ನ್ಯೂಸ್

ಪ್ಲೋರೈಡ್ ನೀರು ಕುಡಿಯುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ/ಶುದ್ದ ಕುಡಿಯುವ ನೀರಿಗೆ ಅಧ್ಯತೆ ನಿಡಲಾಗುವುದು/ ಎಂಎಲ್ಸಿ ಅನಿಲ್ ಕುಮಾರ್

ವಿಜಯವಾಣಿ ಸುದ್ದಿಜಾಲ ಮುದುವಾಡಿ

ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನ ಜೀವನಕ್ಕೂ ಪ್ರಮುಖವಾಗಿ ಶುದ್ದ ನೀರು, ಗಾಳಿ ಮತ್ತು ಆಹಾರ ಅತ್ಯವಶ್ಯಕವಾದದ್ದು. ಆದ್ದರಿಂದ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಅನುದಾನಗಳಿಂದ ಶುದ್ದ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗಿದೆ, ಸರ್ಕಾರದಿಂದ ನೀಡಲಾಗಿರುವ ಸೌಲಭ್ಯವನ್ನು ಪ್ರತಿಯೊಬ್ಬರೂ ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಹೋಳೂರು ಗ್ರಾಮದಲ್ಲಿ ವಿಧಾನ ಪರಿಷತ್ತಿನ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೂತನವಾಗಿ ನಿರ್ಮಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯಾವುದೇ ಶುದ್ದ ನೀರಿನ ಮೂಲಗಳಿಲ್ಲ, ಸಾವಿರಾರು ಅಡಿ ಆಳದಿಂದ ಮೇಲೆತ್ತಲಾದ ಪ್ಲೋರೈಡ್ ನೀರನ್ನು ಕುಡಿಯುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಆದ್ದರಿಂದ ಸರ್ಕಾರದಿಂದ ವಿಧಾನಪರಿಷತ್ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ಹೋಳೂರು ಗ್ರಾಮಕ್ಕೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಸರ್ಕಾರದ ಹಂತದಲ್ಲಿ ಪ್ರಾಮಾಣಿಕಪ್ರಯತ್ನ ಮಾಡಲಾಗುವುದು ಎಂದರು.

ಕೋಚಿ ಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ ಮಾತನಾಡಿ ಹೋಳೂರು ದೊಡ್ಡ ಗ್ರಾಮವಾಗಿದ್ದು ಈ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿಗೆ ಅಭಾವವಿರುವುದು ನಮ್ಮ ಗಮನಕ್ಕೆ ಬರಲಾಯಿತು, ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚಿಸಿ ಹೋಳೂರು ಗ್ರಾಮದ ಜನರ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ, ಗ್ರಾಮಸ್ಥರು ಯಾವುದೆ ಗೊಂದಲಗಳಿಗೆ ಅವಕಾಶ ಮಾಡಿಕೊಡದೆ ಎಲ್ಲರೂ ಸೌಲಭ್ಯವನ್ನು ಬಳಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಜನಪನಹಳ್ಳಿ ನವೀನ್ಕುಮಾರ್. ಹೋಳುರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ, ಸದಸ್ಯರಾದ ಕೆಂಬತ್ತನಹಳ್ಳಿ ನಾರಾಯಣಸ್ವಾಮಿ, ಶ್ರೀರಾಮಪ್ಪ ಗಟ್ಟಹಳ್ಳಿ ವೆಂಕಟರೆಡ್ಡಿ, ಕೊಂಡಸAದ್ರ ಚಂದ್ರಪ್ಪ , ವೆಂಕಟೇಶ್, ಶ್ರೀರಾಮರೆಡ್ಡಿ, ಡೈರಿ ಶ್ರೀನಿವಾಸ್, ಹೆಚ್.ಆರ್.ನಾರಾಯಣಸ್ವಾಮಿ, ಮುನಿವೆಂಕಟಪ್ಪ, ನಾರಾಯಣಸ್ವಾಮಿ, ಆರಿಕುಂಟೆ ಆನಂದ ಮತ್ತು ಶ್ರೀನಿವಾಸ್, ನಾಗರಾಜ್, ಮಾರೆನಹಳ್ಳಿ ಸೀನಪ್ಪ ಶ್ರೀರಾಮಪ್ಪ, ಹಾಗೂ ಇತರರು ಉಪಸ್ಥಿತರಿದ್ದರು.

ಚಿತ್ರ ೦೯ ಕೆ.ಎಲ್.ಆರ್. ೦೧ ತಾಲ್ಲೂಕಿನ ಹೋಳೂರು ಗ್ರಾಮದಲ್ಲಿ ವಿಧಾನ ಪರಿಷತ್ತಿನ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೂತನವಾಗಿ ನಿರ್ಮಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಎಂಎಲ್ಸಿ ಅನಿಲ್ ಕುಮಾರ್, ಕೋಚಿ ಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ ಮುಂತಾದವರಿದ್ದರು.