುರು.
ಉಪ ಮುಖ್ಯಮಂತ್ರಿ ವಿಚಾರ ಈಗ ಅದರ ಅವಶ್ಯಕತೆ ಇಲ್ಲ, ಅದು ಸಧ್ಯಕ್ಕೆ ಸ್ಟಾಪ್ ಆಗಿದೆ, ನಾನು ಆಕಾಂಕ್ಷಿ ಎಂದು ಎಲ್ಲಿಯೂ ಹೇಳಿಲ್ಲ. ಅದರ ಬಗ್ಗೆ ಮಾತನಾಡುವುದು ಬೇಡ, ಲೋಕಸಭಾ ಚುನಾವಣೆಗೂ ಮುನ್ನಾ ಕೇಳಿದ್ದವು, ಈಗ ಚುನಾವಣೆ ಮುಗಿದ ನಂತರ ಅದರ ಅವಶ್ಯಕತೆ ಇಲ್ಲ. ಅದು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ, ಆದರೆ ಇದಕ್ಕೆ ಶಸ್ತ್ರ ತ್ಯಾಗ, ಸಪ್ಪಗೆ ಅನ್ನುವಂತಹ ಅರ್ಥ ಕಲ್ಪಿಸುವುದು ಬೇಡ. ಅದರ ಬಗ್ಗೆ ಚರ್ಚೆ ಇಲ್ಲ. ಆಸೆ ಈಗ ಇಲ್ಲ ಎಂದರು.
ಇನ್ನೂ ಬಹಳಷ್ಟು ಜನರಿಗೆ ಅವಕಾಶ ಸಿಕ್ಕಿಲ್ಲ, ರಾಜಕೀಯದಲ್ಲಿ ಕಾಯಬೇಕು ಕಾಯೋಣ ಎಂದರಲ್ಲದೆ ಇತ್ತೀಚೆಗೆ ಕಾಂಗ್ರೇಸ್ ಹೈ ಕಮಾಂಡ್ ನೀಡಿದ್ದ ಎಚ್ಚರಿಕೆಗೆ ಜಾರಕಿ ಹೊಳಿ ಜೋತು ಬಿದ್ದಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ನಾನು ಅದಕ್ಕೆ ಸಮರ್ಥನಾ, ಕಾಂಪಿಟೇಟ್ ಅಥಾರ್ಟಿನಾ, ನನ್ನ ಯಾಕೆ ಕೆಳುತ್ತಿರಿ. ನೀವು ಸಿಎಂ ಅವರನ್ನ ಕೇಳಬೇಕು, ನನ್ನ ಕೇಳಿದ್ರೆ ನಾನು ಏನು ಹೇಳಲಿ. ವಾಲ್ಮೀಕಿ ಹಗರಣದ ಸಂಬAಧ ಈಗಾಗಲೇ ಎಸ್.ಐ.ಟಿ, ಸಿಬಿಐ, ಈಡಿ ತನಿಖೆ ಮಾಡುತ್ತಿದೆ. ಅವರೆ ನ್ಯಾಯಾಲಯಕ್ಕೆ ವರದಿ ಒದಗಿಸುತ್ತಾರೆ. ಅದು ಅಂತಿಮ, ಎಲ್ಲಾ ಜವಾಬ್ದಾರಿ ಸಿಎಂ ಆಗೋದಿಲ್ಲ, ಸಿಎಂ ದುಡ್ಡು ಕೊಡೊದು ಇಲಾಖೆಗೆ, ನಮ್ಮಿಂದ ಬೇರೆ ಕಡೆ ಹೋದಾಗ ಆ ಇಲಾಖೆ ಸಚಿವರು ಜವಾಬ್ದಾರರು ಎಂದು ತಿಳಿಸಿದರು.
ಚಿತ್ರ ೨೭ ಕೆ.ಎಲ್.ಆರ್. ೦೨ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೂಳಿ ಭಾವಚಿತ್ರ.