ನ್ಯೂಸ್

ಬಂದ್‌ಗೆ ಪಾಲಿಕೆ ಪೌರಕಾರ್ಮಿಕರ ಬೆಂಬಲ

ಪ್ರಗತಿಪರ ಸಂಘಟನೆಗಳು ಜ.7ರಂದು ಕರೆ ನೀಡಿರುವ ಮೈಸೂರು ಬಂದ್‌ಗೆ ನಗರ ಪಾಲಿಕೆ ಕಾಯಂ ಪೌರ ಕಾರ್ಮಿಕರ ಹಾಗೂ ಗುತ್ತಿಗೆ ಪೌರ ಕಾರ್ಮಿಕರ ಮಹಾ ಸಂಘ ಬೆಂಬಲ ವ್ಯಕ್ತಪಡಿಸಿದೆ.

ಪೌರ ಕಾರ್ಮಿಕರು, ಒಳಚರಂಡಿ ಸಹಾಯಕರು, ಸ್ವಚ್ಛತಾ ವಾಹನ ಚಾಲಕರು ಈ ಬಂದ್‌ಗೆ ಪೂರ್ಣ ಬೆಂಬಲ ಸೂಚಿಸಿದ್ದು, ಬೆಳಗ್ಗೆ 9ರವರೆಗೆ ಮಾತ್ರ ಕೆಲಸ ಮಾಡಿ, ಅಂದು ಮಧ್ಯಾಹ್ನ ಪುರಭವನದಲ್ಲಿ ಬಂದ್ ಕುರಿತಂತೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉಸ್ತುವಾರಿ ಸಮಿತಿ ಅಧ್ಯಕ್ಷ ಎನ್.ಮಾರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖಂಡರಾದ ಶ್ರೀನಿವಾಸ, ಕುಮಾರಸ್ವಾಮಿ, ಮಂಚಯ್ಯ, ಜಿ.ಮಂಜುನಾಥ್, ಪಿ.ಅಮಾಸೆ ಇದ್ದರು.