ನ್ಯೂಸ್

ಬಸ್ ಪಲ್ಟಿ ಮಹಿಳೆ ಸಾವು, ಹಲವರಿಗೆ ಗಂಬಿರ ಗಾಯ

ಹರಪನಹಳ್ಳಿ : ಕಂದಕ್ಕೆ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರಿಗೆ ಗಂಬಿರ ಗಾಯಗಳಾದ ಘಟನೆ ತಾಲೂಕಿನ ಸತ್ತೂರು ಕೆರೆಯ ಬಳಿ ಗುರುವಾರ ಸಂಜೆ ನಡೆದಿದೆ.

ಸತ್ತೂರು ಗ್ರಾಮದ ಕರಿಬಸಪ್ಪನವರ ಹನುಮಕ್ಕ (40) ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ಘಟನೆ 5 ನಿಮಿಷಗಳ ಹಿಂದೆಯೆ ಗ್ರಾಮದಿಂಸ ಬಸ್ ಹತ್ತಿದ್ದು, ವಿಧಿಯಾಟಕ್ಕೆ ಬಲಿಯಾಗಿದ್ದಾಳೆ. 20ಕ್ಕೂ ಹೆಚ್ಚಿನ ಜನರಿಗೆ ಗಂಬಿರ ಗಾಯಗಳಾಗಿದ್ದು ದಾವಣಗೆರೆ ಆಸ್ಪತ್ರೆಗೆ ಎಲ್ಲರನ್ನು ದಾಖಲಿಸಲಾಗಿದೆ. ಬಸ್ ಬಹುತೇಕ ಭರ್ತಿಯಾಗಿತ್ತು ಎಂದು ಹೇಳಲಾಗುತ್ತಿದೆ.

ದಾವಣಗೆರೆಯಿಂದ ಸತ್ತೂರು ಮಾರ್ಗವಾಗಿ ಹರಪನಹಳ್ಳಿಗೆ ಹೋಗುತ್ತಿದ್ದ ಬಸ್ ಸತ್ತೂರು ಕೆರೆಯ ಎಡಬದಿಯಲ್ಲಿ ಪಲ್ಟಿಯಾಗಿದೆ. ನೂತನ ಸಿಸಿ ರಸ್ತೆಯ ಕಾಮಗಾರಿ ನಡೆಯುತ್ತಿದ್ದು.

ಚಾಲಕನು ಸರಿಯಾಗಿ ವಾಹನ ಚಲಾಯಿಸಿದೆ ನಿರ್ಲ್ಯಕ್ಷ ವಹಿಸಿದ್ದರಿಂದ ಪಕ್ಕದಲ್ಲಿನ ಕಂದಕಕ್ಕೆ ಉರುಳಿದೆ.

ಸ್ಥಳಕ್ಕೆ ಶಾಸಕಿ ಲತಾ ಮಲ್ಲಿಕಾರ್ಜುನ, ಸಿಪಿಐ ನಾಗರಾಜ್ ಕಮ್ಮಾರ್, ಅರಸೀಕೆರೆ ಪಿಎಸ್‌ಐ ಕೆ.ರಂಗಯ್ಯ ಭೇಟಿ ನೀಡಿ ಪರಿಶೀಲಿಸಿದರು.