ವಿಜಯವಾಣಿ ಸುದ್ದಜಾಲ ಕೋಲಾರ
ಯಾವುದೇ ದೇಶದಲ್ಲಿ ಹಿಂದೂಗಳಿಗೆ ತೊಂದರೆ ಕೊಟ್ಟರೆ ಭಾರತ ಸುಮ್ಮನಿರುವುದಿಲ್ಲ. ಅದಕ್ಕಾಗಿ ವಿಶ್ವಸಂಸ್ಥೆಯಲ್ಲಿ ನಮ್ಮ ದೇಶದ ಪ್ರಧಾನಮಂತ್ರಿ ಬಾಂಗ್ಲಾ ದೇಶದ ಪ್ರಧಾನಮಂತ್ರಿಗೆ ಹೆಚ್ಚರಿಕೆಯನ್ನು ಕೊಟ್ಟು, ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ತೊಂದರೆಯಾದರೆ ನಾವು ಅದನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ವಿಶ್ವ ಹಿಂದೂ ಪರಿಷತ್ತು, ಆರ್.ಎಸ್.ಎಸ್. ಮತ್ತು ಬಿಜೆಪಿ ವತಿಯಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ನಡೆಸಿದ ಮಾನವ ಸರಪಣಿ ಕಾರ್ಯಕ್ರಮದಲ್ಲಿ ಬಾಂಗ್ಲಾ ದೇಶದ ಹಿಂದೂಗಳೇ ಧೃತಿಗೆಡದಿರಿ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭಿತ್ತಿಪತ್ರಗಳೊಂದಿಗೆ ಪ್ರತಿಭಟನೆ ನಡೆಸಿದ ನಂತರ ಮಾತನಾಡಿದರು.
ಬಾಂಗ್ಲಾದೇಶದಲ್ಲಿರುವ ಹಿಂದುಗಳ ಪರವಾಗಿ ನಾವಿದ್ದೇವೆ. ನಾವೆಲ್ಲಾ ಇನ್ನು ಬದುಕಿದ್ದೇವೆ. ಬಾಂಗ್ಲಾದೇಶದ ಗಡಿಯಿಂದ ಭಾರತಕ್ಕೆ ಬರುವ ಹಿಂದುಗಳಿಗೆ ಭಾರತದ ಗಡಿಯಲ್ಲಿರುವ ಹಿಂದುಗಳು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ನೀವು ಇರುವ ಜಾಗದಲ್ಲೇ ಹೋರಾಟ ಮಾಡಿ, ಈ ದೇಶದ ಪ್ರಧಾನಮಂತ್ರಿ ಆದಿಯಾಗಿ ಭಾರತ ದೇಶದ ಪ್ರತಿಯೊಬ್ಬ ಹಿಂದುಗಳ ಬೆಂಬಲಕ್ಕೆ ಇರುತ್ತೇವೆ ಎಂದು ಹೇಳಿದ ನಂತರ ಬಾಂಗ್ಲಾದೇಶದಲ್ಲಿರುವ ಲಕ್ಷಾಂತರ ಕೋಟ್ಯಾಂತರ ಮಂದಿ ಹಿಂದುಗಳು ಒಗಟ್ಟಾಗಿ ಬಾಂಗ್ಲಾದೇಶದ ಓನರ್‌ಗಳು ನಾವು ಆಗಿದ್ದೇವೆ ಎಂಬ ಹೋರಾಟವನ್ನು ಮಾಡುತ್ತಿರುವ ಹಿನ್ನಲೆಯಲ್ಲಿ ಹಿಂದೂಗಳ ಮೇಲೆ ಹಲ್ಲೆ ಕಡಿಮೆಯಾಗುತ್ತಿದೆ ಎಂದರು.
ಕಾಂಗ್ರೇಸ್‌ನವರು ಚುನಾವಣೆಗೋಸ್ಕರ ಸಮುದಾಯಗಳನ್ನು ಬಳಸಿಕೊಂಡು ಮತ ಹಾಕಿಸಿಕೊಂಡಿದ್ದೀರಿ. ಒಂದು ಸಮುದಾಯಕ್ಕೆ ಅನ್ಯಾಯವಾದರೆ ಬೀದಿಯಲ್ಲಿ ಬಂದು ಹೋರಾಟ ಮಾಡುತ್ತೀರಿ. ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ ಸೇರಿದಂತೆ ಈ ದೇಶದ ಆಲಿಬಾಬ ಮೈತ್ರಿ ಕೂಟಕ್ಕೆ ಹೇಳುವುದಿಷ್ಟೆ, ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ ಮೇಲೆ ಯಾಕೆ ಧನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೆ, ನಿಮಗೆ ಮತ ಮಾತ್ರ ಬೇಕು. ಹಿಂದುಗಳ ಪ್ರಾಣ ಹಾನಿ ನಿಮಗೆ ಬೇಕಾಗಿಲ್ಲವೇ? ರಕ್ಷಣೆ ಮಾಡುವ ಅವಶ್ಯಕತೆ ನಿಮಗಿಲ್ಲವೇ? ಈ ರೀತಿ ಪಾಕಿಸ್ತಾನದ ಏಜೆಂಟರAತೆ ಬಾಂಗ್ಲಾದೇಶದ ಪರವಾಗಿ ವರ್ತನೆ ಮಾಡುತ್ತಿರುವುದು ಕಂಡುಬAದಿದೆ ಎಂದು ಆರೋಪಿಸಿದರು.
