ನಿಡಗುಂದಿ: ಪಟ್ಟಣ ಸೇರಿ ತಾಲೂಕಿನಲ್ಲಿ ಶುಕ್ರವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಯುವಕ& ಯುವತಿ, ಮಹಿಳೆಯರು ಹಾಗೂ ಮಕ್ಕಳು ಬಣ್ಣದಾಟವಾಡಿ ಸಂಭ್ರಮಿಸಿದರು.
ನಿಡಗುಂದಿಯಲ್ಲಿ ಬೆಳಗ್ಗೆಯಿಂದಲೇ ಮಕ್ಕಳು ರಂಗಿನಾಟಕ್ಕೆ ಇಳಿದರು. ಚಿಕ್ಕಮಕ್ಕಳು ಪಿಚಕಾರಿ, ವಾಟರ್ ಬಾಟಲ್ ಬಳಸಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಬಳಿಕ ಯುವಕರು ತಮ್ಮ ಬೀದಿಯಲ್ಲಿನ ಗೆಳೆಯರಿಗೆ ಬಣ್ಣ ಹಚ್ಚುತ್ತ ಬೇರೆ ಬಡಾವಣೆಯಲ್ಲಿರುವ ಗೆಳೆಯರ ಮನೆಗಳಿಗೆ ತೆರಳಿ ಬಣ್ಣವಾಡಿ ಸಂಭ್ರಮಿಸಿದರು.
ಮಧ್ಯಾಹ್ನ ಮಕ್ಕಳು, ಯುವಕರ ಬಣ್ಣದಾಟ ಮುಗಿಯುತ್ತಿದ್ದಂತೆ, ನಂತರ ಗೌರೀಶ್ವರ ದೇವಸ್ಥಾನ ಬಳಿ ಹಾಗೂ ಬಜಾರದಲ್ಲಿ ಟ್ರಾ$್ಯಕ್ಟರ್ಗಳಲ್ಲಿ ಬ್ಯಾರಲ್ಗಳಲ್ಲಿ ಬಣ್ಣಮಿಶ್ರಿತ ನೀರು ತುಂಬಿಕೊಂಡು ಪರಸ್ಪರ ಬಣ್ಣ ಎರಚಿ ಹೋಳಿ ಆಚರಿಸಿದರು.
ಪಟ್ಟಣದ ಹಲವು ಕಡೆಗಳಲ್ಲಿ ಯುವಕರು ಗುಂಪುಗಳು ಕಲ್ಪಿತ ಶವಯಾತ್ರೆ ಪ್ರದರ್ಶನ ಗಮನ ಸೆಳೆದವು.