ನ್ಯೂಸ್

ಬಣಜಿಗರ ವಿದ್ಯಾರ್ಥಿನಿಲಯಕ್ಕೆ ಕೈ ಮೀರಿ ವೈಯುಕ್ತಿಕವಾಗಿ ಸಹಕಾರ ನೀಡುತ್ತೇನೆ

ಬಣಜಿಗರ ವಿದ್ಯಾರ್ಥಿನಿಲಯಕ್ಕೆ ಕೈ ಮೀರಿ ವೈಯುಕ್ತಿಕವಾಗಿ ಸಹಕಾರ ನೀಡುತ್ತೇನೆ ಎಂದು ಶಾಸಕ ಕೆ.ಹರೀಶ್ ಗೌಡ ಭರವಸೆ ನೀಡಿದರು.

ನಗರದ ಇಂಜಿನಿಯರ್ಸ್‌ಗಳ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ) ಅಧ್ಯಕ್ಷ ಹಾಗೂ ನಿವೃತ್ತ ಇಂಜಿನಿಯರ್ ಎಂ.ನಾರಾಯಣ ಅವರ 90ನೇ ವರ್ಷದ ಜನ್ಮದಿನೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾರಾಣಿ ಕಾಲೇಜಿನ ಮೂರು ವಿಭಾಗಗಳಿಂದ ಪ್ರತಿವರ್ಷ ನೂರಾರು ವಿದ್ಯಾರ್ಥಿನಿಯರು ಪ್ರವೇಶ ಪಡೆಯುತ್ತಿದ್ದಾರೆ. ಹೀಗಾಗಿ ಸಾವಿರಾರು ವಿದ್ಯಾರ್ಥಿನಿಯರು ವಿದ್ಯಾರ್ಥಿನಿಲಯಕ್ಕಾಗಿ ಪರದಾಡುವ ಸ್ಥಿತಿಯಿದೆ. ಸಮುದಾಯದಿಂದ 50 ವಿದ್ಯಾರ್ಥಿನಿಯರಿಗೆ ಆಶ್ರಯ ನೀಡಿರುವುದು ಸ್ವಾಗತಾರ್ಹ. ಇನ್ನೂ 50 ವಿದ್ಯಾರ್ಥಿಗಳಿಗೆ ನೆರವಾಗುವ ವಿದ್ಯಾರ್ಥಿನಿಲಯ ಸ್ಥಾಪಿಸಿದರೆ ಅದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.

ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಶಿವರಾಜಪ್ಪ, ಹಿರಿಯ ಲೆಕ್ಕ ಪರಿಶೋಧಕ ಕೆ.ಎನ್.ಮೋಹನಕುಮಾರ್, ಚಾ.ನಗರ ನಗರಸಭಾ ಸದಸ್ಯ ಸಿ.ಜಿ.ಚಂದ್ರಶೇಖರ್, ಪ್ರಮುಖರಾದ ಜಿ.ರಮೇಶ್, ಎಚ್.ಆರ್.ಗೋಪಾಲಕೃಷ್ಣ, ಚೆಲುವರಾಜು, ಕೆ.ಚಂದ್ರಶೇಖರ, ನಾಗರಾಜ, ಗೋವಿಂದರಾಜು, ಎಚ್.ಎಸ್.ಕೃಷ್ಣಪ್ಪ, ಎಚ್.ಕೆ.ಜಗನ್ನಾಥ್, ಜಿ.ವೇಣುಗೋಪಾಲ್, ಕೆ.ಎನ್.ವಿಜಯಕೊಪ್ಪ, ಕೆ.ಸಿ.ಪ್ರಕಾಶ್ ಇತರರಿದ್ದರು.