ನ್ಯೂಸ್

ಫೆ.26ರಿಂದ ರಾಷ್ಟ್ರೀಯ ರಂಗ ಉತ್ಸವ

ಇಂಜಿನಿಯರುಗಳೇ ಕಟ್ಟಿಕೊಂಡಿರುವ ಅಭಿಯಂತರರು ಸಂಸ್ಥೆ ವತಿಯಿಂದ ಫೆ.26ರಿಂದ ಮಾ.2ರವರೆಗೆ ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಐದು ದಿನಗಳ ರಾಷ್ಟ್ರೀಯ ರಂಗ ಉತ್ಸವ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಎಚ್.ಎಸ್.ಸುರೇಶ್‌ಬಾಬು ತಿಳಿಸಿದರು.

ಫೆ.26ರ ಸಂಜೆ 6.30ಕ್ಕೆ ಕಾರ್ಯಕ್ರಮವನ್ನು ಕವಿ ಡಾ.ಎಲ್.ಹನುಮಂತಯ್ಯ ಉದ್ಘಾಟಿಸುವರು. ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ ಅಧ್ಯಕ್ಷತೆ ವಹಿಸುವರು. ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರತಿ ದಿನ ಸಂಜೆ 7ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. 26 ರಂದು ಶಿವೋಹಂ (ಕನ್ನಡ), ಫೆ. 27ರಂದು ಒಂದು ವಿಲಯ ಕಥೆ (ಕನ್ನಡ), ಫೆ.28ರಂದು ಬ್ಯಾಗ್ ಡಾನ್ಸಿಂಗ್ (ಇಂಗ್ಲಿಷ್), ಮಾ.1ರಂದು ತೂ ಜಿಂದಾ ಭೀ ಹೈ (ಹಿಂದಿ), ಮಾ.2ರಂದು ಕಳಸೂತ್ರ (ಕನ್ನಡ) ನಾಟಕ ಪ್ರದರ್ಶನವಿದೆ ಎಂದವರು ವಿವರಿಸಿದರು. ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಯಶವಂತ್, ಎನ್.ಎಸ್.ಮಹದೇವಸ್ವಾಮಿ ಇದ್ದರು.