ನ್ಯೂಸ್

ಬಸ್​ ಅಪಘಾತ ತಡೆಗೆ ತಂತ್ರಜ್ಞಾನದ ನೆರವು

ಬೆಂಗಳೂರು: ಕೆಎಸ್ಸಾಟಿರ್ಸಿ ಬಸ್​ಗಳಿಂದಾಗುತ್ತಿರುವ ಅಪಘಾತ ತಡೆಗೆ ತಂತ್ರಜ್ಞಾನದ ನೆರವು ಪಡೆಯಲಾಗುತ್ತಿದ್ದು, ಬಸ್​ಗಳಲ್ಲಿ "ಡೆವರ್​ ಅರ್ಲಟ್​ ವ್ಯವಸ್ಥೆ' ಅಳವಡಿಸಲಾಗುತ್ತಿದೆ.
ದೇಶದ ಅತ್ಯುತ್ತಮ ಸಾರಿಗೆ ಸಂಸ್ಥೆಯಲ್ಲೊಂದಾದ ಕೆಎಸ್ಸಾಟಿರ್ಸಿ ಬಸ್​ ಅಪಘಾತ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕೆ ಬಸ್​ ಅಥವಾ ಖಾಸಗಿ ವಾಹನಗಳ ಚಾಲಕರ ಬೇಜವಾಬ್ದಾರಿತನ ಕಾರಣವಾಗಿದೆ. ಈ ರೀತಿ ಅಪಘಾತಗಳಿಗೆ ಬ್ರೇಕ್​ ಹಾಕಲು ಬಸ್​ಗಳಲ್ಲಿ ಅಪಘಾತ ಸಂಭವಿಸಬಹುದಾದ ಕ್ಷಣದಲ್ಲಿ ಬಸ್​ ಚಾಲಕರಿಗೆ ಆ ಕುರಿತು ಮುನ್ಸೂಚನೆ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಡೆವರ್​ ಅರ್ಲಟ್​ ವ್ಯವಸ್ಥೆ ಅಥವಾ ಅಪಘಾತ ಎಚ್ಚರಿಕೆ ವ್ಯವಸ್ಥೆ ಜಾರಿ ಮಾಡುವ ಮೂಲಕ ಬಸ್​ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಲಾಗುತ್ತದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಾಲ್ಕು ನಿಗಮಗಳ ಪ್ರಗತಿ ಪರಿಶೀಲನಾ ಸಭೆ ನಂತರ ಈ ಕುರಿತು ವಿವರಿಸಿದ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ$್ಮಣ ಸವದಿ, ಬಸ್​ಗಳ ಅಪಘಾತ ತಡೆಗೆ ವಿಶೇಷ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಈ ವ್ಯವಸ್ಥೆ ಜಾರಿ ನಂತರ ಬಸ್​ಗಳ ಎದುರು ಆಕಸ್ಮಿಕವಾಗಿ ವಾಹನ ಅಥವಾ ವ್ಯಕ್ತಿಗಳು ಅಡ್ಡ ಬಂದಲ್ಲಿ ಅದರ ಬಗ್ಗೆ ಚಾಲಕರಿಗೆ ಎಚ್ಚರಿಕೆಯ ಸೂಚನೆ ನೀಡಲಿದೆ. ಜತೆಗೆ ಸ್ವಯಂ ಚಾಲಿತವಾಗಿ ಬ್ರೇಕ್​ ಹಾಕಿ ಅಪಘಾತ ತಪ್ಪಿಸಬಹುದಾಗಿದೆ ಎಂದರು.
