ನ್ಯೂಸ್

ಬಿಜೆಪಿ ದಲಿತರು, ಅಂಬೇಡ್ಕರ್ ವಿರೋಧಿಯಲ್ಲ

ಎಚ್.ಡಿ.ಕೋಟೆ: ಭಾರತೀಯ ಜನತಾ ಪಕ್ಷವನ್ನು ದಲಿತರು ಹಾಗೂ ಅಂಬೇಡ್ಕರ್ ವಿರೋಧಿಗಳು ಎಂದು ಹೇಳುತ್ತಿದ್ದಾರೆ ಹೊರತು ಸಾಬೀತು ಮಾಡಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.


ಪಟ್ಟಣದ ಕನಕ ಭವನದಲ್ಲಿ ಬುಧವಾರ ಆಯೋಜಿಸಿದ್ದ ಎಸ್‌ಸಿ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡಿ ಅಂಬೇಡ್ಕರ್‌ಗೆ ನಿಜವಾಗಿ ಗೌರವ ಸಲ್ಲಿಸಿದ್ದು ಬಿಜೆಪಿ. ಡಬಲ್ ಇಂಜಿನ್ ಸರ್ಕಾರ ಜನರಿಗೆ ಏನು ಮಾಡಿಲ್ಲ ಎಂದು ಕಾಂಗ್ರೆಸ್ ಹೇಳುತ್ತಾ ಬಂದಿದ್ದು, 60 ವರ್ಷಗಳ ಕಾಲ ಜನರ ಮೂಗಿಗೆ ತುಪ್ಪ ಸವರಿ, ಕಿವಿಯಲ್ಲಿ ಹೂ ಇಟ್ಟಿದೆ. ಆದರೆ, ಬಿಜೆಪಿ ಅನೇಕ ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದೆ ಎಂದು ತಿಳಿಸಿದರು.


ತಾಲೂಕು ಚುನಾವಣಾ ಪ್ರಭಾರಿ ಅಶ್ವತ್ಥ ನಾರಾಯಣ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಲ ಹೊರುವ ಪದ್ಧತಿ ಇತ್ತು. ಅದನ್ನು ವಿರೋಧಿಸಿ ತೆಗೆದು ಹಾಕಿದ ಬಿ.ಬಸವಲಿಂಗಪ್ಪ ಅವರನ್ನು ಮಂತ್ರಿ ಮಂಡಲದಿಂದ ತೆಗೆದು ಹಾಕಿದ್ದು ಕಾಂಗ್ರೆಸ್. ಹಾಗಾಗಿ ದಲಿತರು ಜಾಗೃತರಾಗಬೇಕು ಎಂದರು.


ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಮೈ.ವಿ.ರವಿಶಂಕರ್, ಮಹಾದೇವಯ್ಯ, ಎಂ.ಅಪ್ಪಣ್ಣ, ಗುರುಸ್ವಾಮಿ, ಎಚ್.ಸಿ.ಲಕ್ಷ್ಮಣ್, ವೆಂಕಟಸ್ವಾಮಿ, ಮಲ್ಲಾಡಿ ನಾಗರಾಜು, ರಾಜು ಬಿಡಗಲು, ಉಡ ನಾಗರಾಜು, ಮಹಾದೇವಯ್ಯ, ಸೂರ್ಯನಾರಾಯಣ, ನಂದೀಶ, ಗೋಪಾಲಸ್ವಾಮಿ, ಆನಗಟ್ಟಿ ಜವರಯ್ಯ, ಯೋಗೇಶ್, ಗಿರೀಶ್, ಸುನಂದರಾಜು, ಮೊತ್ತ ಬಸವರಾಜಪ್ಪ, ರಾಧಿಕಾ ಶ್ರೀನಿವಾಸ್ ಇದ್ದರು.