ವಿಜಯವಾಣಿ ಸುದ್ದಿಜಲ ಕೋಲಾರ
ಎನ್.ಮುನಿವೆಂಕಟೇಗೌಡ
ಡಿಸೆಂಬರ್ ತಿಂಗಳ ಪ್ರಾರಂಭದಿAದಲೂ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಆಗಾಗ ಜಡಿ ಮಳೆ, ಮೋಡ ಕವಿಧ ವಾತಾವರಣ, ಮಂಜು ಹಾಗೂ ಕೀಟಬಾಧೆಯಿಂದ ಈ ವರ್ಷ ಅವರೆ ಫಸಲು ಇಳಿಮುಖಗೊಂಡಿದ್ದು, ಫೆಂಗಲ್ ಚಂಡಮಾರುತ ಪ್ರಭಾವದಿಂದ ಅವರೆಕಾಯಿ ಸೊಗಡು ಕಳೆದುಕೊಂಡತ್ತಾಗಿದೆ. ಮಾರುಕಟ್ಟೆಯಲ್ಲಿ ರೈತನಿಗಿಲ್ಲ ಉತ್ತಮ ಬೆಲೆ, ಖರೀದಿದಾರನಿಗೆ ಕೈಗೆಟುಕದ ಬೆಲೆ.
ಡಿಸೆಂಬರ್ ತಿಂಗಳಿAದ ಮಾರ್ಚ್ ತಿಂಗಳ ತನಕ ಅವರೆಕಾಯಿ ಸುಗ್ಗಿ ಪ್ರತಿ ವರ್ಷ ಇರುತ್ತದೆ. ಈ ವರ್ಷ ಡಿಸೆಂಬರ್ ತಿಂಗಳಲ್ಲಿ ಫೆಂಗಲ್ ಚಂಡಮಾರುತ ಪರಿಣಾಮ ಜಡಿ ಮಳೆ ಮತ್ತು ಶೀತ ಗಾಳಿಯಿಂದ ಅವರೆ ಹೂವು ಉದುರಿದ ಪರಿಣಾಮ ಫಸಲಿಗೆ ಧಕ್ಕೆ ಉಂಟಾಗಿದ್ದಲ್ಲದೆ ಸೊಗಡು ಕಳೆದುಕೊಂಡಿದೆ.
ಅವರೆಗಿಡ ಹೂವು ಬಿಟ್ಟನಂತರ ಕಾಯಿ ಕಚ್ಚಿದ ಮೇಲೆ ಮಳೆ ಬಿಳದಿದ್ದರೆ ಸೊಗಡು ಹೆಚ್ಚಾಗಿ ಇರುತ್ತದೆ. ಅಗ ಸೊಗಡಿನಿಂದ ಕಾಯಿಯ ವಾಸನೆಯು ಹೆಚ್ಚಾಗಿರುತ್ತದೆ. ಕಾಯಿ ಒಳಗಿನ ಬೀಜವು ರುಚಿಯಾಗಿರುತ್ತದೆ. ಜಡಿ ಮಳೆಯಿಂದ ಕಾಯಿಯ ಮೇಲಿನ ಸೊಗಡು ಕಡಿಮೆ ಅಗಿರುವುದರಿಂದ ರುಚಿಯೂ ಇಲ್ಲದಂತಾಗಿದೆ.
ಅವರೆಕಾಯಿಗೆ ಮಾರುಕಟ್ಟೆಯಲ್ಲಿ ಸಾಧಾರಣ ಬೆಲೆ ಇದೆ. ಪ್ರತಿ ಕೆಜಿ ೫೦ ರಿಂದ ೬೦ ರೂ.ಗಳ ತನಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ರೈತರಿಗೆ ಪ್ರತಿ ಕೆಜಿಗೆ ೪೦ ರಿಂದ ೩೫ ರೂ.ಗಳು ಸಿಗುತ್ತಿದೆ. ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಸರಕು ಇಲ್ಲದಂತಾಗಿದೆ. ಫೆಂಗಲ್ ಚಂಡುಮಾರುತದ ಪರಿಣಾಮ ಫಸಲು ಕಡಿಮೆ ಇರುವುದರಿಂದ ಬೇಡಿಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಅವರೆಕಾಯಿ ಸಿಗದಂತಾಗಿದೆ.
ಅವರೆಕಾಯಿಂದ ಬಗೆ ಬಗೆಯ ತಿಂಡಿಗಳು :
ಅವರೆಕಾಯಿಂದ ಹಿದುಕಿದ ಬೇಳೆಸಾರು, ಉಪ್ಪಿಟು, ಪಲ್ಯ, ನಿಪಟ್ಟು, ಚಕುಲಿ, ವಡ, ಹೋಳಿಗೆ, ಸಿಹಿ ಸಾಂಬಾರು, ದೋಸೆ ಸೇರಿದಂತೆ ಹತ್ತು ಹಲವಾರು ಬಗೆ ಬಗೆಯ ತಿಂಡಿಗಳನ್ನು ಮಾಡುತ್ತಾರೆ. ೪ ತಿಂಗಳ ಕಾಲ ವರ್ಷದಲ್ಲಿ ಅವರೆ ಕಾಯಿ ಸುಗ್ಗಿ ಇರುತ್ತದೆ. ಅವರೆಕಾಯಿಂದ ಬೆಳೆ ಮಾಡಿಕೊಂಡು ವರ್ಷ ಪೂರ್ತಿ ಬೇಳೆಯನ್ನು ಬಳಸಿಕೊಳ್ಳುತ್ತಾರೆ.
