ವಿಜಯವಾಣಿ ಸುದ್ದಿಜಾಲ ಕೋಲಾರ
ಹಿರಿಯ ಕವಿ ಬಿ.ಆರ್.ಲಕ್ಷö್ಮಣ್‌ರಾವ್ ತಮ್ಮ ಕವಿತೆಗಳಲ್ಲಿ ಸಾಮಾಜಿಕ ಶಾಂತಿಯನ್ನು ಬಯಸುತ್ತದೆ. ಭಾವಗೀತೆ, ಸಿನಿಮಾ ಸಾಹಿತ್ಯ ಎರಡು ಪ್ರಕಾರಗಳಲ್ಲಿ ಸಾಹಿತ್ಯದ ಫಲವನ್ನು ಹರಿಸಲು ಶ್ರಮಿಸಿದ್ದಾರೆ. ಇಂದಿಗೂ ಜನ ಇವರ ಶೃಂಗಾರ ಕವಿತೆಗಳನ್ನು ಗುನುಗುತ್ತಾರೆ ಎಂದರೆ ಇವರ ಕವಿತೆಯ ಸತ್ವ ಎಂಥದ್ದು ಎಂಬುದು ಅರಿವಾಗುತ್ತದೆ ಎಂದು ಕವಿ ವಿಮರ್ಶಕ ಹಾಗೂ ಬೆಂಗಳೂರು ವಿವಿ ಕನ್ನಡ ಅಧ್ಯಾಪಕ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಓದುಗ ಕೇಳುಗ ನಮ್ಮ ನಡೆ ೪೭ನೇ ಕಾರ್ಯಕ್ರಮದಲ್ಲಿ ಹಿರಿಯ ಕವಿ ಬಿ.ಆರ್.ಲಕ್ಷö್ಮಣ್‌ರಾವ್ ರವರ "ಬೆಸ್ ಆಫ್ ಬಿ.ಆರ್.ಎಲ್" ಕೃತಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮಲ್ಲಿ ಸಿದ್ಧಿ ಪ್ರಸಿದ್ಧಿಯನ್ನು ಪಡೆದ ಕವಿಗಳು ಇದ್ದಾರೆ. ಅವರಲ್ಲಿ ಸಿದ್ದಿಸುವ ಕವಿಗಳು ಒಂದೆಡೆಯಾದರೆ ಪ್ರಸಿದ್ಧಿ ಪಡೆದ ಕವಿಗಳು ಇನ್ನೊಂದು ಕಡೆ ಇದ್ದಾರೆ. ಆದರೆ ಸಿದ್ದಿ ಪ್ರಸಿದ್ಧಿಯನ್ನು ಎರಡನ್ನೂ ಪಡೆದ ಕವಿಗಳು ತುಂಬಾ ಅಪರೂಪ. ಅಂಥವರ ಸಾಲಿನಲ್ಲಿ ಬಿ ಆರ್ ಲಕ್ಷ್ಮಣ್ ರಾವ್ ಅವರು ಸೇರುತ್ತಾರೆ. ನವ್ಯ ಪ್ರಾರಂಭವಾಯಿತು ಅಂತಹ ಸಂದರ್ಭದಲ್ಲಿ ಬಿ ಆರ್ ಎಲ್ ಅವರು ಪುನಹ ನವೋದಯಕ್ಕೆ ಮರಳಿ ಎರಡರಲ್ಲೂ ಸಹಿಸಿಕೊಂಡವರು ಎಂದರು.
ಹಿರಿಯ ಕವಿ ಬಿ ಆರ್ ಲಕ್ಷ್ಮಣ್ ರಾವ್ ಮಾತನಾಡಿ, ನಾನು ಸರಿಯಾದ ಸ್ಥಳ, ಸರಿಯಾದ ವಾತಾವರಣ, ಸರಿಯಾದ ಜನಗಳ ಮಧ್ಯೆ ಇರುವುದರಿಂದ ಲಕ್ಕಿ ಕವಿ ಎನಿಸಿಕೊಂಡೆ. ಗೋಪಾಲಕೃಷ್ಣ ಅಡಿಗರ ಪ್ರಭಾವ ನನ್ನ ಮೇಲೆ ಇದೆ ಎನ್ನಲು ನನಗೆ ಹೆಮ್ಮೆ ಇದೆ. ಜನ ನನ್ನ ತುಂಟ ಕವಿ ಎಂದರೂ ನನಗೆ ಸಂತೋಷವೆ. ಇದಕ್ಕೆ ಕಾರಣ ನಾನು ತುಂಟನಾಗಿ ಬೆಳೆದಿದ್ದೇನೆ ಮತ್ತು ತುಂಟ ಎನಿಸಿಕೊಳ್ಳಲು ನನಗೆ ಖುಷಿ ಇದೆ ಎಂದರು.
ಕವಿಗೆ ನಿಜವಾದ ಸನ್ಮಾನ ಎಂದರೆ, ಅದು ಓದುಗರ ಮೆಚ್ಚುಗೆ ಪ್ರಶಸ್ತಿ ಪುರಸ್ಕಾರಗಳು ಯಾವುದು ಕವಿಗೆ ಬೇಕಾಗಿಲ್ಲ. ಕೋಲಾರ ಜಿಲ್ಲೆ ನನ್ನ ನನ್ನ ಹುಟ್ಟೂರು, ಹಾಗಾಗಿ ಈ ಕಾರ್ಯಕ್ರಮ ಬಂದಾಗ ನನಗೆ ನಿಜವಾಗಿ ಸಾರ್ಥಕ ಭಾವನೆ ಮೂಡಿದೆ. ಓದುಗ ಕೇಳುದ ಇಂತಹ ಒಂದು ಅರ್ಥಪೂರ್ಣ ಕಾರ್ಯಕ್ರಮ ಮಾಡಿ, ಸಾಹಿತ್ಯದ ಬೆಳವಣಿಗೆಗೆ ಕಾರಣ ಆಗುತ್ತಿರುವುದು ತುಂಬಾ ಸಂತೋಷದ ಸಂಗತಿ ಎಂದರು.
