ವಿಜಯವಾಣಿ ಸುದ್ದಿಜಾಲ ಕೋಲಾರ
ಮಾನಸಿಕ ಖಿನ್ನತೆ, ಪ್ರೇಮ ವೈಪಲ್ಯ ಮತ್ತಿತರ ಕಾರಣಗಳಿಂದ ಭಾರತದಲ್ಲಿ ವರ್ಷಕ್ಕೆ ೧.೩೪ ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಮಾನಸಿಕ ಆರೋಗ್ಯದ ಕುರಿತ ತಪ್ಪು ಕಲ್ಪನೆ ಹೋಗಲಾಡಿಸಿ, ಚಿಕಿತ್ಸೆ ನೀಡಿದರೆ ಗುಣಮುಖರಾಗಬಹುದು ಎಂಬ ಸತ್ಯವನ್ನು ಶಿಕ್ಷಕರು ಸಮಾಜಕ್ಕೆ ತಿಳಿಸಬೇಕೆಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ತಾಲ್ಲೂಕಿನ ಪ್ರೌಢಶಾಲೆಗಳ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯದ ಕುರಿತ ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ, ಸಾಮಾನ್ಯ ವಿಧದ ಮಾನಸಿಕ ಕಾಯಿಲೆಯಿಂದ ಶೇ.೧೦ ಮಂದಿ ಬಳಲುತ್ತಿದ್ದಾರೆ ಎಂದು ತಿಳಿಸಿದರು.
ಮಾನಸಿಕ ರೋಗಿಗಳನ್ನು ಹುಚ್ಚರು ಎನ್ನುವಂತಿಲ್ಲ ಚಿತ್ತವಿಕಲತೆ ಎಂದು ಕರೆಯಬೇಕಾಗಿದೆ, ದೆವ್ವ, ಭೂತ, ಗಾಳಿ ಎಂಬ ಮೂಢನಂಬಿಕೆಯಿAದ ಹೊರಬರಬೇಕು, ಮಾನಸಿಕ ಆರೋಗ್ಯ ರಕ್ಷಣೆಗೆ ವೈದ್ಯರ ಸಲಹೆ, ಚಿಕಿತ್ಸೆ ಪಡೆಯಬೇಕು, ಸಮಾಜಕ್ಕೆ ಮಾನವ ಸಂಪನ್ಮೂಲವನ್ನು ಸಿದ್ದಪಡಿಸುವ ಶಿಕ್ಷಕರ ಜವಾಬ್ದಾರಿ ಅಧಿಕವಾಗಿದೆ ಎಂದರು.
ಮಾನಸಿಕ ರೋಗಿಗಳ ಕುರಿತು ಕೀಳಿರಿಮೆ ತೋರುವಂತಿಲ್ಲ, ಅವರಿಗೆ ಆತ್ಮಸ್ಥೆöÊರ್ಯ ತುಂಬುವ ಮೂಲಕ ಅವರ ಮಾತು ಆಲಿಸಿ ಧೈರ್ಯ ತುಂಬುವ ಕೆಲಸ ಮಾಡಬೇಕಾಗುತ್ತದೆ. ಮಾನಸಿಕ ರೋಗಿಗಳ ಹಿತ ಕಾಯಲು ೧೯೮೭ ರಲ್ಲಿ ಮೆಂಟಲ್ ಹೆಲ್ತ್ ಆಕ್ಟ್ ಜಾರಿಗೆ ತರಲಾಗಿದೆ. ಪ್ರತಿ ಜಿಲ್ಲಾಕೇಂದ್ರದಲ್ಲೂ ಮಾನಸಿಕ ಆರೋಗ್ಯ ಘಟಕವಿದ್ದು, ತಜ್ಞರ ವೈದ್ಯರಿದ್ದಾರೆ ಎಂದರು.
ಹಿರಿಯ ಮನೋವೈದ್ಯೆ ಡಾ.ವಿಜೇತಾದಾಸ್ ಮಾನಸಿಕ ಆರೋಗ್ಯದ ಕುರಿತು ಉಪನ್ಯಾಸ ನೀಡಿ, ಮಾನಸಿಕ ರೋಗಿಗಳನ್ನು ಕೀಳಾಗಿ ನೋಡುವ ಅಗತ್ಯವಿಲ್ಲ. ಸಂಶೋಧನೆಗಳ ಪ್ರಕಾರ ಮಾನಸಿಕ ಅಸ್ವಸ್ಥರಲ್ಲಿನ ಕ್ರೂರತ್ವಕ್ಕಿಂತ ೨೦ ಪಟ್ಟು ಹೆಚ್ಚು ಕ್ರೂರತ್ವ ಸಾಮಾನ್ಯ ಜನರಲ್ಲಿ ಇರುತ್ತದೆ ಎಂದು ತಿಳಿಸಿದರು.
೧೫ ರಿಂದ ೨೫ ವರ್ಷ ವಯಸ್ಸಿನವರಲ್ಲಿ ಅತಿ ಹೆಚ್ಚಾಗಿ ಸ್ಕಿಜ್ಹೋಫ್ರೀನಿಯಾ ಹೆಚ್ಚು ಕಾಣಿಸಿಕೊಳ್ಳುತ್ತದೆ, ಪದೆ ಪದೇ ವ್ಯಕ್ತಿ ತೀವ್ರತರನಾದ ಸಂಕಷ್ಟಗಳಿಗೆ ಸಿಲುಕಿದಾಗ ಈ ಕಾಯಿಲೆ ಬರಬಹುದು, ಇದಕ್ಕೆ ಬಡವರು, ಶ್ರೀಮಂತರು ಎಂಬ ಬೇಧವಿಲ್ಲ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಮಾತನಾಡಿ, ಕ್ರಿಯಾಶೀಲತೆ, ವ್ಯಾಯಾಮ, ಧ್ಯಾನ, ಕೆಲಸದಲ್ಲಿ ಚಟುವಟಿಕೆಯಿದ್ದರೆ ಖಂಡಿತಾ ಮಾನಸಿಕ ಆರೋಗ್ಯ ರಕ್ಷಣೆ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಆಯುಷ್ಮಾನ್ ಭಾರತ ಜಿಲ್ಲಾ ಸಂಯೋಜಕಿ ಡಾ.ವಸುಂಧರ ಮತ್ತಿತರರು ಉಪಸ್ಥಿತರಿದ್ದು, ತಾಲ್ಲೂಕಿನ ಪ್ರತಿ ಪ್ರೌಢಶಾಲೆಯಿಂದ ತಲಾ ಮೂವರು ಶಿಕ್ಷಕರು ಈ ಕಾರ್ಯಾಗಾರರದಲ್ಲಿ ಪಾಲ್ಗೊಂಡಿದ್ದರು.
ಚಿತ್ರ ೧೩ ಕೆ.ಎಲ್.ಆರ್. ೦೪ : ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕಿನ ಪ್ರೌಢಶಾಲೆಗಳ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯದ ಕುರಿತ ಅರಿವು ಕಾರ್ಯಾಗಾರಕ್ಕೆ ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ಚಾಲನೆ ನೀಡಿದರು.