ನ್ಯೂಸ್

ಫೆ.3ರ ಬೆಳಗ್ಗೆ 11ಕ್ಕೆ ಅಭಿನಂದನಾ ಸಮಾರಂಭ

ಸದ್ಯದಲ್ಲೇ ನಿವೃತ್ತರಾಗುತ್ತಿರುವ ಕರ್ನಾಟಕ ಮುಕ್ತ ವಿವಿ ಶೈಕ್ಷಣಿಕ ಡೀನ್ ಪ್ರೊ.ಲಕ್ಷ್ಮೀ ಅವರ ಅಭಿನಂದನಾ ಸಮಾರಂಭವನ್ನು ಫೆ.3ರ ಬೆಳಗ್ಗೆ 11ಕ್ಕೆ ವಿವಿಯ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದಾರೆ ಎಂದು ಆಯೋಜಕ ಪ್ರೊ.ತ್ರಿಮೂರ್ತಿ ತಿಳಿಸಿದರು. ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇದೇ ವೇಳೆ ಪ್ರೊ.ಎನ್.ಲಕ್ಷ್ಮೀ ಅವರ 4 ಕೃತಿಗಳನ್ನು ಗಣ್ಯರು ಬಿಡುಗಡೆಗೊಳಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಯೋಜಕರಾದ ಎಸ್.ಆರ್.ವೀಣಾ, ಡಾ.ಸುನಂದಾ ಇತರರಿದ್ದರು.