ಕೇಳುಗರೊAದಿಗೆ ಸಂವಾದ ನಡೆಸಿದವರು ಇಂದಿನ ಕವಿಗಳು ಕವಿತೆ ಕಾವ್ಯವನ್ನು ಯಾವ ಪ್ರಕಾರದಲ್ಲೂ ಬರೆದರೂ ಪರವಾಗಿಲ್ಲ. ಆದರೆ ಕವಿತೆಯಲ್ಲಿ ಲಯ ಇದ್ದರೆ ಬಹಳ ಚೆನ್ನಾಗಿರುತ್ತೆ. ಬರಹಗಾರರಿಗೆ ಪ್ರಸ್ತುತ ಸಮಾಜದಲ್ಲಿ ಜಾಲತಾಣದಲ್ಲಿ ವಿಪುಲವಾದ ಅವಕಾಶಗಳು ತೆರದೇ ಇರುತ್ತದೆ. ಹಾಗಾಗಿ ಬರವಣಿಗೆ ಎಲ್ಲರಿಗೂ ಸಿದ್ಧಿಸುವ ಅವಕಾಶಗಳಿವೆ ಎಂದರು.
ಕವಿ ವಿಮರ್ಶಕ ಹಾಗೂ ಕೆ.ಆರ್.ಪುರಂ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಟಿ.ಯಲ್ಲಪ್ಪ ಬಿ.ಆರ್.ಲಕ್ಷö್ಮಣ್‌ರಾವ್ ರವರ "ಬೆಸ್ಟ್ ಆಫ್ ಬಿ.ಆರ್.ಎಲ್" ಕೃತಿಯ ಬಗ್ಗೆ ಮಾತನಾಡಿ, ಲಕ್ಷ್ಮಣ್ ರಾವ್ ರವರ ಸಾವಿರಕ್ಕೂ ಹೆಚ್ಚು ಪುಟಗಳ ಕವಿತೆಗಳು ವಿಮರ್ಶೆಗೆ ಒಳಪಡುತ್ತದೆ. ೭೦ ಮತ್ತು ೮೦ ರ ದಶಕದಲ್ಲಿ ಸಾಹಿತ್ಯದ ಹೊಸ ಪ್ರಕಾರವನ್ನೇ ಸೃಷ್ಟಿ ಮಾಡಿದರು. ಓದುಗರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕವಿತೆಗಳು ಲಕ್ಷ್ಮಣ್ ರಾವ್ ರವರ ಸಾಹಿತ್ಯದಲ್ಲಿ ಸೃಷ್ಟಿಯಾಯಿತು. ಬರಹದಲ್ಲಿ ಕಾಮ, ಪ್ರೇಮ ಅಡಗಿದ್ದರೂ ಅದಕ್ಕೆ ಅಶ್ಲೀಲತೆಯ ಸೋಂಕನ್ನು ಸ್ವಲ್ಪವೂ ತಾಕದಂತೆ ಲಕ್ಷ್ಮಣ್ ರಾವ್‌ರವರು ಭಾವಪೂರ್ಣ ನೀಡಿದ್ದಾರೆ. ಸಿ.ಅಶ್ವತ್ ರಂತಹ ಸಂಗೀತಗಾರರಿಗೆ ಬಿಆರ್ ಲಕ್ಷ್ಮಣ ರವರಂತಹ ಸಾಹಿತಿಗಳ ಅವಶ್ಯಕತೆ ಇತ್ತು. ನಮ್ಮ ಸಂಸ್ಕೃತಿಯನ್ನು ಮತ್ತು ಪಾಶ್ಚಾತ್ಯ ಸಂಸ್ಕೃತಿಯನ್ನು ಮುಖಾಮುಖಿ ಮಾಡುವಂತಹ ಸಾಹಸ ತೋರಿದಂತವರು ಬಿ ಆರ್ ಲಕ್ಷ್ಮಣ್ ರಾವ್ ಅವರು ಎಂದು ತಮ್ಮ ವಿಮರ್ಶೆಯಲ್ಲಿ ತಿಳಿಸಿದರು.
ಓದುಗ ಕೇಳುಗ ಬಳಗದ ಹೆಚ್.ಎ.ಪುರುಷೋತ್ತಮ, ಆ.ಮಾ.ರಾಮಚಂದ್ರ, ಉಪನ್ಯಾಸಕ ಜೆ.ಜಿ.ನಾಗರಾಜ್, ರವೀಂದ್ರ ಸಿಂಗ್, ಗೋವಿಂದಪ್ಪ, ಕೋಗಿಲಹಳ್ಳಿ ಕೃಷ್ಣಪ್ಪ, ಸಿ.ರಮೇಶ್ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ ೨೩ ಕೆ.ಎಲ್.ಆರ್. ೦೩ : ಓದುಗ ಕೇಳುಗ ನಮ್ಮ ನಡೆ ೪೭ನೇ ಕಾರ್ಯಕ್ರಮದಲ್ಲಿ ಹಿರಿಯ ಕವಿ ಬಿ.ಆರ್.ಲಕ್ಷö್ಮಣ್ ರಾವ್ ಮಾತನಾಡುತ್ತಿರುವುದು. ವಿಮರ್ಶಕ ಹಾಗೂ ಪ್ರಾಧ್ಯಾಪಕ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, ಡಾ.ಟಿ.ಯಲ್ಲಪ್ಪ ಮುಂತಾದವರು ಇದ್ದರು.