ಕಾಂಗ್ರೇಸಿನವರು ಈ ದೇಶದ ಎಲ್ಲಾ ಸಮುದಾಯದ ಪರವಾಗಿ ಇಲ್ಲ. ಒಂದು ಸಮುದಾಯದ ಪರವಾಗಿ ಇದ್ದೀರಿ. ಅದರಲ್ಲೂ ಹಿಂದೂಗಳ ಮೇಲೆ ಹಲ್ಲೆ ನಡೆಸುವವರ ಪರವಾಗಿ ಇದ್ದೀರೆಂಬುದು ಕಾಂಗ್ರೇಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಗೊತ್ತಾಗುತ್ತಿದೆ. ಇದು ಬಹಳ ದಿವಸ ನಡೆಯುವುದಿಲ್ಲ. ನಾವು ಬಾಂಗ್ಲಾದೇಶದವರು ನಮ್ಮ ದೇಶಕ್ಕೆ ಬಂದರೆ ಅಣ್ಣತಮ್ಮಂದಿರAತೆ ನೋಡಿದ್ದೇವೆ. ನಮ್ಮ ದೇಶದವರ ಮೇಲೆ ಹಲ್ಲೆ ನಡೆಸುತ್ತಿರುವುದು ಇದನ್ನು ಸಹಿಸಲು ಸಾಧ್ಯವಿಲ್ಲ. ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೆಚ್ಚರಿಕೆ ನೀಡಿದರು.
ಪೋಲಿಸ್ ಇಲಾಖೆಯವರ ವಿರುದ್ಧ ಗುಡುಗು :
ಭಾರತ ಹಿಂದೂಸ್ತಾನ. ಸರ್ಕಾರಗಳು ಬರುತ್ತವೆ ಹೋಗುತ್ತವೆ. ಶಾಂತಿಯುತ ಹೋರಾಟಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಕಿರುಕುಳಗಳು ಅಗತ್ಯವಿಲ್ಲ. ಅಧಿಕಾರಿಗಳು ಕಾರ್ಯಕರ್ತರ ವಿರುದ್ಧ ಸರಿಯಾಗಿ ನಡೆದುಕೊಳ್ಳಬೇಕು ಎಂದು ಹೆಚ್ಚರಿಸಿದರು.
ವಕ್‌ಬೋರ್ಡ್ ಆಸ್ತಿಗಳು ಸರ್ಕಾರದ ವಶಕ್ಕೆ :
ಕೋಲಾರ ಜಿಲ್ಲೆಯಲ್ಲಿರುವ ಎಷ್ಟೋ ದೇವಸ್ಥಾನ ಜಮೀನುಗಳು, ಶಾಲಾ ಕಾಲೇಜುಗಳ ಆಸ್ತಿಗಳನ್ನು ವಕ್‌ಬೋರ್ಡಿಗೆ ಸೇರಿಸಿದ್ದಾರೆ. ಈ ಬಗ್ಗೆ ಹೋರಾಟಗಳು ನಡೆಸಿದ್ದೇವೆ. ಒಂದು ಕಮಿಟಿಗೆ ಸೇರಿದ ಜಿಲ್ಲಾಧಿಕಾರಿಗಳು ಕೋಲಾರಕ್ಕೆ ಆಗಮಿಸಿದಾಗ ಈ ರೀತಿಯ ಆಸ್ತಿಗಳನ್ನು ವಕ್‌ಬೋರ್ಡಿಗೆ ಸೇರಿಸುವ ಕೆಲಸ ಮಾಡಿದ್ದಾರೆ ಎಂದು ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಜಮೀರ್ ಅಹ್ಮದ್ ಹೀಗಿರುವ ಜಿಲ್ಲಾಧಿಕಾರಿ ಅಕ್ರಂಪಾಷ ವಿರುದ್ಧ ಗುಡುಗಿದರು.
