ಕಡೂರಿನ ಚಕ್ರವರ್ತಿ ಪಿಯು ಕಾಲೇಜಿನಲ್ಲಿ ವಚನ ವಾಚನ ವ್ಯಾಖ್ಯಾನದ ಸಂವಾದ ಕಾರ್ಯಕ್ರಮ ನಡೆಯಿತು. ಕೆ.ಬಿ.ಬಸವರಾಜಪ್ಪ, ಕೆ.ವಿರೂಪಾಕ್ಷಪ್ಪ, ಸಹನಾ ರುದ್ರೇಶ್, ಗಂಗಾಧರ್ ಶಿವಪುರ, ಸುಜಾತಾ ಜಡೆಮಲ್ಲಪ್ಪ, ರಾಜಶೇಖರ್ ಮತ್ತಿತರರಿದ್ದರು. 
ನ್ಯೂಸ್

ಬದುಕಿನ ವಿಚಾರ ಪ್ರಸ್ತುತಪಡಿಸಿದ ಶರಣರು

ಕಡೂರು: ವಾಸ್ತವ ಬದುಕಿನ ಆಚಾರ ವಿಚಾರಗಳನ್ನು 12ನೇ ಶತಮಾನದ ಬಸವಾದಿ ಶರಣರು ಪ್ರಸ್ತುತಪಡಿಸಿ ಸಮಾಜವನ್ನು ಜಾಗೃತಗೊಳಿಸುತ್ತಿದ್ದರು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ತಿಳಿಸಿದರು.

ತಾಲೂಕಿನ ಮಲ್ಲೇಶ್ವರದ ಚಕ್ರವರ್ತಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ಚಕ್ರವರ್ತಿ ಪಿಯು ಕಾಲೇಜು ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗಾಗಿ ವಚನವಾಚನ-ವ್ಯಾಖ್ಯಾನದ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಶರಣರು ನುಡಿದಂತೆ ನಡೆದವರು. ಜನರಲ್ಲಿ ಬದುಕಿನ ಅರಿವು ಮೂಡಿಸಿ ಮೌಢ್ಯವನ್ನು ತೊಲಗಿಸಿ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಜಗತ್ತಿಗೆ ಸಂದೇಶ ಸಾರಿದರು ಎಂದರು.

ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಕೆ.ಬಿ.ಬಸವರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯದ ಆಸಕ್ತಿ ಬೆಳೆಸಲು ಸಂವಾದ ಸಹಕಾರಿಯಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲೇ ಸಾಹಿತ್ಯದ ಅಭಿರುಚಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಸಹನಾ ರುದ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಗಂಗಾಧರ ಶಿವಪುರ ಸಂವಾದ ನಡೆಸಿಕೊಟ್ಟರು. ಕಡೂರಿನ ಅಕ್ಕನ ಬಳಗದ ಸದಸ್ಯರು ವಚನ ಗಾಯನ ವಾಚಿಸಿದರು. ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತಾ ಜಡೆ ಮಲ್ಲಪ್ಪ, ಜಿ.ಟಿ.ರಾಜಶೇಖರ್, ಕುಂಕನಾಡು ಕುಮಾರಸ್ವಾಮಿ, ಕೆ.ಬಿ.ಸುನೀತಾ ಉಮಾದೇವಿ, ಡಿ.ರಮೇಶ, ಬಿಳಿಗಿರಿ ವಿಜಯಕುಮಾರ್, ಯಗಟಿ ಸತೀಶ್, ಹೊಗರೆಹಳ್ಳಿ ಗಣೇಶ, ಉಮಾ ಬಸವರಾಜ್, ಕುಂಕನಾಡು ನಾಗರಾಜ್, ಪುಷ್ಪಾ ಸುಬ್ರಹ್ಮಣ್ಯ ಇದ್ದರು.