ನ್ಯೂಸ್

ಫಲಪುಷ್ಪ ಪ್ರದರ್ಶನದಲ್ಲಿ ಸೆಲ್ಫಿ ಸಂಭ್ರಮ..

ಚಾಮರಾಜನಗರ: ದಸರಾ ಮಹೋತ್ಸವದ ಅಂಗವಾಗಿ ನಗರದ ಜಿಲ್ಲಾಡಳಿತ ಭವನದ ಮುಂಭಾಗ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ.

ಬಗೆ ಬಗೆಯ ಫಲ, ವಿವಿಧ ಪುಷ್ಪಗಳು ಕಂಗೊಳಿಸುತ್ತಿವೆ. ಹೂಗಳಿಂದ ಅಲಂಕಾರ ಮಾಡಿ ಸಿದ್ಧ ಪಡಿಸರುವ ಕಲಾಕೃತಿಗಳು ಮನಸೆಳೆಯುತ್ತಿವೆ. ಇವುಗಳ ಮುಂದೆ ನಿಂತು ಯುವಕ-ಯುವತಿಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್, ಚಾಮರಾಜೇಂದ್ರ ಒಡೆಯರ್, ಪುನೀತ್ ರಾಜ್‌ಕುಮಾರ್ ಪ್ರತಿಮೆ, ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲ ಮತ್ತು ಮೂರ್ತಿ ಆಕರ್ಷಣೆಯ ಕೇಂದ್ರ ಬಿಂದು.‌ ಇದಲ್ಲದೆ ಕಲ್ಲಂಗಡಿ ಮೇಲೆ ಕೆತ್ತಿದ್ದ ಗಣ್ಯರ ಪೋಟೋಗಳು, ಸರ್ಕಾರಿ ಇಲಾಖೆಗಳ ಸ್ಟಾಲ್ ಗಳು ಗಮನ ಸೆಳೆಯುತ್ತಿವೆ.