ಪ್ರತಿವರ್ಷ ಅಪಘಾತಗಳಿಂದ ಸಾರಿಗೆ ಸಂಸ್ಥೆಗೆ 100 ಕೋಟಿ ರೂ.ಗೂ ಹೆಚ್ಚಿನ ನಷ್ಟವಾಗುತ್ತಿದೆ. ಹಲವು ಸಂದರ್ಭದಲ್ಲಿ ಬೇರೆ ವಾಹನಗಳ ಚಾಲಕರು ಮಾಡುವ ತಪ್ಪಿಗೂ ನಿಗಮಗಳು ಪರಿಹಾರ ನೀಡುವಂತಾಗುತ್ತಿದೆ. ಅವುಗಳನ್ನು ತಪ್ಪಿಸಲು ನೂತನ ವ್ಯವಸ್ಥೆ ಸಹಕಾರಿಯಾಗಲಿದೆ. ಅದಕ್ಕಾಗಿ ಕೆಲ ಸಂಸ್ಥೆಗಳ ಜತೆಗೆ ಮಾತುಕತೆ ನಡೆಸಲಾಗುತ್ತಿದ್ದು, ಶ್ರೀದಲ್ಲಿ ಪ್ರಾಯೋಗಿಕವಾಗಿ ಕೆಲ ಬಸ್​ಗಳಲ್ಲಿ ಈ ಡೆವರ್​ ಅರ್ಲಟ್​ ಸಿಸ್ಟಂ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ಹೇಗಿರಲಿದೆ ಡೆವರ್​ ಅರ್ಲಟ್​ ವ್ಯವಸ್ಥೆ?:
ಡೆವರ್​ ಅರ್ಲಟ್​ ವ್ಯವಸ್ಥೆ ಬಸ್​ಗಳ ಎದುರು 500 ಮೀ. ದೂರದಲ್ಲಿ ಯಾವುದಾದರು ವಾಹನ ಅಥವಾ ಇನ್ಯಾವುದಾದರೂ ಅಡಚಣೆಯಿದ್ದರೆ, ಆ ಬಗ್ಗೆ ಎಚ್ಚರಿಕೆ ನೀಡುತ್ತದೆ. 5 ಸೆಕೆಂಡ್​ಗಳ ಕಾಲ ಶಬ್ದವನ್ನು ಮಾಡಿ ಚಾಲಕರಿಗೆ ವಾಹನವಿರುವ ಕುರಿತು ತಿಳಿಸಲಾಗುತ್ತದೆ. ಜತೆಗೆ ಚಾಲಕರು ಬಸ್​ ಚಾಲನೆ ಮಾಡುವಾಗ ಬೇರೆಡೆ ಗಮನ ಹರಿಸಿದರೆ, ನಿದ್ದೆಗೆ ಜಾರಿದರೂ ಡೆವರ್​ ಅರ್ಲಟ್​ ವ್ಯವಸ್ಥೆ ಎಚ್ಚರಿಕೆ ನೀಡಲಿದೆ.
ಅಪಘಾತದ ಕುರಿತು ಚಾಲಕರಿಗೆ ಮುನ್ನೆಚ್ಚರಿಕೆ ನೀಡಲು ಬಸ್​ನ ಮುಂಭಾಗ ಬಂಪರ್​ನಲ್ಲಿ ಸೆನ್ಸಾರ್​ ಅಳವಡಿಸಲಾಗುತ್ತದೆ. ಅದು ರೇಡಿಯೋ ಪ್ರೀಕ್ವೆನ್ಸಿ ಮೂಲಕ ಎದುರಿನ ವಾಹನ ಅಥವಾ ಇನ್ನಿತರ ಅಡಚಣೆಗಳ ಕುರಿತು ತಿಳಿದುಕೊಂಡು ಚಾಲಕರಿಗೆ ಸಂದೇಶ ರವಾನಿಸಲಿದೆ. ಧ್ವನಿ ಮತ್ತು ದೃಶ್ಯ ಮಾದರಿಯ ಎಚ್ಚರಿಕೆ ನೀಡಲಾಗುತ್ತದೆ. ಜತೆಗೆ ಸೆನ್ಸಾರ್​ ಯಾವುದೇ ಅಪಾಯವಿಲ್ಲದಿದ್ದರೂ ಸಂದೇಶ ರವಾನಿಸುವುದನ್ನು ತಡೆಯಲು (ಸುಳ್ಳು ಸಂದೇಶ) ಗೈರೋಸ್ಕೋಪ್​ ಸಾಧನವನ್ನು ಅಳವಡಿಸಲಾಗುತ್ತದೆ.