ನ್ಯೂಸ್

ಬಿಎಂಆರ್​ಸಿಎಲ್​ ನೇಮಕಾತಿ ರದ್ದು

ಪರೀೆ ಬರೆದವರಿಗೆಲ್ಲ ಹಣ ವಾಪಾಸು ನೀಡಲಾಗುತ್ತಿದ್ದು, ಅದಕ್ಕಾಗಿ ಅಭ್ಯಥಿರ್ಗಳು ಅಜಿರ್ ಸಂಖ್ಯೆ ಮತ್ತು ಬ್ಯಾಂಕ್​ ಖಾತೆಯ ವಿವರವನ್ನು ಬಿಎಂಆರ್​ಸಿಎಲ್​ಗೆ ನೀಡಬೇಕಿದೆ. ವೆಬ್​ಸೈಟ್​ https://recruit.bmrc.co.in/ ನಲ್ಲಿ ಜನ್ಮ ದಿನಾಂಕ, ಅಜಿರ್ ಸಂಖ್ಯೆ ಮತ್ತು ಬ್ಯಾಂಕ್​ ಖಾತೆ ನಮೂದಿಸಿದರೆ ಅದನ್ನಾಧರಿಸಿ ಹಣ ವಾಪಾಸು ನೀಡಲಾಗುತ್ತದೆ.

ಬ್ಯಾಂಕ್​ ಖಾತೆ ಪಡೆದು ಹಣ ವಾಪಾಸ್​:

ಬಿಎಂಆರ್​ಸಿಎಲ್​ 2ನೇ ಹಂತಕ್ಕಾಗಿ 21 ಕಿರಿಯ ಇಂಜಿನಿಯರ್​, 17 ಸೆಕ್ಷನ್​ ಇಂಜಿನಿಯರ್​ ಮತ್ತು 134 ನಿರ್ವಹಣಾಗಾರರನ್ನು ನೇಮಕ ಮಾಡಿಕೊಳ್ಳಬೇಕಿದೆ. ಅದರಲ್ಲಿ 18,530 ಜನರು ನಿರ್ವಹಣಾಗಾರ ಹುದ್ದೆಗೆ, 11,300 ಜನರು ಸೆಕ್ಷನ್​ ಇಂಜಿನಿಯರ್​ ಹಾಗೂ 9,500 ಜನರು ಕಿರಿಯ ಇಂಜಿನಿಯರ್​ ಹುದ್ದೆಗಾಗಿ ಪರೀೆ ಬರೆದಿದ್ದರು.

ಯಾವೆಲ್ಲ ಹುದ್ದೆಗಳು?:

ನಮ್ಮ ಮೆಟ್ರೋ 2ನೇ ಹಂತದ ಯೋಜನೆ ಅಗತ್ಯವಿರುವ ಇಂಜಿನಿಯರ್​ ಮತ್ತು ನಿರ್ವಹಣಾ ವಿಭಾಗದ ಸಿಬ್ಬಂದಿಗಳ ನೇಮಕಕ್ಕೆ ಬಿಎಂಆರ್​ಸಿಎಲ್​ 2019ರ ಜನವರಿಯಲ್ಲಿ ಪ್ರಕ್ರಿಯೆ ನಡೆಸಿತ್ತು. ಕರ್ನಾಟಕ ಪರೀಾ ಪ್ರಾಧಿಕಾರ 174 ಹುದ್ದೆಗಳಿಗೆ ನಡೆಸಿದ್ದ ಪರೀಾ ಪ್ರಕ್ರಿಯೆಯಲ್ಲಿ 39,330 ಜನರು ಪಾಲ್ಗೊಂಡಿದ್ದರು. ಅದಾದ ನಂತರ ಬಿಎಂಆರ್​ಸಿಎಲ್​ ಯಾವುದೇ ಪ್ರಕ್ರಿಯೆ ನಡೆಸಿರಲಿಲ್ಲ. ಅಲ್ಲದೆ, ಲಿತಾಂಶದ ಪಟ್ಟಿಯನ್ನೂ ಪ್ರಕಟಿಸಿರಲಿಲ್ಲ. ಇದೀಗ ಕರೊನಾ ಹಿನ್ನೆಲೆಯಲ್ಲಿ ಬಿಎಂಆರ್​ಸಿಎಲ್​ ಆಥಿರ್ಕ ಸಂಕಷ್ಟಕ್ಕೊಳಗಾಗಿದ್ದು, ನೇಮಕ ಪ್ರಕ್ರಿಯೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಅಲ್ಲದೆ, ಪರೀೆಯಲ್ಲಿ ಪಾಲ್ಗೊಂಡಿದ್ದವರಿಗೆಲ್ಲ ಪರೀಾ ಶುಲ್ಕ ವಾಪಾಸು ನೀಡುವುದಾಗಿ ಪ್ರಕಟಿಸಲಾಗಿದೆ.

ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದ ಯೋಜನೆಗೆ ಅವಶ್ಯವಿರುವ 174 ಹುದ್ದೆಗಳಿಗೆ ನಡೆಸಲಾದ ನೇಮಕ ಪ್ರಕ್ರಿಯೆಯನ್ನು ರದ್ದು ಮಾಡಲಾಗಿದ್ದು, ಪರೀಾಥಿರ್ಗಳು ಪಾವತಿಸಿದ್ದ ಪರೀಾ ಶುಲ್ಕ ವಾಪಾಸು ನೀಡುವುದಾಗಿ ಬಿಎಂಆರ್​ಸಿಎಲ್​ ತಿಳಿಸಿದೆ.