ನ್ಯೂಸ್

ಬಾಂಗ್ಲಾ ದೇಶಕ್ಕೆ ಕೆಎಂಎ್ ಹಾಲಿನ ಪುಡಿ ರವಾನೆ : 500 ಮೆಟ್ರಿಕ್ ಟನ್ ಪೂರೈಸಲು ಪರವಾನಗಿ ಮೊದಲ ಹಂತದಲ್ಲಿ 100 ಮೆ. ಟನ್

ಕನಕಪುರ : ಶಿವನಹಳ್ಳಿ ಸಮೀಪದ ನಂದಿನಿ ಮೆಗಾ ಡೇರಿಯಿಂದ ಬಾಂಗ್ಲಾದೇಶಕ್ಕೆ ರ‌್ತಾಗಲಿರುವ ನೂರು ಟನ್ ಹಾಲಿನ ಪುಡಿ ತುಂಬಿದ ನಾಲ್ಕು ಟ್ರಕ್‌ಗಳಿಗೆ ಕೆಎಂಎ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಮಂಗಳವಾರ ಚಾಲನೆ ನೀಡಿದರು.

ಡೇರಿಯಿಂದ ಇದೇ ಪ್ರಥಮ ಬಾರಿಗೆ ಬಾಂಗ್ಲಾ ದೇಶಕ್ಕೆ 500 ಮೆಟ್ರಿಕ್ ಟನ್ ಹಾಲಿನ ಪೌಡರ್ ರಫ್ತು ಮಾಡಲು ಸಾರಿಗೆ ಪರವಾನಗಿ ದೊರೆತಿದೆ. ಹಂತ ಹಂತವಾಗಿ ಹಾಲಿನ ಪುಡಿ ಸರಬರಾಜು ಮಾಡುತ್ತಿರುವುದು ಹೆಮ್ಮೆ ಮತ್ತು ಸಂತಸದ ವಿಷಯವಾಗಿದೆ ಎಂದು ಸತೀಶ್ ತಿಳಿಸಿದರು. ಇದೇ ರೀತಿ ಮುಂದಿನ ದಿನಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಹಾಲಿನ ಪುಡಿ ತಯಾರಿಸುವ ಬೃಹತ್ ಘಟಕ ಸ್ಥಾಪಿಸಲಾಗುವುದು. ಮೆಗಾ ಡೇರಿ ಆರಂಭವಾದ ನಂತರ ಈ ಭಾಗದಲ್ಲಿ ಹೆಚ್ಚು ಹಾಲು ಖರೀದಿ ಮಾಡಲಾಗುತ್ತಿದ್ದು, ಉತ್ತಮ ದರವನ್ನೂ ನೀಡಲಾಗುತ್ತಿದೆ ಎಂದರು.

ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ರಾಜ್ಯದಲ್ಲಿಯೇ ರಾಮನಗರ ಅತಿಹೆಚ್ಚು ಹಾಲು ಉತ್ಪಾದಿಸುವ ಜಿಲ್ಲೆಯಾಗಿದೆ. ಕನಕಪುರದಲ್ಲಿ ಮೆಗಾಡೇರಿ ಪ್ರಾರಂಭವಾದ ನಂತರ ಹಾಲು ಖರೀದಿಗೆ ಅನುಕೂಲವಾಗಿದೆ ಎಂದರು.

ಹಾಲು ಉತ್ಪಾದಕರ ಮಹಾಮಂಡಳಿ ನಿರ್ದೇಶಕರಾದ ದಿವಾಕರ್‌ಶೆಟ್ಟಿ, ಶೈಲೇಂದ್ರಗೌಡ ಪಾಟೀಲ್, ವೀರಭದ್ರಬಾಬು, ಬೆಂಗಳೂರು ಡೇರಿ ನಿರ್ದೇಶಕರಾದ ರಾಜ್‌ಕುಮಾರ್, ಹರೀಶ್, ಮಂಜುನಾಥ್,ಎಂ.ಕೆ. ಕುಲಕರ್ಣಿ, ಎನ್. ಮುನಿರೆಡ್ಡಿ, ಸತೀಶ್,ಕೆ.ಸ್ವಾಮಿ, ಬಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಸ್ವಾಮಿ ಉಪಸ್ಥಿತರಿದ್ದರು.