ನ್ಯೂಸ್

ಬಕ್ರೀದ್ ಹಬ್ಬದ ನೆಪದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳಿ / ಜಿಲ್ಲಾಧಿಕಾರಿ ಎಂ.ಆರ್.ರವಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಜೂನ್ ೭ ರಂದು ನಡೆಯುವ ಬಕ್ರೀದ್ ಹಬ್ಬದ ನೆಪದಲ್ಲಿ ಗೋವು ಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಿದ್ದ, ಬಕ್ರೀದ್ ಹಬ್ಬದಂದು ಅಕ್ರಮ ಒಂಟೆ ಮತ್ತು ಗೋವುಗಳ ಹತ್ಯೆ ತಡೆಗಟ್ಟಲು ಜಿಲ್ಲಾ ಸಮಿತಿ ಹಾಗೂ ಕೋಲಾರ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯಲ್ಲಿ ಮಾತನಾಡಿದರು.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ ೨೦೨೦ ಜಾರಿಯಲ್ಲಿದ್ದು, ಎಲ್ಲಾ ವಯಸ್ಸಿನ ಹಸು, ಕರು, ಗೂಳಿ, ಎತ್ತು ಮತ್ತು ೧೩ ವರ್ಷ ದೊಳಗಿನ ಎಮ್ಮೆ ಮತ್ತು ಕೋಣ ವಧೆಯನ್ನು ನಿಷೇಧಿಸಲಾಗಿದ್ದು, ಬಕ್ರೀದ್ ಹಬ್ಬ ಹಾಗೂ ಇತರೆ ಸಂದರ್ಭಗಳಲ್ಲಿ ಸದರಿ ಜಾನುವಾರುಗಳ ಅನಧಿಕೃತ ಸಾಗಾಣಿಕೆ ವಧೆಯನ್ನು ತಡೆಯುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಾಗಿದೆ ಎಂದರು.

ಅಲ್ಪಸAಖ್ಯಾತ ಸಮುದಾಯದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಗೋಹತ್ಯೆ ನಿಷೇದ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಸ್ಥಳೀಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಪರಿಸರ ಇಲಾಖೆಯ ಮೂಲಕ ಧ್ವನಿವರ್ಧಕ ಬಳಸಿ ಪ್ರಚಾರ ನೀಡುವುದು ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನಪ್ರತಿನಿಧಿಗಳು ಹಾಗೂ ಮಸೀದಿ ಮುಖಂಡರುಗಳು ಮತ್ತು ನಗರದ ಎಲ್ಲಾ ವಾರ್ಡ್ಗಳ ನಗರಸಭೆ ಸದಸ್ಯರುಗಳೊಂದಿಗೆ, ಸಭೆಯನ್ನು ನಡೆಸಿ, ಸದರಿ ಕಾಯ್ದೆ ಬಗ್ಗೆ ಅರಿವು ಮೂಡಿಸಿ ಗೋಹತ್ಯೆ ತಡೆಗಟ್ಟುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಹಬ್ಬದ ದಿನಗಳಲ್ಲಿ ಉತ್ಪತ್ತಿಯಾಗುವ ಪ್ರಾಣಿ ತ್ಯಾಜ್ಯವನ್ನು ವಾರ್ಡ್ಗಳವಾರು ಸಂಗ್ರಹಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ನಗರಸಭೆ ಅಥವಾ ಸಂಬAಧ ಮಾಲಿನ್ಯ ನಿಯಂತ್ರಣ ಇಲಾಖೆಯವರು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಬೀದಿ ನಾಯಿಗಳ ಸಂತಾನ ನಿಯಂತ್ರಣ ಮಾಡಲು ಎ.ಬಿ.ಸಿ. ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪಶು ವೈದ್ಯಕೀಯ ಅಧಿಕಾರಿ, ಇವರೊಂದಿಗೆ ಸಾರಿಗೆ ಇಲಾಖೆಯಿಂದ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಅನುಮಾನಸ್ಪದ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಿ ಅನಧಿಕೃತ ಜಾನುವಾರು ಸಾಗಾಣಿಕೆ ವಾಹನಗಳ ತಪಾಸಣೆ ನಡೆಸುವಂತೆ ಹಾಗೂ ಒಂದು ವೇಳೆ ಅಂತಹ ವಾಹನಗಳು ಕಂಡುಬAದಲ್ಲಿ ಕಾನೂನು ಕ್ರಮವಹಿಸಿ ವಾಹನದಲ್ಲಿರುವ ಜಾನುವಾರುಗಳನ್ನು ರಕ್ಷಿಸಿ ಪೊಲೀಸ್ ಹಾಗೂ ಪಶುಸಂಗೋಪನೆ ಇಲಾಖೆಯ ಸಹಯೋಗದೊಂದಿಗೆ ಗೋಶಾಲೆಗಳಿಗೆ ಸೇರಿಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು.

ಸಿ.ಇ.ಓ. ಪ್ರವೀಣ್.ಪಿ.ಬಾಗೇವಾಡಿ, ಎಸ್.ಪಿ.ಬಿ.ನಿಖಿಲ್, ಕೆಜಿಎಫ್ ಡಿವೈಎಸ್ಪಿ, ಪಾಂಡುರAಗ, ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ನಟೇಶ್, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ಮಧುಸೂಧನ್ ರೆಡ್ಡಿ, ಕೋಲಾರ ನಗರಸಭಾ ಆಯುಕ್ತರಾದ ಪ್ರಸಾದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನಮ್ಮ, ಪಶು ಸಂಗೋಪನಾ ಇಲಾಖೆ ಕೆಜಿಎಫ್ ತಾಲ್ಲೂಕು ಸಹಾಯಕ ನಿರ್ದೇಶಕರಾದ ಡಾ.ತ್ರಿಮೂರ್ತಿ ನಾಯಕ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ ೦೩ ಕೆ.ಎಲ್.ಆರ್. ೦೪ : ಜಿಲ್ಲಾಧಿಕಾರಿಗಳ ಎಂ.ಆರ್.ರವಿ ಅಧ್ಯಕ್ಷತೆಯಲ್ಲಿ ನಡೆದ ಗೋ ಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ ಕಾಯ್ದೆಯ ಬಗ್ಗೆ ಅಧಿಕಾರಿಗಳೊಂದಿಗೆ ಪೂರ್ವಬಾವಿ ಸಭೆ ನಡೆಸಿದರು. ಎಸ್.ಪಿ.ಬಿ.ನಿಖಿಲ್, ಸಿಇಓ ಪ್ರವೀಣ್ ಪಿ.ಬಾಗೇವಾಡಿ ಮುಂತಾದವರು ಇದ್ದರು.