ನ್ಯೂಸ್

ಬಹುತೇಕ ಸಿಎಂಗಳಿಂದ ಲಾಕ್ ಡೌನ್ ಮುಂದುವರಿ ಸುವ ಇಂಗಿತ ಡಿಸಿಎಂ ಸವದಿ ಹೇಳಿಕೆ

ರಾಯಚೂರು ;
ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದ ಭತ್ತ ಹಾನಿಯಾಗಿದೆ. ಕೃಷಿ ಇಲಾಖೆಗೆ ವರದಿ ಸಲ್ಲಿಸಿದರೆ ಸಚಿವ ಸಂಪುಟದಲ್ಲಿ ಚರ್ಚಿಸಲು ಅನುಕೂಲವಾಗಲಿದೆ ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಲಕ್ಷ್ಮಣ ಸವದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯದ ಸಿಎಂಗಳ ಜತೆ ಚರ್ಚಿಸಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ವಿಚಾರಿಸಿದ್ದಾರೆ.
ಮೇ. ೩ ರಂದು ತೀರ್ಮಾನಿ ಸಲಿದ್ದಾ ರೆ. ಬಹುತೇಕ ರಾಜ್ಯದ ಸಿಎಂ.ಗಳು ಮೇ. 15 ರವರೆಗೆ ಮುಂದುವರಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬೇರೆ ರಾಜ್ಯದ ಬಗ್ಗೆ ತುಲನೆ ಮಾಡಿದರೆ ನಮ್ಮ ರಾಜ್ಯದಲ್ಲಿ ಕರೊನಾ ಸೋಂಕಿತರು ಕಡಿಮೆ ಇದೆ. ಹೆಚ್ಚದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ.
       ಪೊಲೀಸ್ ಇಲಾಖೆ, ವೈದ್ಯಕೀಯ ಕ್ಷೇತ್ರ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ನೌಕರರು ಜೀವದ ಹಂಗನ್ನು ತೊರೆದು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಕುಟುಂಬದ ಹಿತ ಬದಿಗಿಟ್ಟು ಸಾರ್ವಜನಿಕರ ರಕ್ಷಣೆಗೆ ಪ್ರಾಮಾಣಿಕ ಸೇವೆಯಲ್ಲಿ ತೊಡಗಿದ್ದಾರೆ. ಕೆಲವೆಡೆ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೆಲಸ ನಡೆದಿವೆ. ಇದಕ್ಕಾಗಿ ಉತ್ತರ ಪ್ರದೇಶ ಮತ್ತು ಕೇರಳಾ ಮಾದರಿಯಲ್ಲಿ ಸರ್ಕಾರಿ ಕೆಲಸದಲ್ಲಿ ತೊಡಗಿದವರಿಗೆ ಅಡ್ಡಿ ಪಡಿಸುವುದು, ಹಲ್ಲೆ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವವರಿಗೆ ತಕ್ಕಶಾಸ್ತಿ ಆಗಬೇಕು. ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಧಕ್ಕೆ ತಂದರೆ ಅಂತಹ ದುಷ್ಕರ್ಮಿಗಳ ಆಸ್ತಿ ಮುಟ್ಟುಗೋಲು ಹಾಕಿ ಹರಾಜು ಮಾಡಿ ನಷ್ಟ ಭರಿಸುವ ಕಾನೂನು ಜಾರಿಗೆ ತಂದಿದೆ.
   ಇಂತಹ ಬಿಗಿಯಾದ ಕಾನೂನು ಜಾರಿ ಗೆ ತಂದಿದ್ದು, ಕಾನೂನು ದುರುಪಯೋಗ ಪಡಿಸಿಕೊಳ್ಳದೆ ಪಾಲನೆ ಮಾಡುವ ಜತೆಗೆ ಅಧಿಕಾರಿಗಳಿಗೆ ಗೌರವಿಸಬೇಕು. ಕರೊನಾ ಬಗ್ಗೆ ಜಿಲ್ಲಾ ಮಟ್ಟದ ಸಭೆ ನಡೆಸಲಾಗಿದೆ. ಇಂದು ಮಾಹಿತಿ ಪಡೆಯಲಾಗುವುದು. ಜಿಲ್ಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜಾಗೃತಿ ಕಡಿಮೆ ಇದೆ. ಅಧಿಕಾರಿಗಳಿಗೆ ಸೂಚಿಸಲಾಗಿದೆ.
       ಜಿಲ್ಲೆಯಲ್ಲಿ ಯಾವುದೇ ಸೋಂಕಿತರು ಸಿಕ್ಕಿಲ್ಲ. ಜಾಗೃತಿ ವಹಿಸಬೇಕಿದೆ. ಕರೊನಾಗೆ ಮದ್ದಿಲ್ಲ. ಇದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಮದ್ದು. 
ಒಂದೆರಡು ದಿನದಲ್ಲಿ ಕಡಿಮೆಯಾಗುವ ರೋಗವಲ್ಲ. ಸುಮಾರು ದಿನ ಮುಂದುವರಿಯಲಿದೆ.
  
ಬೇಸಿಗೆ ನಿಮಿತ್ತ ಕುಡಿವ ನೀರಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಡಳಿತದ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು.