ರಂಗಾಸಕ್ತರ ಹಬ್ಬವಾದ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ಕ್ಕೆ ರಂಗಾಯಣದ ಅಂಗಳ ಸಜ್ಜಾಗಿದ್ದು, ಜ.14 ಚಾಲನೆ ದೊರೆಯಲಿದೆ.
ಸೋಮವಾರವೂ ಬಹುರೂಪಿಯ ಸಿದ್ಧತೆ ಭರದಿಂದ ಸಾಗಿತ್ತು. ರಂಗಾಯಣ ಅಂಗಳದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತು. ಬಹುರೂಪಿ ಕುರಿತು ಕಲಾವಿದರು ಬಿಡಿಸಿರುವ ಪೋಸ್ಟರ್‌ಗಳನ್ನು, ಭಿತ್ತಿಚಿತ್ರಗಳನ್ನು ರಂಗಾಯಣದ ಅಂಗಳದಲ್ಲಿ ಹಾಕಲಾಗಿದೆ. ಕರಕುಶಲ, ಆಹಾರ, ತಿನಿಸು, ಪುಸ್ತಕ ಪ್ರದರ್ಶನದ ಮಾರಾಟ ಮಳಿಗೆಗಳನ್ನು ಸಿದ್ಧಪಡಿಸಲಾಗುತ್ತಿದೆ. ರಂಗಾಯಣದ ಅಂಗಳದ ತುಂಬ ‘ರಂಗ ಸಂಭ್ರಮ’ ಮನೆ ಮಾಡಿದೆ.