ನಿವೇಶನಕ್ಕೆ ಒತ್ತಾಯಿಸಿ ಬನ್ನೂರು ನಿವೇಶನ ಹೋರಾಟ ಸಮಿತಿಯು ಆಲ್ದೂರು ನಾಡ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಎಲೆಗುಡಿಗೆ ಹೊನ್ನಪ್ಪ, ನವರಾಜು, ಗಿರೀಶ್, ಕುಮಾರ್ ಇತರರಿದ್ದರು. 
ನ್ಯೂಸ್

ಬನ್ನೂರಿನಲ್ಲಿ ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆ

ಆಲ್ದೂರು: ನಿವೇಶನಕ್ಕೆ ಒತ್ತಾಯಿಸಿ ಬನ್ನೂರು ನಿವೇಶನ ಹೋರಾಟ ಸಮಿತಿಯಿಂದ ಪಟ್ಟಣದ ನಾಡಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಅಂಬೇಡ್ಕರ್ ಹೋರಾಟ ವೇದಿಕೆ ಗೌರವಾಧ್ಯಕ್ಷ ಎಲೆಗುಡಿಗೆ ಹೊನ್ನಪ್ಪ ಮಾತನಾಡಿ, ಇದೇ ಗ್ರಾಮದಲ್ಲಿ ಹುಟ್ಟಿ ಬೆಳೆದ ಕುಟುಂಬಗಳು ಸೂರಿಲ್ಲದೆ ಬಾಡಿಗೆ ಮನೆಯಲ್ಲಿ ಬದುಕುತ್ತಿವೆ. ಸೂರು ಒದಗಿಸುವಲ್ಲಿ ಜನಪ್ರತಿನಿಧಿಗಳು ಸಂಪೂರ್ಣ ವಿಲರಾಗಿದ್ದಾರೆ. ಮಂಜೂರಾದ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಎಲ್ಲರೂ ಒಗ್ಗೂಡಿ ಹೋರಾಟ ನಡೆಸುವ ಅಗತ್ಯವಿದೆ ಎಂದರು.
ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ಕಠಾರದಹಳ್ಳಿ ನವರಾಜು ಮಾತನಾಡಿ, ಅಧಿಕಾರ ನಡೆಸುವ ಜನಪ್ರತಿನಿಧಿಗಳು ನಮ್ಮನ್ನು ಒಡೆದು ಆಳುವ ತಂತ್ರ ಅನುಸರಿಸುತ್ತಿದ್ದಾರೆ. 1998ರಲ್ಲಿ ನಿವೇಶನಕ್ಕಾಗಿ ಎರಡು ಎಕರೆ ಜಾಗ ಮಂಜೂರಾಗಿದ್ದರೂ ಆ ಜಾಗವನ್ನು ಅರ್ಹರಿಗೆ ಹಂಚಿಕೆ ಮಾಡಲು ಅಧಿಕಾರಿಗಳು ವಿಳಂಬ ನೀತಿ ಅನುಸುತ್ತಿದ್ದಾರೆ ಎಂದು ದೂರಿದರು.
ಬನ್ನೂರು ಗ್ರಾಮದ ಮುಖಂಡ ರಾಜು ಮಾತನಾಡಿ, ಬನ್ನೂರಿನಲ್ಲಿ ನಿವೇಶನವಿಲ್ಲದೆ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಜನ ಬದುಕುತ್ತಿದ್ದಾರೆ. ಮಲೆನಾಡಿನಲ್ಲಿ ನಿವೇಶನರಹಿತರ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ನ್ಯಾಯ ಕೊಡಿಸುವಲ್ಲಿ ಎಲ್ಲ ಸರ್ಕಾರಗಳೂ ವಿಲವಾಗಿವೆ. ತಕ್ಷಣ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಿದರು.
ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಗಿರೀಶ್, ವಸ್ತಾರೆ ಅಂಬೇಡ್ಕರ್ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹೆಡದಾಳ್ ಕುಮಾರ್, ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಗಣೇಶ್ ಕಠಾರದಹಳ್ಳಿ, ದೊಡ್ಡಮಾಗರವಳ್ಳಿ ಗ್ರಾಪಂ ಸದಸ್ಯ ಪೂರ್ಣೇಶ್, ಸಿಪಿಐ ಮುಖಂಡ ಬನ್ನೂರು ರಾಜು, ನಿವೇಶನ ಹೋರಾಟ ವೇದಿಕೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ರೋಷನ್, ಸಹ ಕಾರ್ಯದರ್ಶಿ ಕುಮಾರ್, ಖಜಾಂಚಿ ಉಮೇಶ್, ಲಕ್ಷಣ್, ಮಹೇಂದ್ರ, ವಸಂತ್, ಶ್ರೆಧರ್, ರವಿ, ರಾಜು, ಸುಂದರ್ ಮತ್ತಿತರರಿದ್ದರು.
ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಸುಮಿತ್ರಾ ಅವರಿಗೆ ಮನವಿ ಸಲ್ಲಿಸಿದರು. ಆಲ್ದೂರು ಪಿಎಸ್‌ಐ ಅಕ್ಷಿತಾ ಹಾಗೂ ಸಿಬ್ಬಂದಿ ಇದ್ದರು.