ಆನವೇರಿಯ ರೇಣುಕಾದೇವಿ ವಿದ್ಯಾ ಸಂಸ್ಥೆಯ ಶಾಲಾ ವಾರ್ಷಿಕೋತ್ಸವವನ್ನು ಗ್ರಾಪಂ ಅಧ್ಯಕ್ಷ ಎಚ್.ಜಿ.ನಟರಾಜಗೌಡ ಉದ್ಘಾಟಿಸಿದರು. ಎ.ಜಿ.ಚನ್ನಬಸಪ್ಪ, ಸುಜಾತಾ ಗಿರೀಶ್, ಈಶಪ್ಪಗೌಡ, ಈರಪ್ಪ, ಪಣಿಯಾಚಾರ್, ಬಸವರಾಜಪ್ಪ, ರಾಜಶೇಖರ್, ಚಂದ್ರಶೇಖರ್ ಇತರರಿದ್ದರು. 
ನ್ಯೂಸ್

ಬಡವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿ

ಹೊಳೆಹೊನ್ನೂರು: ಖಾಸಗಿ ಶಾಲೆಗಳು ಬಡವರ ಮಕ್ಕಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಿದರೆ ವಿದ್ಯಾ ಸಂಸ್ಥೆಗಳು ಮತ್ತಷ್ಟು ಪ್ರಗತಿ ಹೊಂದಲು ಸಾಧ್ಯ ಎಂದು ಗ್ರಾಪಂ ಅಧ್ಯಕ್ಷ ನಟರಾಜ ಗೌಡ ಹೇಳಿದರು.

ಆನವೇರಿ ಗ್ರಾಮದ ರೇಣುಕಾದೇವಿ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ತಂದೆ ತಾಯಿಗೆ ಗೌರವ ನೀಡುವವರು ಜೀವನದಲ್ಲಿ ಉನ್ನತ ಸ್ಥಾನ ತಲುಪುತ್ತಾರೆ. ಎಲ್ಲ ವಿದ್ಯಾರ್ಥಿಗಳು ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಪಾಲಕರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ಹೇಳಿದರು.

ಮೈಸೂರಿನ ಪ್ರಾಧ್ಯಾಪಕ ಡಾ. ಶ್ರೀಧರ್ ಮಾತನಾಡಿ, ಬಾಲ್ಯದ ದಿನಗಳನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಸನ್ನಡತೆ ರೂಢಿಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ತಿಳಿಸಿದರು.

ಶಾಲಾ ಸಮಿತಿ ಅಧ್ಯಕ್ಷ ಎ.ಜಿ.ಚನ್ನಬಸಪ್ಪ, ಗ್ರಾಪಂ ಉಪಾಧ್ಯಕ್ಷೆ ಸುಜಾತಾ ಗಿರೀಶ್, ಈಶಪ್ಪ ಗೌಡ, ಈರಪ್ಪ, ಫಣಿಯಾಚಾರ್, ಬಸವರಾಜಪ್ಪ, ರಾಜಶೇಖರ್, ಚಂದ್ರಶೇಖರ್, ನಂದೀಶ್, ಹಾಲಪ್ಪ, ಮುಖ್ಯ ಶಿಕ್ಷಕಿ ಪಾರ್ವತಿ, ಶೈಲಜಾ, ಸಿ.ಜೆ.ಸಿಂಚನಾ ಇತರರಿದ್ದರು.