ಕೋಟ್ :
ಪ್ರಾರಂಭದಲ್ಲಿ ಹೂವು ಬಿಟ್ಟು ಕಾಯಿಯಾಗಿರುವ ಅವರೆಕಾಯಿಯ ಮೇಲೆ ಸೊಗಡು ಇಲ್ಲದಂತಾಗಿದೆ. ಕಾರಣ ಡಿಸೆಂಬರ್ ತಿಂಗಳ ಪೂರ್ತಿ ಜಡಿ ಮಳೆ ಪ್ರಭಾವ, ಹೂವು ಬಿಟ್ಟು ಕಾಯಿ ಕಚ್ಚಿದ ಮೇಲೆ ಅವರೆಕಾಯಿ ಫಸಲಿನ ಮೇಲೆ ಮಳೆ ಬೀಳಬಾರದು, ಮಳೆ ಬಿದ್ದ ಪರಿಣಾಮ ಫಸಲಿಗೆ ಧಕ್ಕೆ ಉಂಟಾಗಿದೆ. ಇನ್ನು ಹೂವು ಬಿಟ್ಟು ಕಾಯಿ ಕಚ್ಚಿದರೆ ಅವರೆಕಾಯಿಯ ಮೇಲೆ ಸೊಗಡು ಉಳಿಯುವತ್ತಾಗುತ್ತದೆ. ಅಗ ಒಳಗಿನ ಬೀಜ ರುಚಿಯಾಗಿರುತ್ತದೆ. ಇನ್ನೂ ೩ ತಿಂಗಳ ಕಾಲ ಫಸಲು ಇರುತ್ತದೆ. ಭೂಮಿಯಲ್ಲಿ ತೇವಾಂಶ ಇರುವುದರಿಂದ ಗಿಡ ಚಿಗುರಿ ಮತ್ತೆ ಹೂವು ಬರುತ್ತದೆ. ಕಾಯಿ ಕಚ್ಚುತ್ತದೆ.
-ನಾರಾಯಣಗೌಡ ರೈತ ಕೆಂಬೋಡಿ
ಕೋಟ್ :
ಡಿಸೆಂಬರ್ ತಿಂಗಳಲ್ಲಿ ಚಂಡುಮಾರುತ ಪ್ರಭಾವದಿಂದ ಹವಾಮಾನ ವೈಪರಿತ್ಯಾದಿಂದಾಗಿ ಅವರೆ ಗಿಡದಲ್ಲಿ ಬಳ್ಳಿ ಸಾಗಲಿಲ್ಲ. ಬಿಟ್ಟ ಹೂವು ಉದುರಿತ್ತು. ಇದರಿಂದ ಫಸಲು ಕಡಿಮೆಯಾಗಿದೆ. ರೈತರು ಆತುರ ಬಿದ್ದು, ಋತುವಿಗೆ ಬಾರದೆ ಇರುವ ಕಾಯಿಯನ್ನು ಕೀಳುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುತ್ತದೆ. ವ್ಯಾಪಾರಸ್ಥರು ಮಾತ್ರ ಒಂದೇ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ರೈತ ಬಂಡವಾಳ ಹಾಕಿ ಬೆಳೆದರು ಉತ್ತಮ ಬೆಲೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಣಮಟ್ಟದ ಸರಕನ್ನು ಮಾರುಕಟ್ಟೆಗೆ ಕೊಟ್ಟರೆ ಉತ್ತಮ ಬೆಲೆಯನ್ನು ಪಡೆಯಬಹುದು. ಮಂಜು ಮತ್ತು ಚಳಿ ಪ್ರಾರಂಭವಾಗಿದೆ. ಇನ್ನು ಮುಂದೆ ಮಾರುಕಟ್ಟೆಗೆ ಬರುವ ಅವರೇಕಾಯಿಯಲ್ಲಿ ಸೊಗಡು ಇರುತ್ತದೆ.
-ಚಂದ್ರಶೇಖರ್ ಪ್ರಗತಿಪರ ರೈತ ನೆನುಮನಹಳ್ಳಿ
ಚಿತ್ರ ೦೧ ಕೆ.ಎಲ್.ಆರ್.೦೧ : ಮಾರುಕಟ್ಟೆಯಲ್ಲಿ ಅವರೆಕಾಯಿ ವ್ಯಾಪಾರ ಅಗುತ್ತಿರುವುದು.
ಚಿತ್ರ ೦೧ ಕೆ.ಎಲ್.ಆರ್.೦ಎ : ನಾರಾಯಣಗೌಡ ರೈತ ಕೆಂಬೋಡಿ ಭಾವ ಚಿತ್ರ.
ಚಿತ್ರ ೦೧ ಕೆ.ಎಲ್.ಆರ್.೦ಬಿ : ಚಂದ್ರಶೇಖರ್ ಪ್ರಗತಿ ಪರ ರೈತ ನೆನುಮನಹಳ್ಳಿ ಭಾವ ಚಿತ್ರ.