ಶ್ರೀರಾಮ ನವಮಿ ನಿಮಿತ್ತ ರಾಯಚೂರಿನ ಸ್ಟೇಷನ್ ರಸ್ತೆಯಲ್ಲಿರುವ ರಾಮ ಮಂದಿರದಲ್ಲಿ ರಾಮ, ಸೀತೆ, ಲಕ್ಷ್ಮಣ ಮೂರ್ತಿಗಳಿಗೆ ಬುಧವಾರ ವಿಶೇಷ ಅಲಂಕಾರ ಮಾಡಲಾಯಿತು. 
ನ್ಯೂಸ್

ಬಾಲರಾಮ ಮೂರ್ತಿಯ ಶಿಲೆ ಸಿಕ್ಕ ಹಾರೋಹಳ್ಳಿಯಲ್ಲಿ ಪೂಜೆ

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಪ್ರಯುಕ್ತ ಬಾಲರಾಮ ಮೂರ್ತಿಯ ಶಿಲೆ ಸಿಕ್ಕ ಹಾರೋಹಳ್ಳಿಯಲ್ಲಿ ಜ.22 ರಂದು ಪೂಜಾ ಕಾರ್ಯ ಹಾಗೂ ಸಂಜೆ ಮೈಸೂರಿನ ಅಶೋಕ ರಸ್ತೆಯಲ್ಲಿ ಲಕ್ಷ ದೀಪೋತ್ಸವ ಏರ್ಪಡಿಸಲಾಗಿದೆ ಎಂದು ಅರ್ಚಕ ಪ್ರಹ್ಲಾದ ರಾವ್ ತಿಳಿಸಿದರು.

ಹಾರೋಹಳ್ಳಿ-ಗುಜ್ಜೇಗೌಡನಪುರದ ಶಿಲೆ ಸಿಕ್ಕ ಎಚ್.ರಾಮದಾಸ್ ಅವರ ಜಮೀನಿನಲ್ಲಿ ಜ.22 ರಂದು ಬೆಳಗ್ಗೆ 9.30ರಿಂದ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಶಾಸಕ ಜಿ.ಟಿ.ದೇವೇಗೌಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಶಿಲೆ ಸಿಕ್ಕ ಜಾಗದಲ್ಲಿ ರಾಮಮಂದಿರ ನಿರ್ಮಿಸುವ ಸಂಕಲ್ಪ ಕೈಗೂಡಬೇಕಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಸಂಜೆ 6.30ಕ್ಕೆ ಅಶೋಕ ರಸ್ತೆಯಲ್ಲಿ ಲಕ್ಷ ದೀಪೋತ್ಸವ ಹಾಗೂ ಶ್ರೀ ವೀರಗಣಪತಿ ದೇವಸ್ಥಾನದಲ್ಲಿ ರಾಮತಾರಕ ಹೋಮ ಏರ್ಪಡಿಸಿದ್ದು, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಯದುವೀರ್ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಕೇಶವ, ಜಗದೀಶ್ ಕುಮಾರ್, ಹಾರೋಹಳ್ಳಿಯ ರಂಗಸ್ವಾಮಿ, ಮನೋಹರ್ ಇದ್ದರು.