ಬಾಳೆಹೊನ್ನೂರು: ಸಂಘ, ಸಂಸ್ಥೆಗಳನ್ನು ಮುನ್ನಡೆಸುವ ಪದಾಧಿಕಾರಿಗಳಿಗೆ ಅವರ ಕುಟುಂಬದವರ ಪ್ರೋತ್ಸಾಹವಿಲ್ಲದೆ ಸಂಘಗಳನ್ನು ಮುನ್ನಡೆಸಿ ಸಾಧನೆ ಮಾಡುವುದು ಅಸಾಧ್ಯ ಎಂದು ಜೇಸಿಐ ಅಧ್ಯಕ್ಷ ಬಿ.ಎಸ್.ಅಜಿತ್ ಹೇಳಿದರು.
ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯ ಜೇಸಿ ಸಪ್ತಾಹದ 5ನೇ ದಿನದ ಕಾರ್ಯಕ್ರಮದ ಅಂಗವಾಗಿ ಜೇಸಿಐ ಪರಿವಾರದ ಕುಟುಂಬಸ್ಥರನ್ನು ಸನ್ಮಾನಿಸಿ ಅವರು ಮಾತನಾಡಿದರು.·ಯಾವುದೇ ಸಂಘ ಸಂಸ್ಥೆಗಳ ಅಧ್ಯಕ್ಷ ಸೇರಿದಂತೆ ಪದಾಧಿಕಾರಿಗಳಾಗಿ ಯಶಸ್ವಿಯಾಗಿ ಅವುಗಳನ್ನು ನಡೆಸಿ ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ನಡೆಸಲು ಅವರ ಕುಟುಂಬಸ್ಥರ ಸಹಕಾರ ಅಗತ್ಯ. ಇಲ್ಲದಿದ್ದಲ್ಲಿ ಪೂರ್ಣ ಪ್ರಮಾಣದ ಯಶಸ್ಸು ಸಾಧ್ಯವಿಲ್ಲ ಮತ್ತು ಕಾರ್ಯಕ್ರಮಗಳು ಸಮಾಜಕ್ಕೆ ತಲುಪಲು ಆಗುವುದಿಲ್ಲ ಎಂದರು.
ಕಾರ್ಯಕ್ರಮದ ಅಂಗವಾಗಿ ಹುಯಿಗೆರೆಯ ಸತ್ಯಭಾಮಾ ಜಗದೀಶ್ ಅವರಿಗೆ ಸನ್ಮಾನಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಮಾಗುಂಡಿಯ ರಫೀಕ್‌ಗೆ ಸೆಲ್ಯೂಟ್‌ದ ಸೈಲೆಂಟ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು·ನಿಕಟಪೂರ್ವ ಅಧ್ಯಕ್ಷ ರಚನ್ ಜೆ.ಹುಯಿಗೆರೆ, ಕಾರ್ಯದರ್ಶಿ ನಿಖಿಲ್ ಕಾನ್ಕೆರೆ, ಪ್ರಮುಖರಾದ ಸುಧಾಕರ್, ಸದಸ್ಯರಾದ ಸವಿನ್, ಯಶ್‌ಪಾಲ್, ಎಚ್.ಎನ್.ಅಜಿತ್, ದುರ್ಗಾಚರಣ್, ಶೃಜಿತ್, ಸುನೀಲ್, ಶ್ರೇಯಸ್, ಜೇಸಿ ಸದಸ್ಯೆ ಪೂಜಾ ರಚನ್, ಜ್ಯೂನಿಯರ್ ಜೇಸಿಯ ಇವಾಂಕ ಇತರರಿದ್ದರು.