ನ್ಯೂಸ್

ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಕರೊನಾಗಿಂತ ಹಿಂದೆ ಬಿಎಂಟಿಸಿ ನಿತ್ಯ 6 ಸಾವಿರಕ್ಕೂ ಹೆಚ್ಚಿನ ಬಸ್​ ಕಾರ್ಯಾಚರಣೆ ಮಾಡುತ್ತಿತ್ತು. ಅದರಿಂದ 3 ಕೋಟಿ ರೂ. ಆದಾಯ ಬರುತ್ತಿತ್ತು. ಆದರೀಗ 4 ಸಾವಿರ ಬಸ್​ ಕಾರ್ಯಾಚರಣೆ ಮಾಡುತ್ತಿದ್ದು, ಆದಾಯ 1 ಕೋಟಿ ರೂ.ಗೆ ಕುಸಿದಿದೆ. ಆದಾಯ ಕಡಿಮೆ ಇರುವ ಕಾರಣ, ಬಿಎಂಟಿಸಿಗೆ ನಷ್ಟವುಂಟಾಗುತ್ತಿದೆ. ಪ್ರಮುಖವಾಗಿ ಸಿಬ್ಬಂದಿ ವೇತನ, ಬಸ್​ಗಳ ನಿರ್ವಹಣೆಗೆ ಹೆಚ್ಚಿನ ರ್ಖಚಾಗುತ್ತಿದೆ. ಆದಾಯಕ್ಕೆ ಹೋಲಿಸಿದರೆ ಖಚಿರ್ನ ಪ್ರಮಾಣ ಹೆಚ್ಚಿದೆ.

ಆದಾಯಕ್ಕಿಂತ ಖರ್ಚು ಹೆಚ್ಚು:

ಕೊರೋನಾ ಪೂರ್ವದಲ್ಲಿ ನಿತ್ಯ 35 ಲಕ್ಷಕ್ಕೂ ಹೆಚ್ಚಿನ ಜನರು ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಸುತ್ತಿದ್ದರು. ಲಾಕ್​ಡೌನ್​ ಸಡಿಲಿಕೆ ಬಳಿಕ ಬಸ್​ ಸೇವೆ ಮತ್ತೆ ಆರಂಭವಾದರೂ ಪ್ರಯಾಣಿಕರ ಸಂಖ್ಯೆ ಹಿಂದಿನಷ್ಟಿರಲಿಲ್ಲ. ಆರಂಭದಲ್ಲಿ ಪ್ರಯಾಣಿಕರ ಸಂಖ್ಯೆ 1 ಲಕ್ಷ$ವೂ ದಾಟಿರಲಿಲ್ಲ. ಕರೊನಾ ಭೀತಿ ಕಾರಣ ಜನರು ಸಮೂಹ ಸಾರಿಗೆಯತ್ತ ಮುಖ ಮಾಡಿರಲಿಲ್ಲ. ದಿನಗಳೆದಂತೆ ಕರೊನಾ ಭೀತಿ ಕಡಿಮೆಯಾಗುತ್ತಿದ್ದು, ಈಗ ಪ್ರಯಾಣಿಕರ ಸಂಖ್ಯೆ 14 ಲಕ್ಷಕ್ಕೆ ಏರಿಕೆಯಾಗಿದೆ. ಇದು ಇನ್ನಷ್ಟು ಹೆಚ್ಚಲಿದ್ದು, ಮುಂದಿನ ದಿನಗಳಲ್ಲಿ ಹಿಂದಿನಷ್ಟು ಪ್ರಯಾಣಿಕರು ಬಿಎಂಟಿಸಿ ಬಸ್​ಗಳಿಗೆ ಬರುತ್ತಾರೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ವಿಶ್ವಾಸವ್ಯಕ್ತಪಡಿಸಿದ್ದಾರೆ.

ಬೆಂಗಳೂರು:ಕರೊನಾ ಭೀತಿಯಿಂದ ಕುಸಿತವಾಗಿದ್ದ ಬಿಎಂಟಿಸಿ ಬಸ್​ ಪ್ರಯಾಣಿಕರ ಸಂಖ್ಯೆ ಇದೀಗ ಏರಿಕೆಯಾಗಿದ್ದು, ಪ್ರತಿದಿನ ಸರಾಸರಿ 14 ಲಕ್ಷ ಜನರು ಬಸ್​ನಲ್ಲಿ ಸಂಚರಿಸುತ್ತಿದ್ದಾರೆ.