ಒಂದು ಕಮ್ಯೂನಿಟಿ ದೃಷ್ಟಿಯಲ್ಲಿಟ್ಟುಕೊಂಡು ಆ ಕಮ್ಯೂನಿಟಿಯ ವಕ್‌ಬೋರ್ಡಿಗೆ ಆಸ್ತಿಗಳನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ಬಹುಸಂಖ್ಯಾತರಾಗಿರುವ ಹಿಂದೂಗಳು ಮುಸ್ಲಿಂ ಸಮುದಾಯಕ್ಕೆ ವಿರೋಧಿಗಳಲ್ಲ. ಉಳಿದ ಎಲ್ಲಾ ಕಮ್ಯೂನಿಟಿಗಳವರಿಗು ಭೂಮಿಯನ್ನು ಮಂಜೂರು ಮಾಡಬೇಕು. ಇದನ್ನು ಬಿಟ್ಟು ಒಂದು ಕಮ್ಯೂನಿಟಿಯನ್ನು ಮೆಚ್ಚುವಂತಹ ಕೆಲಸ ಮಾಡುತ್ತಿದ್ದೀರಿ ನೀವು ದೇಶ ಪ್ರೇಮಿಗಳಲ್ಲ. ಈ ದೇಶದ ಎಲ್ಲಾ ಸಮುದಾಯದವರನ್ನು ಮೆಚ್ಚುವಂತಹ ಅಧಿಕಾರಿಗಳು ಅಲ್ಲ. ನೀವು ದೇಶ ವಿರೋಧಿಗಳೆಂದು ಹೇಳಬೇಕಾಗುತ್ತದೆ ಎಂದು ಹೆಚ್ಚರಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ವಕ್‌ಬೋರ್ಡಿಗೆ ಸಂಬAಧಿಸಿದAತೆ ಒಂದು ಬಿಲ್ಲನ್ನು ತಂದಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ವಕ್‌ಬೋರ್ಡಿಗೆ ಸಂಬAಧಿಸಿದ ಆಸ್ತಿಗಳು ಸರ್ಕಾರದ ವಶದಲ್ಲಿರುತ್ತವೆ. ಮುಜರಾಯಿ ದೇವಸ್ಥಾನದ ಆಸ್ತಿಗಳು ಸರ್ಕಾರದ ವಶದಲ್ಲಿದೆ. ಅದೇ ರೀತಿ ವಕ್‌ಬೋರ್ಡ್ ಆಸ್ತಿಗಳು ಸರ್ಕಾರದ ವಶದಲ್ಲಿರಬೇಕೆಂದು ಬಿಲ್ಲನ್ನು ಮಂಡನೆ ಮಾಡಿದ್ದಾರೆ. ಅದನ್ನು ನಾವು ಬೆಂಬಲಿಸುತ್ತೇವೆ. ಮುಂದಿನ ದಿನಗಳಲ್ಲಿ ಹಿಂದೂ ದೇವಾಲಯಗಳ, ಶಾಲೆಗಳ ಆಸ್ತಿಗಳು ವಕ್‌ಬೋರ್ಡಿಗೆ ಸೇರಿರುವುದನ್ನು ಮತ್ತೆ ಹಿಂದಿರುಗಿಸುವ ಕೆಲಸ ಮಾಡುತ್ತೇವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ಬಿಜೆಪಿ ನಗರಾಧ್ಯಕ್ಷ ಅನಿಲ್ ಕುಮಾರ್, ಬಜರಂಗ ದಳದ ಬಾಬು, ಬಾಲಾಜಿ, ಅಪ್ಪಿ, ಬಿಜೆಪಿ ಮುಖಂಡರಾದ ಇ.ಶಿವಣ್ಣ, ಕೆಂಬೋಡಿ ನಾರಾಯಣಸ್ವಾಮಿ, ಪ್ರವೀಣ್‌ಗೌಡ, ಸತ್ಯನಾರಾಯಣ, ಲಕ್ಷö್ಮಣ್‌ಗೌಡ ಮುಂತಾದವರಿದ್ದರು.
ಚಿತ್ರ ೧೨ ಕೆ.ಎಲ್.ಆರ್. ೦೨ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ, ಕೋಲಾರದಲ್ಲಿ ವಿಶ್ವ ಹಿಂದೂ ಪರಿಷತ್ತು, ಆರ್.ಎಸ್.ಎಸ್. ಬಿಜೆಪಿಯಿಂದ ನಗರದ ಬಸ್ ನಿಲ್ದಾಣದಲ್ಲಿ ನಡೆದ ಮಾನವ ಸರಪಣಿ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಮುಂತಾದವರು ಇದ್ದರು.